ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಡಿಭಾಗದ ಹೋಬಳಿ ಕೇಂದ್ರವಾಗಿರುವ ಹಂದನಕೆರೆಯ ಅಜ್ಜನಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ಮಣ್ಣು ರಸ್ತೆ ಸಂಪೂರ್ಣ ಹದಗೆಟ್ಟಿರುವುದರಲ್ಲದೆ, ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಂತು ಕೆಸರುಂಟಾಗಿ ಕೆಸರ ನಡುವೆಯೇ ಗ್ರಾಮದ ಜನ ಸಂಚಾರಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ.
ಪಂಚನಹಳ್ಳಿಗೆ ಹೋಗುವ ರಸ್ತೆಯಿಂದ ಅಜ್ಜನಪಾಳ್ಯಕ್ಕೆ ಹೋಗುವ ಮಣ್ಣುರಸ್ತೆಯಲ್ಲಿ ಕೆಸರುಂಟಾಗಿ ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿದೆ. |
ದೊಡ್ಡಎಣ್ಣೆಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಅಜ್ಜನಪಾಳ್ಯ ಗ್ರಾಮದಲ್ಲಿ ಸುಮಾರು ೪೫ಕ್ಕೂ ಅಧಿಕ ಮನೆಗಳಿದ್ದು ಹತ್ತಾರೂ ಸಮಸ್ಯೆಗಳಿಂದ ಕೂಡಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಣ್ಣು ರಸ್ತೆ ಹಾಳಾಗಿದೆ, ಕುಡಿಯುವ ನೀರಿನ ಸಮಸ್ಯೆ, ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಇಲ್ಲಿನ ಜನ ತೊಂದರೆ ಅನುಭವಿಸುವಂತಾಗಿದೆ. ತಾಲ್ಲೂಕಿನ ಗಡಿ ಗ್ರಾಮವಾಗಿದ್ದು ತಮ್ಮ ಊರಿನ ಬಗ್ಗೆ ಜನಪ್ರತಿನಿಧಿಗಳು ಗಮನಕೊಟ್ಟಿಲ್ಲ, ಸ್ಥಳೀಯ ಆಡಳಿತದವರೂ ಸಹ ಇತ್ತ ಲಕ್ಷ್ಯ ತೋರಿಲ್ಲ, ಈ ಬಗ್ಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂಬುದು ಅಜ್ಜನಪಾಳ್ಯ ಸಾರ್ವಜನಿಕರ ದೂರಾಗಿದೆ.
-----------
ನಮ್ಮೂರಿಗೆ ಹೋಗಲು ಇರುವ ಪ್ರಮುಖ ದಾರಿ ಇದಾಗಿದ್ದು, ಇಂದಿಗೂ ಡಾಂಬರ್, ಜಲ್ಲಿಯಿಲ್ಲದೆ ಮಣ್ಣು ರೋಡ್ ಆಗಿ ಉಳಿದಿದೆ. ಮಳೆಬಂದಾಗ ಮಣ್ಣ ರೋಡ್ ಹೋಗಿ ಕೆಸರು ರೋಡ್ ಆಗುತ್ತೆ,ಅನೇಕಸಲ ಇಲ್ಲಿ ಸಂಚರಿಸುವ ಬೈಕ್ ಸವಾರರು ಆಯತಪ್ಪಿ ಬಿದ್ದು ಮೈಗೆಲ್ಲ ಕೆಸರು ಮೆತ್ತಿಸಿಕೊಂಡಿದ್ದಾರೆ, ಶೀಘ್ರವೇ ಈ ರಸ್ತೆಗೆ ಡಾಂಬರ್ ಹಾಕಿಸಿಕೊಟ್ಟಲ್ಲಿ ಗ್ರಾಮದ ಜನಕ್ಕೆ ಸಹಕಾರಿಯಾಗಲಿದೆ : ಫೋಟೋಗ್ರಾಫರ್ ಸುರೇಶ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ