ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಭಾನುವಾರ ಮುಂಜಾನೆಯಿಂದ ಬಿಟ್ಟುಬಿಡದೆ ಸೊನೆ ಮಳೆ ಸುರಿಯಿತು. ಪಟ್ಟಣದಲ್ಲಿ ಸೊನೆಮಳೆಯಿಂದಾಗಿ ಅಂಗಡಿ ಮುಗ್ಗಟ್ಟಿನ ವಹಿವಾಟು ವಿರಳವಾಗಿತ್ತು.
ಬೆಳಿಗ್ಗಿನಿಂದಲೇ ಸೊನೆ ಮಳೆ ಬರುತ್ತಿದ್ದರಿಂದ ಜನರು ಮನೆಯಿಂದ ಹೇಗಪ್ಪ ಹೊರ ಹೋಗೋದು ಎಂಬಂತಾಗಿ ಮನೆಯಲ್ಲಿರುವಂತಾಗಿದ್ದರೂ ಸಹ ಕೆಲವರು ಛತ್ರಿ ಆಶ್ರಯದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದು ಕಂಡುಬಂತು. ಮುಂಜಾನೆಯಿಂದಲೂ ಸೂರ್ಯ ರಶ್ಮಿಯಿಲ್ಲಂತಾಗಿ ಶೀತದ ವಾತಾವರಣ ನಿರ್ಮಾಣವಾಗಿತ್ತು. ಪಟ್ಟಣದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆ ಸೇರಿದಂತೆ ವಿವಿಧೆಡೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿತ್ತು. ಬಸ್ ನಿಲ್ದಾಣದಲ್ಲಿ ನೀರು ಜನ ಅದರ ನಡುವೆಯೇ ನಡೆದಾಡುವಂತಾಗಿತ್ತು.
ಹೋಬಳಿಯ ವಿವಿಧೆಡೆ ರೈತರು ಹೆಸರುಗಿಡನ್ನು ಕಿತ್ತಿದ್ದು ಅದನ್ನು ಒಣಗಿಸಲು ಮುಂದಾಗಿದ್ದರಾದರೂ ಬಿಸಿಲಿಲ್ಲದ ಕಾರಣ ಕೈಕಟ್ಟಿಕೂರುವಂತಾಗಿ, ಹೀಗಾದರೆ ಹೆಸರನ್ನು ಯಾವರೀತಿ ಒಕ್ಕಣೆ ಮಾಡುವುದು, ಮಳೆ ಬರುತ್ತಲೇ ಇದ್ದರೆ ಹೆಸರುಕಾಳಿಗೆ ಶೀತತಗುಲಿ ಅವು ಕಪ್ಪಾಗುತ್ತವೆಂಬ ಆತಂಕ ರೈತರಲ್ಲಿ ಉಂಟಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ