ಹುಳಿಯಾರು : ಹೋಬಳಿ ಬೋರನಕಣಿವೆಯ ಸೇವಾಚೇತನದಲ್ಲಿನ ಶ್ರೀಸಾಯಿಬಾಬ ಮಂದಿರದಲ್ಲಿ ಹುಣ್ಣಿಮೆ ಅಂಗವಾಗಿ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು.
ಹುಳಿಯಾರು ಸಮೀಪದ ಬೋರನಕಣಿವೆಯ ಸಾಯಿಬಾಬ ಮಂದಿರದಲ್ಲಿ ಹುಣ್ಣಿಮೆ ಅಂಗವಾಗಿ ಸತ್ಯನಾರಾಯಣ ಪೂಜೆ ನಡೆಸಲಾಯಿತು. |
ಸಾಯಿಬಾಬ ಮೂರ್ತಿಗೆ ಅಭಿಷೇಕ,ಅರ್ಚನೆ ಹಾಗೂ ಸತ್ಯನಾರಾಯಣ ಪೂಜೆ ನಡೆದ ನಂತರ ಸಾಯಿಬಾಬಗೆ ಕಾಕಡಾರತಿ ಹಾಗೂ ಮಹಾಮಂಗಳಾರತಿ ಮಾಡಿ ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು. ಹುಳಿಯಾರು ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಹುಳಿಯಾರಿನ ಬನಶಂಕರಿ ದೇವಾಲಯದಲ್ಲಿ ಬನಶಂಕರಿ ದೇವಿಗೆ ಶ್ರೀಧರ್ ಅವರ ಪೌರೋಹಿತ್ಯದಲ್ಲಿ ವಿಶೇಷ ಪೂಜೆ, ಅರ್ಚನೆ ನಡೆಯಿತು. ಕೆಂಕೆರೆ ಸಮೀಪದ ಪುರದಮಠದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ, ಪೂಜೆ ನಡೆದು ಆಗಮಿಸಿದ ಭಕ್ತಾಧಿಗಳಿಗೆ ಉಟದ ವ್ಯವಸ್ಥೆ ನಡೆಸಲಾಯಿತು. ಹುಳಿಯಾರು, ಕೆಂಕೆರೆ, ಬರದಲೇಪಾಳ್ಯ, ಹೊನ್ನಯ್ಯನಪಾಳ್ಯ, ಕಂಪನಹಳ್ಳಿ ಭಾಗದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ