ಜಿಲ್ಲೆಯಲ್ಲೇ ದೊಡ್ಡ ಪಂಚಾಯ್ತಿಯಾಗಿರುವ ಹುಳಿಯಾರು ಗ್ರಾ.ಪಂ.ಗೆ ನಾನು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದ್ದು , ಪಟ್ಟಣದ ಸ್ವಚ್ಚತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೆಚು ಒತ್ತುಕೊಡುವೆ ಎಂದು ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಗೀತಾಪ್ರದೀಪ್ ತಿಳಿಸಿದರು.
ಹುಳಿಯಾರು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗೀತಾಪ್ರದೀಪ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಅವರು ತಮ್ಮ ಜೆಡಿಎಸ್ ಬೆಂಬಲಿಗರೊಂದಿಗೆ. |
ಗ್ರಾ.ಪಂ. ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಅಧ್ಯಕ್ಷರಾಗಿ ಆಯ್ಕೆಯಾಗಲು ಶಾಸಕ ಸಿ.ಬಿ.ಸುರೇಶ್ ಬಾಬು ಹಾಗೂ ಗ್ರಾ.ಪಂ.ಯ ಜೆಡಿಎಸ್ ಬೆಂಬಲಿತ ಸದಸ್ಯರುಗಳ ಬಹುಮತವೇ ಕಾರಣವಾಗಿದೆ. ಇದರೊಟ್ಟಿಗೆ ಕಾಂಗ್ರೆಸ್ ನ ಸದಸ್ಯರು ಸಹ ತಮಗೆ ಬೆಂಬಲ ನೀಡಿದ್ದರಿಂದ ಅವಿರೋಧವಾಗಿ ಪಂಚಾಯ್ತಿ ಅಧ್ಯಕ್ಷರಾಗಲು ಸಹಕಾರಿಯಾಯಿತು ಎಂದರು.
ಉಪಾಧ್ಯಕ್ಷ ಗಣೇಶ್ ಮಾತನಾಡಿ , ಪಂಚಾಯ್ತಿಯ ಒಟ್ಟು ೩೯ ಸದಸ್ಯರ ಪೈಕಿ ೨೮ ಮಂದಿ ಜೆಡಿಎಸ್ ಬೆಂಬಲಿತರಾಗಿದ್ದು , ಕಾಂಗ್ರೆಸ್ ನವರು ಸಹ ತಮಗೆ ಬಾಹ್ಯ ಬೆಂಬಲ ನೀಡಿದ್ದಾರೆ, ಜೆಡಿಎಸ್ ನ ಎಲ್ಲಾ ಸದಸ್ಯರ ಒಮ್ಮತದಿಂದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದ್ದು ಸಾರ್ವಜನಿಕರಲ್ಲಿ ಯಾವುದೇ ಗೊಂದಲಬೇಡ ಎಂದರು.
ಈ ವೇಳೆ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾದ ಅಶೋಕ್ ಬಾಬು, ದಯಾನಂದ್,ಶಂಕರ್,ರಾಘವೇಂದ್ರ,ರೇಣುಕಮ್ಮ,ಗೀತಾಬಾಬು,ಪಟಾಕಿಶಿವಣ್ಣ, ಹೇಮಂತ್,ಇಂದ್ರಕಲಾ,ಬಡ್ಡಿಪುಟ್ಟರಾಜು, ಮಾಮಾಜಿಗುನಿ,ಕೆಂಪಮ್ಮ, ಅಹಮದ್ ಖಾನ್,ಪುಟ್ಟಿಬಾಯಿ,ನಾಗರಾಜು,ಡಿಶ್ ಬಾಬು ಸೇರಿದಂತೆ, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ರವಿರಂಗನಾಥ್(ಗೌಡಿ) ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ