ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಸುಕ್ಷೇತ್ರ ಶ್ರೀಚನ್ನಬಸವೇಶ್ವರ ಸ್ವಾಮಿಯ ಪುರದಮಠದ ಪುರಾತನ ಗವಿಯಲ್ಲಿ ಲೋಕಕಲ್ಯಾಣಾರ್ಥ ಹಾಗೂ ವಿಶ್ವಶಾಂತಿಗಾಗಿ ಇದೇ ತಾ.೬ರ ಸೋಮವಾರದಿಂದ ತಾ.೧೦ರ ಶುಕ್ರವಾರದವರೆಗೆ ಕುಪ್ಪೂರು ಗದ್ದಿಗೆ ಮಠದ ಶ್ರೀ ಡಾ.ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಅವರ ನೇತೃತ್ವದಲ್ಲಿ ಧ್ಯಾನ,ಜಪ, ಭಜನೆ ಸೇರಿದಂತೆ ಇನ್ನಿತರ ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ.
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಪುರಮಠದ ಗವಿಯಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದು. |
ಈ ಕಾರ್ಯದಲ್ಲಿ ನೂರಾರು ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಳ್ಳಲಿದ್ದು ರಾತ್ರಿ ಸಮಯದಲ್ಲಿ ಅಲ್ಲಿಯೇ ತಂಗುವ ವ್ಯವಸ್ಥೆ ಮಾಡಿದ್ದು, ಪುರದಮಠದಲ್ಲಿರುವ ಗವಿಗಳವರೆಗೆ ಬೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡೂವಂತೆ ತಾ.ಪಂ.ಸದಸ್ಯ ಕೆಂಕೆರೆ ನವೀನ್ ಮನವಿ ಮಾಡಿದ್ದಾರೆ.
ಪುರದಮಠದ ಗವಿಗಳ ಸ್ವಲ್ಪ ದೂರದಲ್ಲೇ ವಿದ್ಯುತ್ ಲೈನ್ ಇದ್ದು ಅದರ ಮೂಲಕ ಗವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದಾಗಿದ್ದು ಬೆಸ್ಕಾಂನ ಸೆಕ್ಷನ್ ಅಫೀಸರ್ ಈ ಬಗ್ಗೆ ಗಮನಹರಿಸಿ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಲ್ಲಿ ಧಾರ್ಮಿಕ ಕಾರ್ಯಕ್ಕೆ ಹೆಚ್ಚಿನ ನೆರವು ನೀಡಿದಂತಾಗುತ್ತದೆ. ಕೆಂಕೆರೆ ಗ್ರಾಮದ ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸುತ್ತಿದ್ದು ಗವಿಗಳಿಗೆ ೫ ದಿನ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವಂತೆ ಮನವಿಯಲ್ಲಿ ಬರೆದಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ