ಆಧುನಿಕ ಪ್ರಪಂಚದಲ್ಲಿ ಹೆಚ್ಚೆಚ್ಚು ಕೈಗಾರಿಕೆಗಳು ತಲೆಯೆತ್ತುತ್ತಿದ್ದು, ಪ್ರಕೃತಿದತ್ತವಾದ ನೈಸರ್ಗಿಕ ಸಂಪನ್ಮೂಲಗಳು ನಶಿಸಿಹೋಗುವೆ. ಇದೇರೀತಿ ಮುಂದುವರಿದಂತೆ ಮುಂದಿನ ದಿನಗಳಲ್ಲಿ ಸಂಪನ್ಮೂಲಗಳ ಕೊರತೆ ಉಂಟಾಗಬಹುದು ಎಂದು ದೊಡ್ಡಎಣ್ಣೆಗೆರೆ ಶಾಲೆಯ ಶಿಕ್ಷಕ ಕೆ.ಎಸ್.ನಾಗರಾಜು ವಿಷಾಧಿಸಿದರು.
ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ನಡೆದ ಕನ್ನಡಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಕಸಾಪದ ತ.ಶಿ.ಬಸವಮುರ್ತಿಗಳು ಜಾನಪದ ಹಾಡುಗಳನ್ನು ಶುಶ್ರಾವ್ಯವಾಗಿ ಹಾಡಿದರು. |
ಹುಳಿಯಾರು ಹೋಬಳಿ ಕೆಂಕೆರೆಯ ಸರ್ವೆ ಇಲಾಖೆಯ ಬಾಲಾಜಿ ಸಿಂಗ್ ಅವರ ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಸಂಜೆ ಅಯೋಜಿಸಿದ್ದ ಕನ್ನಡಕವಿಕಾವ್ಯ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾನವ ತನ್ನ ಸ್ವಂತಿಕೆಯನ್ನು ಮರೆತು ಪ್ರತಿಯೊಂದಕ್ಕು ಯಂತ್ರಗಳನ್ನು ಬಳಸುತ್ತಾ ಯಾಂತ್ರಿಕವಾಗಿ ಜೀವನ ಸಾಗಿಸುತ್ತಿದ್ದಾನೆ. ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ದುಷ್ಪರಿಣಾಮಗಳು ಉಂಟಾಗಲಿದೆ ಎಂದರು. ಸಾವಿರಾರು ವರ್ಷದ ಇತಿಹಾಸವಿರುವ ಕನ್ನಡನಾಡು,ನುಡಿ, ಸಾಹಿತ್ಯದ ಬಗ್ಗೆ ತಿಳಿಯುವುದು ಕನ್ನಡಿಗರಾದ ನಮ್ಮ ಕರ್ತವ್ಯವಾಗಿದ್ದು ಆ ಬಗ್ಗೆ ತಿಳಿಸುವ ಕಾರ್ಯವನ್ನು ಕಸಾಪ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಹಾಲಪ್ಪ ತಮ್ಮ ಉಪನ್ಯಾಸದಲ್ಲಿ ಡಿವಿಜಿಯವರ ಕವಿಕಾವ್ಯ ಚಿಂತನೆ ಕುರಿತು ವಿವರ ನೀಡಿದರು. ಡಿವಿಜಿಯವರು ನಡೆದುಬಂದ ಹಾದಿ ಹಾಗೂ ಅವರ ಸಾಹಿತ್ಯ ರಚನೆಯ ಮಹತ್ವದ ಬಗ್ಗೆ ವಿಚಾರಗಳನ್ನು ತಿಳಿಸಿದರಲ್ಲದೆ ಮಂಕುತಿಮ್ಮನ ಕಗ್ಗದ ಕೆಲ ತುಣುಕುಗಳನ್ನು ವಿವರಿಸಿದರು.
ಕಸಾಪದ ತ.ಶಿ.ಬಸವಮುರ್ತಿಗಳು ಜಾನಪದ ಹಾಡುಗಳನ್ನು ಹಾಡುವ ಮೂಲಕ ಅವುಗಳ ಮಹತ್ವ ತಿಳಿಸಿದರು. ಈ ವೇಳೆ ಪಿಡಿಓ ದೇವರಾಜ್, ಉಪನ್ಯಾಸಕ ಹೊನ್ನಪ್ಪ,ಶಿಕ್ಷಕ ಕೃಷ್ಣಸಿಂಗ್,ಗಜೇಂದ್ರ, ಪೂಜಾರ್ ಅಚ್ಚಣ್ಣ ಹಾಗೂ ಚನ್ನಬಸವೇಶ್ವರ ಯುವಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ