ವಿಷಯಕ್ಕೆ ಹೋಗಿ

ಥಿಯೋಸಫಿಯಲ್ಲಿ ಉಪನ್ಯಾಸ

ದಿವಂಗತ ಹೆಚ್.ಎ. ಭಾಸ್ಕರಾಚಾರ್ ಅವರ ಸ್ಮರಣಾರ್ಥ ಪಟ್ಟಣದ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯಲ್ಲಿ ಸಾರ್ವಜನಿಕ ಸಮಾವೇಶ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಹುಳಿಯಾರಿನ ಥಿಯಸಾಫಿಕಲ್ ಸೊಸೈಟಿಯಲ್ಲಿ ನಡೆದ ಉಪನ್ಯಾಸಕ ಕಾರ್ಯಕ್ರಮದಲ್ಲಿ ಸೊಸೈಟಿಯ ಎಂ.ಆರ್.ಗೋಪಾಲ್ ಮಾತನಾಡಿದರು.
ಸೊಸೈಟಿಯ ಅಧ್ಯಕ್ಷ ಹೆಚ್.ಬಿ.ಗೋಪಾಲಕೃಷ್ಣ ಅಧ್ಯಕ್ಷತೆವಹಿಸಿದ್ದು, ಶ್ರೀರಾಂಪುರದ ಡಾ.ಗೋಪಾಲಕೃಷ್ಣ ಅವರು "ನಿನ್ನ ಭವಿಷ್ಯತ್ತಿಗೆ ಒಡೆಯನಾರು" ವಿಷಯ ಕುರಿತು ಉಪನ್ಯಾಸ ನೀಡಿದರು. ಎಂ.ಆರ್.ಗೋಪಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಈ ವೇಳೆ ಸೊಸೈಟಿಯ ಮಹೇಶಾಚಾರ್,ವಕೀಲ ಸತೀಶ್, ಶಿಕ್ಷಕ ಜಗದೀಶ್,ಸುದರ್ಶನ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು