೧೬ಕ್ಕೂ ಅಧಿಕ ಮಕ್ಕಳಿಗೆ ಗಾಯ
---------------------------------
ಗಾಯಗೊಂಡಮಕ್ಕಳು ನೋವು ತಾಳಲಾರದೆ ರೋಧಿಸುತ್ತಿದ್ದು ನೋಡುಗರ ಮನಕಲಕುವಂತೆ ಮಾಡಿತ್ತು. ಪಿಎಸೈ ಪ್ರವೀಣ್ ಕುಮಾರ್ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
---------------------------------
ಹುಳಿಯಾರು : ಕ್ರೀಡಾಕೂಟಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನವೊಂದು ಚಾಲಕ ಅಜಾಗರೂಕತೆಯಿಂದ ಪಲ್ಟಿಹೊಡೆದ ಪರಿಣಾಮ ಆಟೋದಲ್ಲಿದ್ದ ೧೬ ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ಹೋಬಳಿಯ ಹೊಸಹಳ್ಳಿಪಾಳ್ಯ ಹಾಗೂ ಹೊಸಹಳ್ಳಿ ನಡುವೆ ಬುಧವಾರ ಘಟಿಸಿದೆ.
ಅಪಘಾತದಲ್ಲಿ ಗಾಯಗೊಂಡ ಮಕ್ಕಳು ನೋವು ತಾಳಲಾರದೆ ರೋಧಿಸುತ್ತಿರುವುದು. |
ಯಳನಡುವಿನಲ್ಲಿ ಬುಧವಾರದಿಂದ ಪ್ರಾರಂಭವಾದ ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಸೀಗೆಬಾಗಿಯ ಗ್ರಾಮಾಂತರ ವಿದ್ಯಾಪೀಠ ಫ್ರೌಡಶಾಲೆಯ ವಿದ್ಯಾರ್ಥಿಗಳನ್ನು ಟಾಟಾ ಏಸ್ ವಾಹನದಲ್ಲಿ ಹೊಸಹಳ್ಳಿ ಮಾರ್ಗವಾಗಿ ಕರೆಕೊಂಡು ಹೋಗುವಾಗ ಈ ಅವಘಡ ಸಂಭವಿಸಿದೆ. ಆಟೋದಲ್ಲಿ ಒಬ್ಬ ಶಿಕ್ಷಕ ಸೇರಿ ೩೦ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿದ್ದು ಆ ಪೈಕಿ ಶಿಕ್ಷಕನಿಗೆ ತಲೆಗೆ ಪೆಟ್ಟಾದರೆ, ೧೦ನೇತರಗತಿಯ ಸಂತೋಷ ವಿದ್ಯಾರ್ಥಿಯ ಕೈ ಮುರಿದುಕೊಂಡಿದೆ. ಉಳಿದ ಹತ್ತನ್ನೆರಡು ಮಕ್ಕಳಿಗೆ ತಲೆ,ಮುಖ,ಕೈಕಾಲು ಭಾಗದಲ್ಲಿ ಗಾಯಗಳಾಗಿವೆ. ಆಟೋ ಚಾಲಕ ಲಕ್ಷ್ಮಿಪುರದ ನಂದ ಎಂಬಾತನಾಗಿದ್ದು ಪರಾರಿಯಗಿದ್ದಾನೆ.
ಅಪಘಾತದಿಂದ ಗಾಯಗೊಂಡ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ೧೦೮ ವಾಹನದಲ್ಲಿ ಕಳುಹಿಸುತ್ತಿರುವುದು. |
ಅಪಘಾತದಿಂದ ಗಾಯಗೊಂಡ ಮಕ್ಕಳನ್ನು ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದ ವೇಳೆ ವೈದ್ಯರಿಲ್ಲದೆ ಪೋಷಕರು ಪರದಾಡುವಂತಾಗಿತ್ತು. ಇದನ್ನು ಕಂಡ ಗ್ರಾ.ಪಂ.ಸದಸ್ಯರು ಹಾಗೂ ಸಾರ್ವಜನಿಕರು ಡಿಹೆಚ್ ಓ ಹಾಗೂ ಟಿ.ಎಚ್.ಓ.ವಿರುದ್ದ ಪ್ರತಿಭಟನೆ ಕೂಗಿದರು. ಆಸ್ಪತ್ರೆಯಲ್ಲಿದ್ದ ನರ್ಸ್ ಗಳು ಮಕ್ಕಳಿಗೆ ಪ್ರಥಮ ಚಿಕಿತ್ಸೆ ಮಾಡಿ ಕೆಲ ಮಕ್ಕಳನ್ನು ಚಿ.ನಾ.ಹಳ್ಳಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಗಾಯಗೊಂಡಮಕ್ಕಳು ನೋವು ತಾಳಲಾರದೆ ರೋಧಿಸುತ್ತಿದ್ದು ನೋಡುಗರ ಮನಕಲಕುವಂತೆ ಮಾಡಿತ್ತು. ಪಿಎಸೈ ಪ್ರವೀಣ್ ಕುಮಾರ್ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ