ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಒವರ್ ಹೆಡ್ ಟ್ಯಾಂಕ್ ಸುತ್ತ ಮುಳ್ಳುಗಿಡಗಳು ಬೆಳೆದಿದ್ದು ಅನೈರ್ಮಲ್ಯ ಉಂಟಾಗಿದ್ದರೂ ಸಹ ಈ ಬಗ್ಗೆ ಸ್ಥಳೀಯ ಆಡಳಿತದವರು ಗಮನಹರಿಸದ ಮೌನವಹಿಸಿದ್ದಾರೆ.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಟ್ಯಾಂಕ್ ಸುತ್ತ ಬೆಳೆದಿರುವ ಮುಳ್ಳುಪೊದೆ. |
ಗ್ರಾಮಕ್ಕೆ ಕಳೆದ ಹತ್ತಾರೂ ವರ್ಷದಿಂದ ನೀರು ಪೂರೈಸುತ್ತಿರುವ ಈ ಟ್ಯಾಂಕ್ ಸುತ್ತಾ ಮುಳ್ಳು ಗಿಡಗಳು ಬೆಳೆದು ನೀರುಗಂಟಿ ನೀರು ಬಿಡಲು ಆ ಗಿಡಗಳ ಮಧ್ಯೆಯೇ ಕೂತು ಕಂಟ್ರೋಲ್ ತಿರುಗಿಸಿ ನೀರು ಬಿಡುವಂತಾಗಿದೆ. ಕೆಲವೊಮ್ಮೆ ಹೆಚ್ಚುವಾರಿಯಾದ ನೀರು ಟ್ಯಾಂಕ್ ಹತ್ತಿರವೇ ನಿಂತು ಸೊಳ್ಳೆಗಳು ಹೆಚ್ಚಳವಾಗುವಂತಾಗಿದೆ. ಟ್ಯಾಂಕ್ ನ ಕೆಲ ಭಾಗದಲ್ಲಿ ಸಿಮೆಂಟ್ ಉದುರಿದ್ದು ಕಬ್ಬಿಣದ ಸರಳುಗಳು ಹೊರಕಾಣಿಸುತ್ತಿದ್ದು ಯಾವಾಗ ಏನಾಗುತ್ತದೋ ಎಂಬಂತಾಗಿದೆ. ಪಂಚಾಯ್ತಿ ಸದಸ್ಯರು ದಿನನಿತ್ಯ ಟ್ಯಾಂಕ್ ಅಕ್ಕಪಕ್ಕ ಸಂಚರಿಸುತ್ತಿದ್ದರೂ ಸಹ ಈ ಬಗ್ಗೆ ಗಮನಹರಿಸಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ.
ಪಂಚಾಯ್ತಿಯವರು ಈ ಬಗ್ಗೆ ಶೀಘ್ರವೇ ಗಮನಹರಿಸಿ ಟ್ಯಾಂಕ್ ಸುತ್ತಮುತ್ತ ಬೆಳೆದಿರುವ ಬೇಲಿಯನ್ನು ತೆರವುಗೊಳಿಸಿ ಸ್ವಚ್ಚ ಮಾಡುವುದರ ಜೊತೆಗೆ ಶಿಥಿಲವಾಗುತ್ತಿರುವ ಟ್ಯಾಂಕ್ ನ ಭಾಗವನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ