ವಿದ್ಯಾಭ್ಯಾಸ ಮುಗಿದ ಬಳಿಕ ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ದುಡಿಮೆ ಕೈಗೊಂಡು ಹಣ ಸಂಪಾದನೆ ಮಾಡುತ್ತಿದ್ದು , ತಾವು ಸಂಪಾದಿಸಿ ಹಣದಲ್ಲಿ ಸ್ವಲ್ಪಭಾಗವನ್ನು ಸಾಮಾಜಿಕ ಕಾರ್ಯಗಳಲ್ಲಿ ವಿನಿಯೋಗಿಸುವುದರಿಂದ ಸಮಾಜದಲ್ಲಿ ಹಿಂದುಳಿದವರ ಏಳ್ಗೆಗೆ ಸಹಕಾರಿಯಾಗಲಿದೆ ಎಂದು ಕಾಮನಬಿಲ್ಲು ಫೌಂಡೇಶನ್ ನ ಸ್ಟುಡಿಯೋ ರವಿ ತಿಳಿಸಿದರು.
ಹುಳಿಯಾರಿನ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕಾಮಬಿಲ್ಲು ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ಬಳಿಕ ತಮ್ಮ ಕೆಲಸ ಕಾರ್ಯಗಳತ್ತ ಗಮನಕೊಡುತ್ತಾ, ತಾವು ಓದಿದ ಶಾಲೆ,ಆಡಿಬೆಳೆದ ಊರನ್ನೇ ಮರೆತು, ನಗರದತ್ತ ಮುಖ ಮಾಡಿದವರು ಸಮಯ ಸಿಕ್ಕಾಗ ತಾವಿದ್ದ ಊರು, ತಾವು ಓದಿದ ಶಾಲೆಗೆ ತಮ್ಮಿಂದಾಗುವ ಸೇವೆಸಲ್ಲಿಸಿ ಎಂದರು. ಕಾಮನಬಿಲ್ಲು ಫೌಂಡೇಶನ್ ನಿಂದ ಪಟ್ಟಣದ ಎಲ್ಲಾಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಇಂತಹ ಸಾಮಾಜಿಕ ಕಾರ್ಯ ಮಾಡುವಂತಾಗಲಿ ಎಂದು ತಿಳಿಸಿದರು.
ಈ ವೇಳೆ ಪ್ರಾಂಶುಪಾಲ ಬಾಲಾಜಿ, ಕಾಮನಬಿಲ್ಲು ಫೌಂಡೇಶನ್ನ ಅಧ್ಯಕ್ಷ ಚನ್ನಕೇಶವ, ಪದಾಧಿಕಾರಿಗಳಾದ ಕಂಪನಹಳ್ಳಿ ಪ್ರಕಾಶ್, ಚೇತನ್ ಸೇರಿದಂತೆ ಉಪನ್ಯಾಸಕರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ