ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಿದ ನಂತರ ಸುಂಕ ವಸೂಲಿ

ಹುಳಿಯಾರು: ಇಲ್ಲಿನ ಬಸ್ ನಿಲ್ದಾಣದಲ್ಲಿನ ಬಸ್ ಶೆಲ್ಟರ್‌ನ ಸ್ಥಳದಲ್ಲಿ ಪ್ರಯಾಣಿಕರಿಗೆ ಕೂರಲು ಆಸನಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ನಂತರ ಫುಟ್‌ಪಾತ್ ಅಂಗಡಿಗಳ ಸುಂಕ ವಸೂಲಾತಿ ಗುತ್ತಿಗೆ ಹರಾಜು ನಡೆಸಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷ ಗಣೇಶ್ ತಿಳಿಸಿದರು.             ಹುಳಿಯಾರಿನ ಗ್ರಾಪಂ ಆವರಣದಲ್ಲಿ ನಡೆದ ಬಸ್ ಸುಂಕ ಮತ್ತು ಸಂತೆ ಸುಂಕ ವಸೂಲಾತಿ ಗುತ್ತಿಗೆ ಹರಾಜು ನಡೆಸುವ ವೇಳೆ ಆಗಮಿಸಿದ ಫುಟ್‌ಪಾತ್ ಅಂಗಡಿಯವರೊಂದಿಗೆ ಅವರು ಮಾತನಾಡಿದರು. ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಕಲ್ಪಿಸಿದ ನಂತರ ಬಸ್ ನಿಲ್ದಾಣದಲ್ಲಿನ ುಟ್‌ಪಾತ್ ಅಂಗಡಿಯವರನ್ನು ಮತ್ತು ಡಾ:ರಾಜಕುಮಾರ್ ರಸ್ತೆಯಲ್ಲಿನ ಸಣ್ಣಪುಟ್ಟ ಗೂಡಂಗಡಿಯವರನ್ನು ಪ್ರತ್ಯೇಕ ಸಭೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲನಿಬಂಧನೆಗಳಿಗೆ ಒಳಪಡಿಸಿ ಸುಂಕ ವಸೂಲಾತಿ ಗುತ್ತಿಗೆ ಹರಾಜು ನಡೆಸಲಾಗುವುದು ಎಂದರು.                ಬಸ್‌ನಿಲ್ದಾಣದ ಫುಟ್‌ಪಾತ್ ಅಂಗಡಿಯ ಹೂವಿನರಘು ಮಾತನಾಡಿ ಬಸ್‌ಶೆಲ್ಟರ್ ಸ್ಥಳದಲ್ಲಿನ ಸಣ್ಣಪುಟ್ಟ ಅಂಗಡಿಗಳನ್ನು ನಾವೇ ಸ್ವಯಂ ಪ್ರೇರಣೆಯಿಂದ ತೆರವು ಮಾಡುತ್ತೇವೆ. ಅಲ್ಲಿ ಪ್ರಾಯಾಣಿಕರಿಗೆ ಕೂರಲು ಆಸನದ ವ್ಯವಸ್ತೆ ಕಲ್ಪಿಸಿ. ನಂತರ ಅಲ್ಲಿಯೇ ಇರುವ ಅಲ್ಪ ಸ್ವಲ್ಪ ಜಾಗದಲ್ಲಿ ಅನೇಕ ವರ್ಷಗಳಿಂದ ಅಂಗಡಿಯಿಟ್ಟು ಜೀವನ ನಡೆಸಿಕೊಂಡು ಬರುತ್ತಿರುವಂತ ಬಡವರಿಗೆ ಸ್ಥಳವಾಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಜೆಡಿಎ

ಎಸ್ ಬಿ ಐ ಬ್ಯಾಂಕಲ್ಲಿ ಗ್ರಾಹಕರಿಗೆ ಕಿರಿಕಿರಿ

ರೊಚ್ಚಿಗೆದ್ದ ಗ್ರಾಹಕರು: ಕ್ಷಮೆ ಯಾಚಿಸಿದ ವ್ಯವಸ್ಥಾಪಕ -------------------------- ಹುಳಿಯಾರು: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ವ್ಯವಸ್ಥಾಪಕರು ಹಾಗೂ ಕೆಲ ಸಿಬ್ಬಂದಿಯವ ಗ್ರಾಹಕಸ್ನೇಹಿಯಾಗಿ ವರ್ತಿಸದೆ ಗ್ರಾಹಕರಿಗೆ ಕಿರಿಕಿರಿಯುಂಟುಮಾಡುತ್ತಾರೆಂದು ರೊಚ್ಚಿಗೆದ್ದ ಗ್ರಾಹಕರು ಮ್ಯಾನೇಜರ್ ಅವರನ್ನು ತೀವ್ರ ತರಾಟೆ ತೆಗೆದುಕೊಂಡ ಪ್ರಸಂಗ ಬುಧವಾರದಂದು ಜರುಗಿತು.            ಇಲ್ಲಿನ ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳದೆ ಪ್ರತಿದಿನ ದೌರ್ಜನ್ಯದಿಂದ ನಡೆದುಕೊಳ್ಳುತ್ತಾರಲ್ಲದೆ ಗ್ರಾಹಕರಿಗೆ ಕನಿಷ್ಟ ಮರ್ಯಾದೆಯನ್ನು ಕೊಡದೆ ಕಿರಿಕಿರಿ ಉಂಟು ಮಾಡುತ್ತಿದ್ದು ಈ ಧೋರಣೆ ಸರಿಪಡಿಸಿಕೊಳ್ಳಬೇಕೆಂದು ಗ್ರಾಮಪಂಚಾಯ್ತಿ ಸದಸ್ಯ ಎಲ್.ಆರ್.ಚಂದ್ರಶೇಖರ್ ಹಾಗೂ ಸಾರ್ವಜನಿಕರು ಬ್ಯಾಂಕಿನ ವ್ಯವಸ್ಥಾಪಕರ ವಿರುದ್ದ ಹರಿಹಾಯ್ದರು. ಸಮಸ್ಯೆ ಏನು: ಹಣ ಪಾವತಿ ಮಾಡಲು ಹೋದರೆ ಚಲನ್ ಕೊಡದೆ ಗ್ರೀನ್ ರೆಮಿಟ್ ಕಾರ್ಡ್ ಮೂಲಕವೇ ಪಾವತಿಸಿ ಎನ್ನುತ್ತಾರೆ ಮತ್ತು ಹಣ ಬಿಡಿಸುವುದಕ್ಕೆ ಹೋದರೆ ಚೆಕ್ ಲೀಫ್ ಕೊಡದೆ ಎಟಿಎಂ ಮೂಲಕ ಡ್ರಾ ಮಾಡಿ ಎಂದು ವಾಪಸ್ಸು ಕಳುಹಿಸುತ್ತಾರೆ.ಚಲನ್ ನೀಡದೆ ಕಾರ್ಡ್ ಮೂಲಕವೇ ಪಾವತಿಸಿ ಎಂದು ಪಟ್ಟು ಹಿಡಿಯುವುದರಿಂದ ಗ್ರಾಮೀಣ ಭಾಗದ ಅನಕ್ಷರಸ್ಥರು ಮೋಸ ಹೋಗುತ್ತಿರುವ ಘಟನೆಗಳು ಕೂಡ ಹೆಚ್ಚಾಗುತ್ತಿದೆ.ಕಾರ್ಡ್ ಮೂಲಕ ಡ್ರಾ ಮಾಡಲು ತಿಳಿಯದೆ ಅಕ್ಕಪಕ್ಕದವ

ಹುಳಿಯಾರು :3 ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ

ಹುಳಿಯಾರು: ಪಟ್ಟಣದ ಜಿಪಿಯುಸಿ,ಕನಕದಾಸ ಪ್ರೌಢಶಾಲೆ, ಟಿಆರ್ ಎಸ್ ಆರ್ ಪ್ರೌಢಶಾಲೆಯ ಪರೀಕ್ಷಾಕೇಂದ್ರಗಳಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಆರಂಭವಾಗಿದ್ದು ಪರೀಕ್ಷೆ ಸುಸೂತ್ರವಾಗಿ ನಡೆದಿದೆ.      ಟಿಆರ್ ಎಸ್ ಆರ್ ಪ್ರೌಢಶಾಲೆಯ ಪರೀಕ್ಷಾ ಕೆಂದ್ರದ ಮೇಲ್ವಾಚಾರಣೆಯನ್ನು ಹೊತ್ತಿದ್ದ ರಮೇಶ್ ಮಾತನಾಡಿ ಈ ಶಾಲೆಯ ಕೇಂದ್ರದಲ್ಲಿ ಒಟ್ಟು ಸುತ್ತಮುತ್ತ ಹಳ್ಳಿಗಳ ಶಾಲೆಯು ಸೇರಿದಂತೆ ಒಟ್ಟು ೧೨ ಶಾಲೆಗಳ ೧೮೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಅಂದರು.           ಹುಳಿಯಾರಿನಲ್ಲಿ ಒಟ್ಟು ಮೂರು ಪರೀಕ್ಷಾ ಕೆಂದ್ರಗಳಿದ್ದು ೬೪೮ ಪರೀಕ್ಷಾರ್ಥಿಗಳಿದ್ದಾರೆ.ಪ್ರತಿ ಕೇಂದ್ರದಲ್ಲೂ ಒಬ್ಬರು ವೀಕ್ಷಕರು,ಇಬ್ಬರು ಸ್ಥಾನಿಕ ವಿಚಕ್ಷಕ ದಳದ ಇಬ್ಬರು ಕಾರ್ಯನಿರ್ವಹಿಸುತ್ತಿದ್ದು ಜೊತೆಗೆ ಸಂಚಾರಿ ವಿಚಕ್ಷಕ ದಳಗಳು ಕಾರ್ಯನಿರ್ವಹಿಸಲಿದೆ. ಪ್ರತಿ ಕೇಂದ್ರದ ಮುಂದೆಯೂ ಪೊಲೀಸ್ ಕಣ್ಗಾವಲು ಹಾಕಲಾಗಿತ್ತು.        ಪರೀಕ್ಷೆ ಕೇಂದ್ರಕ್ಕೆ ಮೊಬೈಲ್ ಫೋನ್, ಕ್ಯಾಲ್ಯುಕುಲೇಟರ್ ನಿರ್ಬಂಧಿಸಲಾಗಿತ್ತು.ಯಾವುದೇ ರೀತಿಯ ಅವ್ಯವಹಾರಕ್ಕೆ ಅವಕಾಶವಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಆದೇಶ ಹೊರಡಿಸಲಾಗಿದ್ದು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.                  ವಿದ್ಯಾರ್ಥಿಗಳು ಇಂದು ಪ್ರಥಮ ಭಾಷೆ ಕನ್ನಡ,ಉರ್ದು ಪರೀಕ್ಷೆ ಬರೆದಿದ್ದು ಸುಲ

ಪೊಲೀಸರ ವಿರುದ್ಧ ಪ್ರಾಧಿಕಾರದಲ್ಲಿ ದೂರು ಸಲ್ಲಿಸಬಹುದು

ಸಾರ್ವಜನಿಕರಿಗೆ ಕಿರುಕುಳ ನೀಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ನೀಡಲು ತುಮಕೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ದೂರು ಪ್ರಾಧಿಕಾರ ರಚಿಸಲಾಗಿದೆ. ಈ ಪ್ರಾಧಿಕಾರ ಡಿಎಸ್‌ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ದುರ್ನಡತೆ ಮತ್ತು ಅಧಿಕಾರ ದುರುಪಯೋಗದ ವಿಚಾರಣೆಗೆ ಒಳಪಟ್ಟಿದೆ. ಡಿಎಸ್‌ಪಿ ಹುದ್ದೆ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳ ಬಗ್ಗೆ ದೂರನ್ನು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ವಿಚಾರಣೆಗೆ ಒಳಪಟ್ಟಿರುತ್ತದೆ. ಜಿಲ್ಲಾ ಮಟ್ಟದ ದೂರು ಪ್ರಾಧಿಕಾರದ ಅಧ್ಯಕ್ಷರಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಸದಸ್ಯರಾಗಿ ಎ.ಮುನಿಯಲ್ಲಪ್ಪ, ಸರ್ಕಾರ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿಗಳು, ನಂ.೮೧, ೧೨ನೇ ಕ್ರಾಸ್, ಸಿಂದಿ ಆಸ್ಪತ್ರೆ ರಸ್ತೆ, ಬೆಂಗಳೂರು ಇವರನ್ನು ನೇಮಕ ಮಾಡಲಾಗಿದೆ. ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ವಿಶ್ವನಾಥ್ ನಿವೃತ್ತ ಪ್ರಾಂಶುಪಾಲರು, ಶ್ರೀನಿಕೇತನ ೨೩ನೇ ಅಡ್ಡರಸ್ತೆ, ಎಸ್‌ಐಟಿ ಬಡಾವಣೆ, ತುಮಕೂರು ಇವರು ನಾಗರಿಕ ಸಮಾಜದಿಂದ ದೂರು ಪ್ರಾಧಿಕಾರಕ್ಕೆ ನೇಮಕಗೊಂಡ ಸದಸ್ಯರಾಗಿರುತ್ತಾರೆ.

ಇಂದು ಸೋಮಜ್ಜನಪಾಳ್ಯದಲ್ಲಿ ರೈತಸಂಘದ ಉದ್ಘಾಟನೆ

ಹುಳಿಯಾರು ಸಮೀಪದ ಸೋಮಜ್ಜನಪಾಳ್ಯದಲ್ಲಿ ಮಾ.೩೦ರ ಬುಧವಾರ ಬೆಳಿಗ್ಗೆ ೧೦ಕ್ಕೆ ರೈತಸಂಘದ ಉದ್ಘಾಟನೆ ನಡೆಯಲಿದೆ.ತುಮಕೂರು ರೈತಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಸದಸ್ಯರಿಗೆ ಹಸಿರು ಶಾಲುಹೊದಿಸುವ ಮೂಲಕ ಸಂಘಕ್ಕೆ ಚಾಲನೆ ನೀಡಲಿದ್ದು ತಾಲ್ಲೂಕ್ ಅಧ್ಯಕ್ಷ ಹೊಸಳ್ಳಿ ಚಂದ್ರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.                ತಿಪಟೂರು ದಲಿತ ಸಂಘರ್ಷ ಸಮಿತಿಯ ಶಂಕರಪ್ಪ,ಗುಬ್ಬಿ ರೈತಸಂಘದ ತಾಲ್ಲೂಕ್ ಅಧ್ಯಕ್ಷ ನಿರಂಜನ್ ಮೂರ್ತಿ,ಚಿನಾಹಳ್ಳಿ ತಾಲ್ಲೂಕ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ,ಉಪಾಧ್ಯಕ್ಷ ಅರಳಿಕೆರೆ ರಾಜಶೇಖರ್,ನಾಗರಾಜು,ಪೈಲ್ದಾರ್ ಹನುಮಂತಪ್ಪ,ಎನ್.ಬಿ ದೇವರಾಜು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇಂದು ಮಳಿಗೆಹರಾಜು

ಹುಳಿಯಾರು: ಗ್ರಾಮ ಪಂಚಾಯ್ತಿಗೆ ಸೇರಿದ ಬಸ್ ನಿಲ್ದಾಣದಲ್ಲಿನ ಬಸ್ ಶೆಲ್ಟರ್ ಮೇಲಿರುವ 3 ಅಂಗಡಿ ಮಳಿಗೆಗಳು ಸೇರಿದಂತೆ ಸಂತೆ ಸುಂಕ,ಬಸ್ ಸುಂಕದ ಬಹಿರಂಗ ಹರಾಜು ಮಂಗಳವಾರ ಬೆಳಿಗ್ಗೆ ೧೧ ಕ್ಕೆ ನಡೆಯಲಿದೆ.ಹೆಚ್ಚಿನ ಮಾಹಿತಿಗೆ ಪ್ರಭಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ಧರಾಮಣ್ಣನವರನ್ನು ಸಂಪರ್ಕಿಸಬಹುದಾಗಿದೆ.

ಇಂದು ಮಲ್ಲಿಗೆರೆ ಕರಿಯಮ್ಮನ ಅಂಬಾರಿ ಉತ್ಸವ

ಹಂದನಕೆರೆ ಹೋಬಳಿ ಮಲ್ಲೀಗೆರೆಯಲ್ಲಿ ಕರಿಯಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಂದು ಉಚಿತ ಸಾಮೂಹಿಕ ವಿವಾಹ ಹಾಗೂ ದಾಸೋಹ ನಡೆದಿದ್ದು ರಾತ್ರಿ ಅಪಾರ ಭಕ್ತಾಧಿಗಳ ಸಮ್ಮೂಖದಲ್ಲಿ ರಥೋತ್ಸವ ಜರುಗಿತು.                ೨೯ ರಂದು ಮಂಗಳವಾರ ಮಧ್ಯಾನ್ನ ೨ಗಂಟೆಗೆ ದೇವಿಯನ್ನು ಆನೆಯ ಮೇಲೆ ಕೂರಿಸಿ ವಿಶೇಷವಾಗಿ ಅಂಬಾರಿ ಉತ್ಸವ ತದನಂತರ ಉಯ್ಯಾಲೆ ಉತ್ಸವ ನಡೆಸಲಾಗುವುದು. ಭಕ್ತಾಧಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.

ಕಪ್ಪು ಪಟ್ಟಿ ಧರಿಸಿ ಪರೀಕ್ಷಾ ಕರ್ತವ್ಯ ನಿರ್ವಹಣೆ

ಹುಳಿಯಾರು: ವೇತನ ತಾರತಮ್ಯ ನಿವಾರಣೆ ಮತ್ತು ಕುಮಾರ ನಾಯಕ್ ವರದಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಹುಳಿಯಾರು-ಕೆಂಕೆರೆ ಪದವಿಪೂರ್ವ ಕಾಲೇಜಿನ ಪರೀಕ್ಷಾಕೇಂದ್ರದಲ್ಲಿ ಪ್ರಾಂಶುಪಾಲರು ಮತ್ತು ಎಲ್ಲಾ ಕಾಲೇಜುಗಳ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿ ದ್ವಿತೀಯ ಪಿಯುಸಿ ಪರೀಕ್ಷಾ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟಿಸಿದರು. ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಹುಳಿಯಾರು-ಕೆಂಕೆರೆ ಪದವಿಪೂರ್ವ ಕಾಲೇಜಿನ ಪರೀಕ್ಷಾಕೇಂದ್ರದಲ್ಲಿ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿ ದ್ವಿತೀಯ ಪಿಯುಸಿ ಪರೀಕ್ಷಾ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟಿಸಿದರು.              ಪ.ಪೂ ಶಿಕ್ಷಣ ಇಲಾಖೆಯ ಉಪನ್ಯಾಸಕರು,ಪ್ರಾಂಶುಪಾಲರು ವೇತನ ತಾರತಮ್ಯ ನೀತಿ ವಿರುದ್ಧ ಹಲವು ವರ್ಷಗಳಿಂದಲೂ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಪ್ರಯೋಜನವಾಗಿಲ್ಲ.ಉಪನ್ಯಾಸಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯವಹಿಸಿದೆ.ಈ ಹಿನ್ನಲೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಕೇಂದ್ರ, ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯತೆಯನ್ನು ಸರಿಪಡಿಸಬೇಕು ಎಂದು ಸರ್ಕಾರದ ವಿರುದ್ಧ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಕೈಗೆ ಕಪ್ಪುಪಟ್ಟಿಯನ್ನು ಕಟ್ಟಿಕೊಂಡೇ ಕರ್ತವ್ಯ ನಿರ್ವಹಿಸಿದರು.                         ಸರ್ಕಾರವು ವೇತನ ತಾರತಮ್ಯ ನೀತಿಯನ್ನು ಸರಿಪಡಿಸದಿದ್ದರೆ ಮುಂಬರುವ ಪರೀಕ್ಷಾ      ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಸ್ಥಗಿತಗೊಳಿಸ

ಹುಳಿಯಾರಿನಲ್ಲಿ ಸಿದ್ಧಗಂಗಾ ಶ್ರೀಗಳ ಶೋಭಾಯಾತ್ರೆ ರಥ

ಹುಳಿಯಾರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಶತಾಯುಷಿ , ಕರ್ನಾಟಕ ರತ್ನ,ಪದ್ಮಭೂಷಣ ಡಾ. ಶಿವಕುಮಾರ ಸ್ವಾಮೀಜಿಯವರ ೧೦೯ನೇ ಜನ್ಮದಿನಾಚರಣೆ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಗುರುವಂದನಾ ಮಹೋತ್ಸವ ಕೈಗೊಳ್ಳಲಾಗಿದ್ದು ಪ್ರಚಾರದ ಅಂಗವಾಗಿ ಸಂಚರಿಸುತ್ತಿರುವ ಶ್ರೀಗಳ ಕರ್ಮಭೂಮಿಯಿಂದ ಜನ್ಮ ಸ್ಥಳದವರೆಗಿನ ಶೋಭಾಯಾತ್ರೆಯು ಭಾನುವಾರದಂದು ಹುಳಿಯಾರಿಗೆ ಆಗಮಿಸಿತು.                                       ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ಕವಿತಾ ಕಿರಣ್,ಆಂಜನೇಯ ಸ್ವಾಮಿ ದೇವಾಲಯದ ಧನಂಜಯ್,ಹಿಂದೂ ಜಾಗರಣ ವೇದಿಕೆಯ ಬಡಗಿ ರಾಮಣ್ಣ ಮತ್ತಿತರರು ರಥವನ್ನು ಬರ ಮಾಡಿಕೊಂಡರು.                ಶೋಭಾಯಾತ್ರೆಯ ಉಸ್ತುವಾರಿ ವಹಿಸಿರುವ ಆರಾಧ್ಯ ಮಂಚಲದೊರೆ ಮಾತನಾಡಿ ನಡೆದಾಡುವ ದೇವರು, ಶತಾಯುಷಿ , ಪದ್ಮಭೂಷಣ ಡಾ. ಶಿವಕುಮಾರ ಸ್ವಾಮೀಜಿಯವರ ೧೦೯ನೇ ಜನ್ಮದಿನಾಚರಣೆ ಇಡೀ ರಾಜ್ಯದಲ್ಲಿಯೇ ಆಚರಣೆಯಾಗಬೇಕು ಎಂದು ಭಕ್ತಾಧಿಗಳು ಸಂಕಲ್ಪ ಮಾಡಿದ್ದು ಇದಕ್ಕಾಗಿ ವೈಭವಯುತ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡೀಕೊಳ್ಳಲಗುತ್ತಿದೆ ಎಂದರು.                ಮಾರ್ಚ್ ೨೪ ರಿಂದ ಶ್ರೀಗಳವರ ಕರ್ಮಭೂಮಿಯಿಂದ ಜನ್ಮ ಭೂಮಿಯವರೆಗೆ ಶೋಭಾಯಾತ್ರೆಯನ್ನು ಆರಂಭಿಸಿದ್ದು ಒಟ್ಟು ೧೦೯ ಗ್ರಾಮಗಳನ್ನು ತಲುಪಿ ಏಪ್ರಿಲ್ ೧ ರಂದು ಕೈಗೊಳ್ಳುವ ಶ್ರೀಗಳ ಜನ್ಮ ದಿನಾಚರಣೆಯ ಬಗ್ಗೆ ಭಕ್ತಾಧಿಗಳಿಗೆ ತಿಳಿಯಪಡಿಸಲಾಗುತ್ತಿದೆ ಎಂದರು.              

ದೊಡ್ಡಬಿದರೆ ಕರಿಯಮ್ಮನಿಗೆ ಶ್ರದ್ಧಾಭಕ್ತಿಯಿಂದ ನಡೆದ ಕೆಂಡದ ಸೇವೆ

ಹುಳಿಯಾರು : ಸಮೀಪದ ದೊಡ್ಡಬಿದರೆ ಗ್ರಾಮದ ಶ್ರೀಕರಿಯಮ್ಮದೇವಿ ಹಾಗೂ ಶ್ರೀಬೇವಿನಹಳ್ಳಿ ಅಮ್ಮನವರ ಆರತಿ ಬಾನ ಹಾಗೂ ಕೆಂಡದ ಸೇವೆ ಶನಿವಾರದಂದು ಶ್ರದ್ಧಾಭಕ್ತಿಯಿಂದ ನಡೆಯಿತು. ಮದುವಣಗಿತ್ತಿ, ಮಡಲಕ್ಕಿ ಸೇವೆಯ ಮೂಲಕ ಗುರುವಾರದಂದು ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು ೨೯ ರ ಮಂಗಳವಾರದವರೆಗೆ ನಡೆಯಲಿದೆ.        ಚಿಕ್ಕಬಿದರೆ ಕರಿಯಮ್ಮ, ಕೋಡಿಹಳ್ಳಿ ಶ್ರೀಕೊಲ್ಲಾಪುರದಮ್ಮ , ಹುಳಿಯಾರಿನ ಸಣ್ಣದುರ್ಗಮ್ಮ ಹಾಗೂ ದೂತರಾಯನೊಂದಿಗೆ ಅಲಂಕೃತ ಕರಿಯಮ್ಮನನ್ನು ಕಳಸ ಹೊತ್ತ ಹುಡುಗಿಯೊಂದಿಗೆ ಉರೊಳಗಿನ ದೇವಸ್ಥಾನದಿಂದ ನಡೆಮುಡಿ ಹಾಗೂ ಮೆರವಣಿಗೆಯಲ್ಲಿ ಸುಮಾರು ಎರಡು ಕಿಮೀ ದೂರದ ಬಾರೆಯಲ್ಲಿರುವ ಉದ್ಭವ ಬೇವಿನಹಳ್ಳಿ ಅಮ್ಮನವರ ಮೂಲಸ್ಥಾನಕ್ಕೆ ಕರೆತರಲಾಯಿತು.          ಅಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದ ನಂತರ ವಾದ್ಯಮೇಳದ ಹಿಮ್ಮೇಳದೊಂದಿಗೆ ದೇವಾಲಯದ ಮುಂದೆ ನಿಗಿನಿಗಿಸುವ ಕೆಂಡದ ಮೇಲೆ ಕಳಸ ಹೊತ್ತ ಬಾಲಕಿ ಹಾದ ನಂತರ ಕರಿಯಮ್ಮನೊಟ್ಟಿಗೆ ಎಲ್ಲಾ ದೇವರುಗಳನ್ನು ಕೆಂಡ ಹಾಯಿಸಲಾಯಿತು.ನಂತರ ಮಹಿಳೆಯರು ತಾವು ಮಡಿಯಲ್ಲಿ ಮಾಡಿ ತಂದಿದ್ದ ತಂಬಿಟ್ಟಿನ ಆರತಿ ಬೆಳಗುವುದರ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.                 ಕರಿಯಮ್ಮ ದೇವಿ ದೇವಾಲಯ ಸಮಿತಿಯ ಅಧ್ಯಕ್ಷ ಕರಿಯಪ್ಪ,ಸತೀಶ್,ಪಾತಲಿಂಗೇಶ್ವರ ದೇವಾಲಯ ಸಮಿತಿಯ ಯಜಮಾನರುಗಳು, ಗ್ರಾಪಂ ಸದಸ್ಯರುಗಳು

ದೊಡ್ಡಬಿದರೆಯಲ್ಲಿ ಮಾ.೨೬ರ ಶನಿವಾರದಂದು ಅಗ್ನಿಕೊಂಡ

ಹುಳಿಯಾರು ಸಮೀಪದ ದೊಡ್ಡಬಿದರೆ ಗ್ರಾಮದ ಶ್ರೀಕರಿಯಮ್ಮದೇವಿ ಹಾಗೂ ಶ್ರೀಬೇವಿನಹಳ್ಳಿ ಅಮ್ಮನವರ ಮತ್ತು ಶ್ರೀ ಪಾತಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಮದುವಣಗಿತ್ತಿ, ಮಡಲಕ್ಕಿ ಸೇವೆಯ ಮೂಲಕ ಗುರುವಾರ ಪ್ರಾರಂಭವಾಗಿದೆ.                 ಶುಕ್ರವಾರದಂದು ಚಿಕ್ಕಬಿದರೆ ಕರಿಯಮ್ಮ, ಕೋಡಿಹಳ್ಳಿ ಶ್ರೀಕೊಲ್ಲಾಪುರದಮ್ಮ ಹಾಗೂ ಹುಳಿಯಾರಿನ ಸಣ್ಣದುರ್ಗಮ್ಮನ ಆಗಮನದೊಂದಿಗೆ ಬಾನ ನಡೆದಿದ್ದು . ಮಾ.೨೬ ಶನಿವಾರದಂದು ಆರತಿ ಬಾನ, ಗಂಗಾಪೂಜೆ, ಅಗ್ನಿಕುಂಡ, ಅನ್ನಸಂತರ್ಪಣೆ, ಸಿಡಿ ಮಹೋತ್ಸವ ನಡೆಯಲಿದೆ.         ಮಾ.೨೭ ರಂದು ರುದ್ರಾಭಿಷೇಕ, ಮೈಲಾರಲಿಂಗೇಶ್ವರ ಸ್ವಾಮಿಯ ದೋಣಿಸೇವೆ, ಶ್ರೀ ಪಾತಲಿಂಗೇಶ್ವರಸ್ವಾಮಿ ಸ್ವಾಮಿಯವರ ಉತ್ಸವ ನಡೆಯಲಿದೆ. ಮಾ.೨೯ ರಂದು ಬೇನಿವಹಳ್ಳಿ ಅಮ್ಮನವರ ಬಾನ, ಆರ್ಕೆಸ್ಟ್ರಾ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಸ್ವಾಮಿಯವರ ಕೃಪೆಗೆ ಪಾತ್ರರಾಗುವಂತೆ ದೆಆವಾಲಯ ಸಮಿತಿಯವರು ಕೋರಿದ್ದಾರೆ.

ವಿದ್ಯಾವಾರಿಧಿಯಲ್ಲಿ ಹೋಳಿ ಆಚರಣೆ

ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲಾ ವಿದ್ಯಾರ್ಥಿನಿಯರು ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು.ಶಾಲಾ ಆಡಳಿತಮಂಡಳಿಯ ಕಾರ್ಯದರ್ಶಿ ಕವಿತಾಕಿರಣ್ ಇದ್ದಾರೆ.

ರೈತರು ಅಸಲು ಪಾವತಿಸಿದರೆ ಬಡ್ಡಿ ಮನ್ನಾ

           ಚಿಕ್ಕನಾಯಕನಹಳ್ಳಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಕೃಷಿಗೆ ಸಂಬಂಧಿಸಿದಂತೆ ಯಾರೇ ಸಾಲ ಪಡೆದು ಸುಸ್ತಿದಾರರಾಗಿದ್ದರೂ, ಅವರು ೨೦೧೬ರ ಮಾರ್ಚ್ ೩೧ರೊಳಗೆ ಅಸಲು ಪಾವತಿಸಿದಲ್ಲಿ ರಾಜ್ಯ ಸರ್ಕಾರದ ಬಡ್ಡಿ ಮನ್ನಾ ಯೋಜನೆ ಅನ್ವಯಿಸುತ್ತದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್ ತಿಳಿಸಿದ್ದಾರೆ.                          ರೈತರ ಹಿತದೃಷ್ಟಿಯಿಂದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಈ ಯೋಜನೆ ಅಕ್ಟೋಬರ್‌ನಿಂದಲೇ ಚಾಲನೆ ಯಲ್ಲಿದೆ, ೩೧-೦೩-೨೦೧೪ಕ್ಕೆ ಹಿಂದಿನ ವರ್ಷಗಳಲ್ಲಿ ಸಾಲ ಪಡೆದು ಸುಸ್ತಿದಾರರಾಗಿದ್ದರೆ ನಿಗದಿ ಪಡಿಸಿರುವ ದಿನಾಂಕದೊಳಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಯೋಜನೆ ಅನ್ವಯಿಸಲಿದೆ, ಆದ್ದರಿಂದ ೩೧ ಮಾಚ್ ರ್ ೨೦೧೬ರ ಒಳಗೆ ಅಸಲು ಕಟ್ಟಿ ಈ ಯೋಜನೆಯ ಪ್ರಯೋಜನ ಪಡೆದು ಬಡ್ಡಿಯಿಂದ ಮುಕ್ತಿ ಪಡೆಯಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಲ್ಲಿಗೆರೆ ಜಾತ್ರೆ ಇವತ್ತಿನಿಂದ ಶುರು

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಲ್ಲಿಗೆರೆಯ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಇಂದಿನಿಂದ ಆಂದರೆ ಮಾರ್ಚ್ ೨೫ರ ಶುಕ್ರವಾರದಂದು ಚಾಲನೆಗೊಂಡಿದ್ದು ಮಾ.೩೦ಕೊನೆಗೊಳ್ಳಲಿದೆ. ಇಂದು ಮಲ್ಲಿಗೆರೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಂದ ಧ್ವಜಾರೋಹಣ ಹಾಗೂ ಮಡಲಕ್ಕಿ ಸೇವೆ, ೨೬ರಂದು ಬೆಳಗ್ಗೆ ೮ಗಂಟೆಗೆ ಬಾನದ ಸೇವೆ, ೨೭ ರಂದು ಮಧ್ಯಾಹ್ನ ೧೨ಗಂಟೆಗೆ ಸಿಡಿ ಕಾರ್ಯಕ್ರಮ ಸಂಜೆ ಆರ್ಕೆಸ್ಟ್ರಾ, ೨೮ರಂದು ಮಧ್ಯಾಹ್ನ ೧೨.೩೦ಕ್ಕೆ ಕರಿಯಮ್ಮ ದೇವಿ ದೇವಸ್ಥಾನದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಅನ್ನ ದಾಸೋಹ.. ರಾತ್ರಿ ೧೦ ಗಂಟೆಗೆ ಗಂಗಾಸ್ನಾನದೊಂದಿಗೆ ಮಹಾರಥೋತ್ಸವ, ೨೯ರಂದು ಮಧ್ಯಾಹ್ನ ೨ ಗಂಟೆಗೆ ಅಂಬಾರಿ ಉತ್ಸವ ನಂತರ ಕರಿಯಮ್ಮ ದೇವಿಯ ಉಯ್ಯಾಲೋತ್ಸವ ೩೦ ರಂದು ರಾತ್ರಿ ೮ ಗಂಟೆಗೆ ಉತ್ಸವದೊಂದಿಗೆ ಊರ ಒಳಗಿನ ದೇವಸ್ಥಾನಕ್ಕೆ ಪ್ರವೇಶ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕರಿಯಮ್ಮ ದೇವಿ ದೇವಸ್ಥಾನದ ಅಭಿವೃದ್ಧಿ ಸಮಿತಿಯವರು ಕೋರಿದ್ದಾರೆ.

ಪೌರಕಾರ್ಮಿಕನ ಸಾವು

ಹುಳಿಯಾರು:ಪಟ್ಟಣದ ಪೌರಕಾರ್ಮಿಕ ಮರಿರಂಗಯ್ಯ(೫೦) ಬುಧವಾರ ಮಧ್ಯಾಹ್ನ ಉಸಿರಾಟದ ತೊಂದರೆಯಿಂದಾಗಿ ನಿಧನಹೊಂದಿದ್ದಾರೆ.                ಕಳೆದ ಮುವತ್ತು ವರ್ಷಗಳಿಂದಲೂ ಹುಳಿಯಾರು ಗ್ರಾಮ ಪಂಚಾಯ್ತಿಯಲ್ಲಿ ಸ್ಕಾವೆಂಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ ಎಲ್ಲರಿಗೂ ಬೇಕಾದವನಾಗಿದ್ದ.                  ಮಂಗಳವಾರ ಎಂದಿನಂತೆ ಕೆಲಸ ನಿರ್ವಹಿಸಿದ್ದ ಈತ ರಾತ್ರಿ ಉಸಿರಾಟ ತೊಂದರೆಯಿಂದ ಬಳಲಿದ ಕಾರಣಕ್ಕೆ ಬುಧವಾರದಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.    ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ಸದಸ್ಯರಾದ ಎಲ್.ಆರ್.ಚಂದ್ರಶೇಖರ್,ಸುರೇಶ್ ಮಾಜಿ ಗ್ರಾಪಂ ಅಧ್ಯಕ್ಷ ಕಿಟ್ಟಪ್ಪ,ಕಾರ್ಯದರ್ಶಿ ಉಮಾಶಂಕರ್,ಮುರಳಿ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದು ವರ್ಗದವರು ಆಗಮಿಸಿ ಅಂತಿಮಗೌರವ ಸಲ್ಲಿಸಿದರು.            ಗ್ರಾಮಪಂಚಾಯ್ತಿ ಪರವಾಗಿ ಅಧ್ಯಕ್ಷೆ ಗೀತಾ ಐದು ಸಾವಿರ ರೂಪಾಯಿಗಳನ್ನು ಮೃತನ ಪತ್ನಿಗೆ ಅಂತಿಮ ಸಂಸ್ಕಾರಕ್ಕಾಗಿ ನೀಡಿದರು.

ಕಿಡ್ ಝೀ ಸಂಸ್ಥೆಯಲ್ಲಿ ಆಚರಿಸಲಾದ ಹೋಳಿ

ಹುಳಿಯಾರಿನ ಕಿಡ್ ಝೀ ಸಂಸ್ಥೆಯಲ್ಲಿ ಆಚರಿಸಲಾದ ಹೋಳಿ ಆಚರಣೆಯಲ್ಲಿ ಬಣ್ಣದ ಆಟವಾಡಿದ ಪುಟಾಣಿಗಳು.

ಹುಳಿಯಾರು ಗ್ರಾಪಂನಿಂದ ನೂತನ ಜಿಪಂ ಹಾಗೂ ತಾಪಂ ಸದಸ್ಯರಿಗೆ ಸನ್ಮಾನ

ಹುಳಿಯಾರು: ಪಟ್ಟಣದ ಗ್ರಾಮ ಪಂಚಾಯ್ತಿವತಿಯಿಂದ ನೂತನ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೈ.ಸಿ.ಸಿದ್ರಾಮಯ್ಯ ಹಾಗೂ ತಾಲ್ಲೂಕ್ ಪಂಚಾಯಿತಿ ಸದಸ್ಯರಾದ ಹೆಚ್.ಎನ್. ಕುಮಾರ್ ಅವರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ನೂತನ ನೂತನ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೈ.ಸಿ.ಸಿದ್ರಾಮಯ್ಯ ಹಾಗೂ ತಾಲ್ಲೂಕ್ ಪಂಚಾಯಿತಿ ಸದಸ್ಯರಾದ ಹೆಚ್.ಎನ್. ಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.                   ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿ.ಪಂ ಸದಸ್ಯ ವೈ.ಸಿ.ಸಿದ್ರಾಮಯ್ಯ ಪಟ್ಟಣದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಪಕ್ಷಾತೀತವಾಗಿ ಕೆಲಸ ಮಾಡೋಣ. ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸೋಣ ಎಂದರು. ಗ್ರಾಮಪಂಚಾಯ್ತಿಯಾಗಿರುವ ಹುಳಿಯಾರನ್ನು ಪಟ್ಟಣ ಪಂಚಾಯ್ತಿಯನ್ನಾಗಿಸಲು ಶ್ರಮಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಪಟ್ಟಣದ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಎಲ್ಲರ ಸಹಕಾರದಿಂದ ಮುನ್ನಡೆಯುವುದಾಗಿ ಭರವಸೆ ನೀಡಿದರು.                    ತಾಪಂ ಸದಸ್ಯ ಕುಮಾರ್ ಮಾತನಾಡಿ ನಾನೂ ಈ ಹಿಂದೆ ಇದೇ ಪಂಚಾಯ್ತಿಯಲ್ಲಿ ಸದಸ್ಯನಾಗಿದ್ದು ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ.ಚುನಾವಣೆಯ ರಾಜಕೀಯವನ್ನು ಬದಿಗಿಟ್ಟು ಅಭಿವೃದ್ಧಿಗಾಗಿ ಎಲ್ಲರೂ ನನ್ನೊಟ್ಟಿಗೆ ಸಹಕರಿಸುವಂತೆ ಹಾಗೂ ನನ್ನ ಅನುದಾನದಲ್ಲಿ ಪಟ್ಟಣಕ್ಕೆ ಹೆಚ್ಚಿನ ಒತ್ತುನೀಡಿ ಅಭಿವೃದ್ಧಿಪಡಿಸುವುದ

ಉಚಿತ ಆರೋಗ್ಯ ಶಿಬಿರ ಯಶಸ್ವಿ

ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಗ್ರಾಮದಲ್ಲಿ ಬಿ.ಎಂ.ಎಸ್. ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಶಿಬಿರದ ಅಂಗವಾಗಿ ಉಚಿತ ಆರೋಗ್ಯ ತಪಸಾಣಾ ಶಿಬಿರ ನಡೆಯಿತು. ಹುಳಿಯಾರು: ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ಹುಳಿಯಾರು-ಕೆಂಕೆರೆಯ ಬಿ.ಎಂ.ಎಸ್. ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಶಿಬಿರದಲ್ಲಿ ಉಚಿತ ಆರೋಗ್ಯ ತಪಸಾಣಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.            ಡಾ. ವೈ.ಜಿ.ಸಿದ್ದರಾಮಯ್ಯ, ಡಾ.ಕೆ.ಪಿ. ರಾಜಶೇಖರ್, ಡಾ.ಪ್ರಶಾತ್‌ಕುಮಾರ್ ಶೆಟ್ಟಿ ಮುಂತಾದ ವೈದ್ಯರುಗಳು ಭಾಗವಹಿಸಿ ಸುಮಾರು ೨೦೦ ಜನರಿಗೆ ಉಚಿತವಾಗಿ ಆರೋಗ್ಯ ತಪಸಣೆ ನಡೆಸಿದ್ದಲ್ಲದೆ ಸುಮಾರು ೨೦ಸಾವಿರ ರೂಪಾಯಿಗಳ ಔಷದಿಗಳನ್ನು ವಿತರಿಸಿದರು.               ಶಿಬಿರದಲ್ಲಿ ಶಿಬಿರಾಧಿಕಾರಿಗಳಾದ ಸೈಯದ್ ಇಬ್ರಾಯಿಂ, ಆರ್. ಶಿವಯ್ಯ, ಜಯಪ್ರಕಾಶ್, ಚಂದ್ರಮೌಳಿ ಮತ್ತಿತರರು ಉಪಸ್ಥಿತರಿದ್ದರು. 

ಯಗಚೀಹಳ್ಳಿ ಗ್ರಾಮಕ್ಕೆ ನಿಗದಿತವಾಗಿ ವಿದ್ಯುತ್ ಪೂರೈಸಲು ಒತ್ತಾಯ

ಹುಳಿಯಾರು: ಹೋಬಳಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಾದ ಯಗಚಿಹಳ್ಳಿ,ಮಾರುಹೊಳೆ,ಕೆಎಸ್ ಪಾಳ್ಯ,ಬಡಾವಣೆ,ಭದ್ರಯ್ಯನ ಪಾಳ್ಯದ ಗ್ರಾಮಸ್ಥರುಗಳು ವಿದ್ಯುತ್ ಸಮಸ್ಯೆಯಿಂದ ಬೇಸತ್ತು ಗ್ರಾಮದ ಪ್ರಮುಖರುಗಳ ಸಮ್ಮುಖದಲ್ಲಿ ಹುಳಿಯಾರಿನ ಬೆಸ್ಕಾಂಗೆ ಆಗಮಿಸಿ ಇನ್ನೊಂದು ವಾರದಲ್ಲಿ ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಗಡುವು ನೀಡಿದ ಘಟನೆ ಮಂಗಳವಾರದಂದು ಜರುಗಿತು. ಯಗಚಿಹಳ್ಳಿ ಗ್ರಾಮಸ್ಥರುಗಳು ವಿದ್ಯುತ್ ಸಮಸ್ಯೆಪರಿಹರಿಸುವಂತೆ ಒತ್ತಾಯಿಸಿ ಹುಳಿಯಾರಿನ ಬೆಸ್ಕಾಂ ಸೆಕ್ಷನ್ ಆಫೀಸರ್ ಮೂರ್ತಪ್ಪ ಅವರಿಗೆ ಮನವಿ ಸಲ್ಲಿಸಿದರು. ನಮ್ಮೂರಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು ರಾತ್ರಿ ಹೊತ್ತು ವಿದ್ಯುತ್ ಇಲ್ಲದೆ ಹಳ್ಳಿಗಳು ಕತ್ತಲಲ್ಲಿ ಮುಳುಗುವಂತಾಗಿದ್ದು ವಿದ್ಯುತ್ ವ್ಯತ್ಯಯದಿಂದ ಕುಡಿಯುವ ನೀರಿಗೂ ಕಷ್ಟವಾಗಿದೆ.ಥ್ರಿ ಫೇಸ್ ವಿದ್ಯುತ್ ಬದಲು ಕೆಲವೇ ಗಂಟೆಗಳ ಸಮಯ ಸಿಂಗಲ್ ಫೇಸ್ ವಿದ್ಯುತ್ ನೀಡುತ್ತಿರುವುದರಿಂದ ಯಾವುದೇ ಕೆಲಸವಾಗುತ್ತಿಲ್ಲ.ಅದನ್ನು ಕೂಡ ಸರಿಯಾಗಿ ಸರಬರಾಜು ಮಾಡದೆ ದಿನಕ್ಕೆ ಹತ್ತಿಪತ್ತು ಬಾರಿ ತೆಗೆಯುವುದರಿಂದ ಅನಿಶ್ಚಿತ ವಿದ್ಯುತ್ ನಿಂದ ಮಕ್ಕಳ ಪರೀಕ್ಷಾ ಸಮಯದಲ್ಲಿ ಓದಿಗೂ ಕೂಡ ತೊಂದರೆಯಾಗಿದೆ ಎಂದು ದೂರಿದರು. ಹಳ್ಳಿಗಳಲ್ಲಿ ಕೇವಲ ಎರಡು ಮೂರು ಗಂಟೆ ವಿದ್ಯುತ್ ನೀಡುವುದರಿಂದ ತೋಟ ತುಡಿಕೆಗಳು ಬೇಸಿಗೆಯ ಬಿಸಿಲ ಝಳಕ್ಕೆ ಒಣಗಿಹೋಗುತ್ತಿದ್ದು ತೋಟದಲ್ಲಿ ಭರ್ತಿ ನೀರಿದ್ದರೂ ಕರೆಂಟ್ ಸಮಸ್ಯೆಯಿ

ಹಾಲಿನ ಡೈರಿಗಳು ರೈತನ ಪಾಲಿನ ಲಕ್ಷ್ಮೀ ದೇವಸ್ಥಾನಗಳು :ತುಮಕೂರು ಹಾಲು ಒಕ್ಕೂಟದ ನಿರ್ದೆಶಕ ಹಳೆಮನೆ ಶಿವನಂಜಪ್ಪ

ಹುಳಿಯಾರು: ಮಳೆಬೆಳೆ ಕೈಕೊಟ್ಟಿರುವ ಇಂದು ರೈತನಿಗೆ ಹಣ ಕೊಟ್ಟು ನೆಮ್ಮದಿಯ ಜೀವನ  ನಿರ್ವಹಣೆ  ಮಾಡುವಂತೆ ಮಾಡಿರುವ  ಡೈರಿಗಳು  ರೈತನ ಪಾಲಿನ ಲಕ್ಷ್ಮೀ ದೇವಸ್ಥಾನಗಳು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೆಶಕ ಹಳೆಮನೆ ಶಿವನಂಜಪ್ಪ ತಿಳಿಸಿದರು.                  ಹುಳಿಯಾರು ಸಮೀಪದ ಪುರದಮಠದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ಆರಂಭಿಸಿರುವ ಬಿಎಂಸಿ ಘಟಕದ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹುಳಿಯಾರು ಸಮೀಪದ ಪುರದಮಠದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ಆರಂಭಿಸಿರುವ ಬಿಎಂಸಿ ಘಟಕವನ್ನು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಉದ್ಘಾಟಿಸಿದರು. ಹಳೆಮನೆ ಶಿವನಂಜಪ್ಪ, ಕೆ.ಶಾಂತಪ್ಪ ಮತ್ತಿತರರು ಇದ್ದಾರೆ.                 ಕೊಬ್ಬರಿ ಮಾರಲು ತಿಪಟೂರಿಗೂ, ಹುಣಸೆ ಮಾರಲು ತುಮಕೂರಿಗೂ, ಅಡಿಕೆ ಮಾರಲು ಭೀಮಸಂದ್ರಕ್ಕೂ ಹೋಗಬೇಕು. ಆದರೆ ಹಾಲು ಮಾರಲು ದೂರದೂರಿಗೆ ಹೋಗದೆ ತಮ್ಮ ಊರಿನ ಹಾಲಿನ ಡೈರಿಯಲ್ಲಿ ಮಾರಬಹುದು. ಅದೂ ದರ ಹೆಚ್ಚುಕಡಿಮೆಯಾಗದೆ ಪ್ರತಿದಿನ ಒಂದೇ ದರದಲ್ಲಿ ಮಾರಬಹುದು. ಹಾಗಾಗಿ ಇಂದು ಹಾಲಿನ ಡೇರಿಗಳು ಪ್ರತಿದಿನ ಬೆಳಿಗ್ಗೆ-ಸಂಜೆ ರೈತನಿಗೆ ಹಣ ನೀಡುವ ಲಕ್ಷ್ಮಿ ದೇವಸ್ಥಾನಗಳಾಗಿವೆ. ಈ ಸತ್ಯ ಮನವರಿಕೆ ಮಾಡಿ ಪ್ಯಾಟೆಯಲ್ಲಿ ಇನ್ನೊಬ್ಬರ ಕೈಕೆಳಗೆ ಮೂರ್ನಾಲ್ಕು ಸಾವಿರಕ್ಕೆ ಕೂಲಿ ಮಾಡಿ ದುಬಾರಿ ವೆಚ್ಚ ಹಾಗೂ ಒತ್ತಡದ ಜೀವನ ನಡೆಸುತ್ತಿರುವ

ಕೃಷಿ ಜ್ಞಾನ ಅವಶ್ಯ: ಪ್ರೊ.ಶಿವನಂಜಯ್ಯ

(ಸುದ್ದಿ ಕೃಪೆ:ಕಿರಣ್ ಕುಮಾರ್) ಹುಳಿಯಾರು: ಕೃಷಿ ಜ್ಞಾನ ಪಡೆಯದೆ ಕೃಷಿ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಸಾವಯವ ಕೃಷಿ ತಜ್ಞ ಪ್ರೊ.ಶಿವನಂಜಯ್ಯಬಾಳೆಕಾಯಿ ಅಭಿಪ್ರಾಯಪಟ್ಟರು.           ಹುಳಿಯಾರು ಸಮೀಪದ ಹೊಯ್ಸಳಕಟ್ಟೆಯಲ್ಲಿ ಹುಳಿಯಾರಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಡೆಯುತ್ತಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.             ವೈದ್ಯನಾಗಲು ವೈದ್ಯಕೀಯ ಕೋರ್ಸ್ ಮಾಡಬೇಕು. ಲಾಯರ್ ಆಗಲು ಕಾನೂನು ಪದವಿ ಓದಬೇಕು. ಜಿಲ್ಲಾಧಿಕಾರಿ, ತಹಶೀಲ್ದಾರ್, ಶಿಕ್ಷಕ, ಉಪನ್ಯಾಸಕ ಹೀಗೆ ಯಾವುದೇ ಹುದ್ದೆ ಪಡೆಯಲು ಆ ಹುದ್ದೆಗೆ ಸಂಬಂಧಿಸಿದ ಅಧ್ಯಯನ ಅಗತ್ಯವಾಗಿದೆ.ಅದೇರೀತಿ ಕೃಷಿ ಮಾಡುವವರು ಮಣ್ಣಿನ ಬಗ್ಗೆ ಅರಿವು ಪಡೆಯಬೇಕು. ಜೀವ ವೈವಿದ್ಯಗಳ ಮಹತ್ವಗಳ ಬಗ್ಗೆ ಮಾಹಿತಿ ಹೊಂದಿರಬೇಕೆಂದರು.              ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ಪ್ರೊ.ಅಶೋಕ್, ಶಿಬಿರಾಧಿಕಾರಿ ಸೈ.ಇಬ್ರಾಹಿಂಸಾಬ್, ಆರ್.ಶಿವಯ್ಯ, ಸಹ ಶಿಬಿರಾಧಿಕಾರಿ ಜಿ.ಎಂ.ಚಂದ್ರಮೌಳಿ, ಕೆ.ಎಸ್.ಜಯಪ್ರಕಾಶ್, ಜಯಕರ್ನಾಟಕದ ಮೋಹನ್ ಕುಮಾರ ರೈ ಮತ್ತಿತರರಿದ್ದರು.

ಮಡಿವಾಳ ಸಮಾಜ ಬಾಂಧವರ ಪತ್ರಿಕಾಗೋಷ್ಠಿ

       ಚಿಕ್ಕನಾಯಕನಹಳ್ಳಿ ಪ್ರವಾಸಿ ಮಂದಿರದಲ್ಲಿ ಚಿತ್ರದುರ್ಗದ ಮಾಚೀದೇವರ ಬಸವ ಮಾಚಿದೇವ ಸ್ವಾಮಿಗಳ ಸಾನಿದ್ಯದಲ್ಲಿ ಮಡಿವಾಳ ಸಮಾಜ ಬಾಂಧವರ ಪತ್ರಿಕಾಗೋಷ್ಠಿ ನಡೆಯಿತು.            ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ಸಿ. ನಂಜಪ್ಪ ಮಾತನಾಡಿ ದೇಶದ ೧೯ ರಾಜ್ಯಗಳ ಮಾದರಿಯಲ್ಲಿಯೇ ಕರ್ನಾಟಕ ರಾಜ್ಯದ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿದರು.                   ಅಲ್ಲದೆ ಪ್ರೋ|| ಅನ್ನಪೂರ್ಣಮ್ಮ ರಾಜ್ಯ ಸರ್ಕಾರಕ್ಕೆ ನೀಡಿರುವ ೧೨ ಅಂಶಗಳ ಪ್ರಕಾರದ ವರದಿ ಅನುಸಾರ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.                 ಬಸವ ಮಾಚಿದೇವ ಸ್ವಾಮೀಜಿಗಳು ಮಾತನಾಡಿ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಸಮಾವೇಶಗಳನ್ನು ಮಾಡಿ ಸಂಘಟಿತರಾದಾಗ ಸರ್ಕಾರದಿಂದ ಸೌಲಭ್ಯ ಪಡೆಯಬಹುದು ಎಂದರು.                           ಈ ಸಂದರ್ಭದಲ್ಲಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರಾದ ಬಿ.ಕೆ.ತಿಮ್ಮಯ್ಯ,ಅಖಿಲ ಭಾರತ ದೋಬಿ ಮಹಾಸಭಾದ ಉಪಾಧ್ಯಕ್ಷ ಈರಣ್ಣ, ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ನಟರಾಜು, ನಿಜಲಿಂಗಪ್ಪ, ಶಂಕರ್, ಚಿ.ನಿ.ಪುರುಷೋತ್ತಮ್, ವೆಂಕಟರಾಮ್, ಬೆಳವಾಡಿ ಕುಮಾರ್,  ಸೀಬಯ್ಯ, ನಾಗರಾಜು ಸೇರಿದಂತೆ ಸಮಾಜದ ಮುಖಂಡರುಗಳು ,ಮತ್ತಿತ್ತರರು ಭಾಗವಹಿಸಿದ್ದರು.

ಲಂಬಾಣಿ ಜನಾಂಗದ ಅಭಿವೃದ್ದಿಗೆ ಕಾರ್ಯಕ್ರಮ-ಜಲಜಾನಾಯಕ್

(ಕೃಪೆ:ಚಿಕ್ಕನಾಯಕನಹಳ್ಳಿ ವರದಿಗಾರರು) ರಾಜ್ಯದಲ್ಲಿ ಲಂಬಾಣಿ ಜನಾಂಗದ ಜಾವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಲಂಬಾಣಿ ತಾಂಡಾಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಜಲಜಾನಾಯಕ್ ತಿಳಿಸಿದರು. ಅವರು ಲಂಬಾಣಿ ಜನಾಂಗದ ಆರಾಧ್ಯ ದೈವವಾದ ಭೀಮಾಸತಿ ದೇವಿ ಜಾತ್ರಾ ಮಹೋತ್ಸವದಲ್ಲಿ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು..ಬಂಜಾರ ಜನಾಂಗದವರಿಗೆ ಸರ್ಕಾರಿ ಸವಲತ್ತುಗಳು ಸಿಗುವಲ್ಲಿಆಗ್ತುತಿರುವ ತೊಂದರೆಯನ್ನು ನಿವಾರಿಸಲು ರಾಜ್ಯ ಸರ್ಕಾರ ತಾಂಡಾ ವಿಕಾಸ ಸಮಿತಿ ರಚಿಸುವ ಮೂಲಕ ಜನಾಂಗದ ಏಳಿಗೆಗೆ ಹೆಚ್ಚಿನ ಗಮನ ಹರಿಸುತ್ತಿದೆ.ಅಖಿಲ ಭಾರತ ಮಟ್ಟದಲ್ಲಿರುವ ನಮ್ಮ ಜನಾಂಗದ ಏಕೈಕ ಆರಾಧ್ಯ ದೈವವಾದ ಭೀಮಾಸತಿ ಜಾತ್ರೆ ನಡೆಯುವ ಈ ಸ್ಥಳದಲ್ಲಿ ಭಕ್ತರ ಅನುಕೂಲಕ್ಕಾಗಿ ೩ ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಅವರು ತಿಳಿಸಿದರು. ರಸ್ತೆ ಅಭಿವೃದ್ದಿ,ಕುಡಿಯುವ ನೀರಿನ ಅನುಕೂಲಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ.ಪ್ರತಿ ತಾಂಡಾಗಳಿಗೆ ಅಬಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ೧೨ ಲಕ್ಷ,ಹೋಬಳಿ ಮಟ್ಟಕ್ಕೆ ೫೦ ಲಕ್ಷ,ತಾಲೂಕು ಮಟ್ಟಕ್ಕೆ ೧.೫೦ಕೋಟಿ,ಜಿಲ್ಲಾ ಮಟ್ಟಕ್ಕೆ ೩ ಕೋಟಿ ರೂಗಳಂತೆ ರಾಜ್ಯದಲ್ಲಿ ೭೦೦ ಸಮುದಾಯ ಭವನಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.ವಿದ್ಯುತ್ ಉಳಿತಾಯಕ್ಕೆ ಗಮನ ಹರಿಸಿ ಸೋಲಾರ್ ಅಳವಡಿಸಿಕೊಳ್ಳಲು ೫೦ ಸಾವಿರ ಅನ

ರೈತರಿಗೆ ಜಾಮೀನು

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ಮದನಮಡು ಕೆರೆಯ ಅಚ್ಚುಕಟ್ಟೆದಾರರೂ ರಾಜಕಾಲುವೆ ತೆರವುಗೊಳಿಸುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿ ತಲೆಮರೆಸಿಕೊಂಡಿದ್ದ ರೈತರಿಗೆ ನ್ಯಾಯಾಲಯ ಜಾಮೀನು ನೀಡಿ ತಾತ್ಕಾಲಿಕವಾಗಿ ನಿರಾಳರಾಗುವಂತೆ ಮಾಡಿದೆ.

ಕಾರೇಹಳ್ಳಿ:ವೈಭವದ ರಂಗನಾಥಸ್ವಾಮಿ ರಥೋತ್ಸವ

ಹುಳಿಯಾರು : ಹೋಬಳಿಯ ಕಾರೇಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಮೂಲಸ್ಥಾನದಲ್ಲಿ ವೈಭವಯುತ ಬ್ರಹ್ಮ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸೋಮವಾರದಂದು ವೈಭವದಿಂದ ಜರುಗಿತು.                          ಕಳೆದ ಮೂರು ದಿನದಿಂದ ಜಾತ್ರೆ ಅಂಗವಾಗಿ ಸ್ವಾಮಿಗೆ ಕಂಕಣ, ಅಂಕುರಾರ್ಪಣೆ, ಧ್ವಜಾರೋಹಣ, ಉಯ್ಯಾಲೋತ್ಸವ, ಗಜಾರೋಹಣ, ಗರುಡ ವಾಹನೋತ್ಸವ, ಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದಿದ್ದು, ಇಂದು ಮುಂಜಾನೆಯಿಂದಲೆ ಬ್ರಹ್ಮ ರಥೋತ್ಸವದ ವಿವಿಧ ಪೂಜಾ ಕೈಂಕರ್ಯ ನಡೆದವು.ರಥೋತ್ಸವದ ಅಂಗವಾಗಿ ರಥವನ್ನು ಬಗೆಬಗೆ ಹೂ ಹಾರ, ಬಾವುಟಗಳಿಂದ ಸಿಂಗರಿಸಿದ್ದಲ್ಲದೆ, ಪುಣ್ಯಾಹ, ಅನ್ನಶಾಂತಿ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸಿದ್ದರು.                        ನಂತರ ರಂಗನಾಥಸ್ವಾಮಿಯ ಮೂಲಸ್ಥಾನದಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಯರೇಹಳ್ಳಿಯ ಕೆಂಪಮ್ಮ ಹಾಗೂ ಹೊಯ್ಸಳಕಟ್ಟೆ ಕರಿಯಮ್ಮ , ಕೆಂಚರಾಯ, ಭೂತಪ್ಪ ಹಾಗೂ ನಗಾರಿ ಹೊತ್ತ ಬಸವನೊಂದಿಗೆ ಪೂರ್ಣಕುಂಭ ಹಾಗೂ ವಾದ್ಯ ಮೇಳದೊಂದಿಗೆ ರಥದ ಬಳಿ ಕರೆತಂದು ಸಿಂಗಾರಗೊಂಡ ಸರ್ವಾಲಂಕೃಥ ರಥದಲ್ಲಿ ಶ್ರೀ ಸ್ವಾಮಿಯವರನ್ನು ಪ್ರತಿಷ್ಠಾಪಿಸಿ ಸಹಸ್ರಾರು ಭಕ್ತರು ಉದ್ಘೋಷದೊಂದಿಗೆ ರಥವನ್ನೆಳೆಯಲಾಯಿತು.                          ಸುಡುವ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಕಿಕ್ಕಿರಿದು ನೆರೆದಿದ್ದ ಭಕ್ತರು ಜಯಘೋಷದೊಂ

ನಿಧನ : ಸಾಹಿತಿ ನರಸಿಂಹಮೂರ್ತಿ

ಹುಳಿಯಾರು:  ಪಟ್ಟಣದಲ್ಲಿ ಸಾಹಿತಿಯೆಂದೆ ಖ್ಯಾತರಾಗಿದ್ದ ಹೆಚ್.ಬಿ.ನರಸಿಂಹಮೂರ್ತಿ(೮೦)ಸೋಮವಾರ ಬೆಳಗ್ಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. ಪಟ್ಟಣದ ದುರ್ಗಮ್ಮನ ಗುಡಿ ಬೀದಿಯಲ್ಲಿ ವಾಸವಾಗಿದ್ದ ಅವರಿಗೆ ಶನಿವಾರದಂದು ಲಘು ಹೃದಯಾಘಾತವಾಗಿ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೃತರು ಪತ್ನಿ ಹಾಗೂ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯರನ್ನು ಅಗಲಿದ್ದಾರೆ. ಕೆ ಎಸ್ ಆರ್ಟಿಸಿ ಯಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿ ನಿವೃತ್ತರಾಗಿದ್ದ ಮೃತರು ಅನೇಕ ನಾಟಕಗಳನ್ನು ರಚಿಸಿದ್ದರಲ್ಲದೆ ಚಿತ್ರಕಲೆಯಲ್ಲೂ  ತೊಡಗಿಸಿಕೊಂಡಿದ್ದರು.ಮೃತರ ಅಂತಿಮ ಸಂಸ್ಕಾರ ಮಂಗಳವಾರ ದಂದು  ನಡೆಯಲಿದೆ.

ನಿಧನ:ಕೆಂಕೆರೆ ಕೆ.ಬಿ.ರಮೇಶಣ್ಣ

ಹುಳಿಯಾರು:  ಪಟ್ಟಣದ ಬಸವೇಶ್ವರ ಜ್ಯುವೆಲ್ಲರ್ಸ್ ನ ಮಲ್ಲಿಕಾರ್ಜುನಸ್ವಾಮಿ ಅವರ ತಂದೆ ಕೆ.ಬಿ.ರಮೇಶಣ್ಣ  (೮೦) ಭಾನುವಾರ ರಾತ್ರಿ ನಿಧನರಾದರು. ವರ್ತಕರು ಹಾಗೂ ಮಲ್ಲಿಕಾರ್ಜುನ ಬಸ್ ಮಾಲೀಕರಾಗಿದ್ದ ರಮೇಶಣ್ಣನವರು ಜನಾನುರಾಗಿ ಯಾಗಿದ್ದರು.ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಹಾಗೂ ಮೂರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರ ಕೆಂಕೆರೆಯ ಅವರ ಹೊಲದಲ್ಲಿ ಸೋಮವಾರ ಮಧ್ಯಾಹ್ನ ಅಪಾರ ಬಂಧುಬಳಗದವರ ಸಮ್ಮುಖದಲ್ಲಿ ನೆರವೇರಿತು. ಮಾಜಿ ಶಾಸಕ ಕಿರಣ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.

ಭೀಮಾಸತಿ ತೀಥಾರಾಜ ಸ್ವಾಮಿ ಅದ್ದೂರಿ ಜಾತ್ರೆ

ಲಂಬಾಣಿ ಸಮಾಜದ ರಾಷ್ಟ್ರ ಪ್ರಸಿದ್ಧ ಭೀಮಾಸತಿ ತೀಥಾರಾಜ ಸ್ವಾಮಿಯವರ ೫೯ ನೇ ವರ್ಷದ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.ಜಾತ್ರೆಗೆಂದು ಹಲವು ರಾಜ್ಯಗಳಿಂದ ಲಂಬಾಣಿ ಸಮಾಜದ ಬಂಧುಗಳು ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.                ತಾಲೂಕಿನ ಹಂದನಕೆರೆ ಹೋಬಳಿ ದೊಡ್ಡ ಎಣ್ಣೆಗೆರೆಯ ಗ್ರಾಮದ ಅಖಿಲ ಭಾರತ ಲಂಬಾಣಿ ಯಾತ್ರಾ ಸ್ಥಳದಲ್ಲಿ ಮಾ.೧೭ ರಂದು ಆರಂಭಗೊಂಡಿತ್ತು.                ಜಾತ್ರೆಯಲ್ಲಿ, ಹೊರ ರಾಜ್ಯದ ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನ ಕೆಲವು ಭಾಗದಿಂದ ಭಕ್ತರು ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತಾದಿಗಳು ಬಿಸಿಲನ್ನು ಲೆಕ್ಕಿಸದೆ ಜಾತ್ರಾ ವಿಧಿವಿಧಾನದಲ್ಲಿ  ಭಾಗಿಯಾಗಿದ್ದರು.                 ಭೀಮಾಸತಿ ದೇವಾಲಯ ಕಮಿಟಿ ಕಾರ್ಯದರ್ಶಿ ರಘುನಾಥ್ ಮಾತನಾಡಿ, ಜಾತ್ರೆಗೂ ಒಂಬ್ಬತ್ತು ದಿನ ಮುನ್ನ ಗೋಧಿಯಿಂದ ತೀಸ್ ಆಚರಣೆ ಕೂಡ ನೆರವೇರಿಸುತ್ತಾರೆ. ಇದರಿಂದ ಜಾತ್ರೆ ದಿನದೊತ್ತಿಗೆ ಗೋಧಿ ಸಸಿಗಳು ಬೆಳೆದು ಅದನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದ ನಂತರ ಗಂಗೆಗೆ ನೈವೇದ್ಯ ಕೊಟ್ಟು ಆನಂತರ ಸಸಿಗಳನ್ನು ಭಕ್ತರಿಗೆ ಹಂಚುತ್ತಾರೆ.             ಈ ಜಾತ್ರೆಯಲ್ಲಿ ಬಂಜಾರ ಸಮಾಜದ ರಾಜ್ಯ ಮುಖಂಡ ಹಾಗೂ ಕಾರ್ಮಿಕ ಸಚಿವರಾದ ಪರಮೇಶ್ವರ ನಾಯಕ್, ಸಚಿವ ಟಿ.ಬಿ.ಜಯಚಂದ್ರ, ಸಂಸದ ಮುದ್ದಹನುಮೇಗೌಡ, ಬಂಜಾರ ತಂಡದ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾ ನಾಯಕ್, ಶಾಸಕರಾದ ಸಿ.ಬಿ.ಸುರೇಶ್‌ಬ

ಭೀಮಾಸತಿ ತೀಥಾರಾಜ ಸ್ವಾಮಿ ಅದ್ದೂರಿ ಜಾತ್ರೆ

ಲಂಬಾಣಿ ಸಮಾಜದ ರಾಷ್ಟ್ರ ಪ್ರಸಿದ್ಧ ಭೀಮಾಸತಿ ತೀಥಾರಾಜ ಸ್ವಾಮಿಯವರ ೫೯ ನೇ ವರ್ಷದ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.ಜಾತ್ರೆಗೆಂದು ಹಲವು ರಾಜ್ಯಗಳಿಂದ ಲಂಬಾಣಿ ಸಮಾಜದ ಬಂಧುಗಳು ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ತಾಲೂಕಿನ ಹಂದನಕೆರೆ ಹೋಬಳಿ ದೊಡ್ಡ ಎಣ್ಣೆಗೆರೆಯ ಗ್ರಾಮದ ಅಖಿಲ ಭಾರತ ಲಂಬಾಣಿ ಯಾತ್ರಾ ಸ್ಥಳದಲ್ಲಿ ಮಾ.೧೭ ರಂದು ಆರಂಭಗೊಂಡಿತ್ತು. ಜಾತ್ರೆಯಲ್ಲಿ, ಹೊರ ರಾಜ್ಯದ ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನ ಕೆಲವು ಭಾಗದಿಂದ ಭಕ್ತರು ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತಾದಿಗಳು ಬಿಸಿಲನ್ನು ಲೆಕ್ಕಿಸದೆ ಜಾತ್ರಾ ವಿಧಿವಿಧಾನದಲ್ಲಿ ಭಾಗಿಯಾಗಿದ್ದರು.                   ಭೀಮಾಸತಿ ದೇವಾಲಯ ಕಮಿಟಿ ಕಾರ್ಯದರ್ಶಿ ರಘುನಾಥ್ ಮಾತನಾಡಿ, ಜಾತ್ರೆಗೂ ಒಂಬ್ಬತ್ತು ದಿನ ಮುನ್ನ ಗೋಧಿಯಿಂದ ತೀಸ್ ಆಚರಣೆ ಕೂಡ ನೆರವೇರಿಸುತ್ತಾರೆ. ಇದರಿಂದ ಜಾತ್ರೆ ದಿನದೊತ್ತಿಗೆ ಗೋಧಿ ಸಸಿಗಳು ಬೆಳೆದು ಅದನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದ ನಂತರ ಗಂಗೆಗೆ ನೈವೇದ್ಯ ಕೊಟ್ಟು ಆನಂತರ ಸಸಿಗಳನ್ನು ಭಕ್ತರಿಗೆ ಹಂಚುತ್ತಾರೆ.                            ಈ ಜಾತ್ರೆಯಲ್ಲಿ ಬಂಜಾರ ಸಮಾಜದ ರಾಜ್ಯ ಮುಖಂಡ ಹಾಗೂ ಕಾರ್ಮಿಕ ಸಚಿವರಾದ ಪರಮೇಶ್ವರ ನಾಯಕ್, ಸಚಿವ ಟಿ.ಬಿ.ಜಯಚಂದ್ರ, ಸಂಸದ ಮುದ್ದಹನುಮೇಗೌಡ, ಬಂಜಾರ ತಂಡದ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾ ನಾಯಕ್, ಶಾಸಕರಾದ ಸಿ.ಬಿ.ಸುರೇಶ್‌ಬಾಬು, ಸುಧಾಕರ್‌ಲ

ಶ್ರದ್ದಾಭಕ್ತಿಯಿಂದ ನಡೆದ ಪೋಚಕಟ್ಟೆ ಕರಿಯಮ್ಮ ಜಾತ್ರಾ ಮಹೋತ್ಸವ

ಹುಳಿಯಾರು:ಸಮೀಪದ ಪೋಚಕಟ್ಟೆಯ ಗ್ರಾಮದೇವತೆ ಬೇವಿನಹಳ್ಳಿ ಶ್ರೀ ಕರಿಯಮ್ಮ ದೇವಿ ಅಮ್ಮನವರ ಸಿಡಿ ಕಾರ್ಯ ಹಾಗೂ ಓಕಳಿ ಭಾನುವಾರ ಮಧ್ಯಾಹ್ನ ನಡೆಯುವ ಮೂಲಕ ಮೂರು ದಿನಗಳ ಕಾಲದ ಜಾತ್ರಾಮಹೋತ್ಸವ ಪರಿಸಮಾಪ್ತಿಯಾಯಿತು.                      ಶುಕ್ರವಾರದಂದು ವಿವಿಧ ದೇವರುಗಳ ಆಗಮನದೊಂದಿಗೆ ಧ್ವಜಾರೋಹಣದ ಮೂಲಕ ಜಾತ್ರಾಮಹೋತ್ಸವ ಪ್ರಾರಂಭವಾಗಿ ಮಧುವಣಗಿತ್ತಿ ಸೇವೆ,ಮಡ್ಲಕ್ಕಿ ಸೇವೆ ಹಾಗೂ ಆರತಿ ಬಾನ ನಡೆದರೆ ಶನಿವಾರದಂದು ಗಂಗಾಸ್ನಾನ, ಹೊಳೆಸೇವೆ,ನಡೆಮುಡಿ ನಡೆದು ನಂತರ ಹರಕೆ ರೂಪವಾಗಿ ಕೆಂಡ ಸೇವೆ ಮಾಡಲಾಗಿತ್ತು.                              ಭಾನುವಾರದಂದು ಸಿಡಿ ಕಾರ್ಯದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಿತು. ಪೋಚಕಟ್ಟೆಯ ಗ್ರಾಮದೇವತೆ ಕರಿಯಮ್ಮದೇವಿಯೊಂದಿಗೆ ಚಿಕ್ಕಬಿದರೆ ಕರಿಯಮ್ಮ,ಕೋಡಿಹಳ್ಳಿ ಕೊಲ್ಲಾಪುರದಮ್ಮ,ಪೋಚಕಟ್ಟೆ ಕಾಲಭೈರವ,ಸಂಗೇನಹಳ್ಳಿ ಆಂಜನೇಯಸ್ವಾಮಿ ಹಾಗೂ ಕೊಲ್ಲಾಪುರದಮ್ಮ ದೇವರುಗಳನ್ನು ದೇವಾಲಯದಿಂದ ಸಿಡಿಕಂಬದವರೆಗೆ ಮೆರವಣಿಗೆಯಲ್ಲಿ ಕಳಸ ಸಮೇತ ಕರೆತಂದು ಪೂಜೆ ಸಲ್ಲಿಸಲಾಯಿತು.                                ಸಿಡಿ ಕಾರ್ಯದ ಅಂಗವಾಗಿ ಸಿಡಿಮರವನ್ನು ಕೆಂಪು,ಬಿಳಿ ಬಣ್ಣ ಬಳಿದು ಮಾವಿನ ಸೊಪ್ಪಿನಿಂದ ಅಲಂಕರಿಸಲಾಗಿತ್ತು. ಸಿಡಿಮರದ ಒಂದು ತುದಿಗೆ ಗ್ರಾಮದೇವತೆ ಕರಿಯಮ್ಮನನ್ನು ಕೂರಿಸಿ ಭಕ್ತರ ಹರ್ಷೋದ್ಗಾರದಲ್ಲಿ ಸಿಡಿಮರವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಲಾಯಿತು.

ಸುಸೂತ್ರವಾಗಿ ನಡೆಯುತ್ತಿರುವ ದ್ವಿತೀಯ ಪಿಯು ಪರೀಕ್ಷೆ

ಹುಳಿಯಾರು -ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಯಾವುದೇ ಸಮಸ್ಯೆಗಳಿಲ್ಲದೆ ಸುಸೂತ್ರವಾಗಿ ನಡೆದಿದೆ.ಇಂದು ನಾಲ್ಕನೇ ದಿನವಾಗಿದ್ದು ಬುಧವಾರದಂದು ನಡೆದ ಅರ್ಥ ಶಾಸ್ತ್ರ ಪರೀಕ್ಷೆಗೆ ೫೫೯ ವಿದ್ಯಾರ್ಥಿಗಳ ಪೈಕಿ ೩೫ ಮಂದಿ ಗೈರಾಗಿ ೫೨೪ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ತಾಲ್ಲೂಕಿನಲ್ಲಿ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಮಾತ್ರವೇ ಪರೀಕ್ಷಾ ಕೆಂದ್ರಗಳಾಗಿದ್ದು ಹುಳಿಯಾರಿನ ಕೇಂದ್ರಕ್ಕೆ ಬೋರನಕಣಿವೆ ಕಾಲೇಜು,ದೊಡ್ಡ ಎಣ್ಣೆಗೆರೆ ಕಾಲೇಜು,ಬರಗೂರು-ಬೆಳಗುಲಿ ಕಾಲೇಜು,ಹುಳಿಯಾರಿನ ಕನಕದಾಸ ಹಾಗೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಸೇರಿದಂತೆ ಒಟ್ಟು ಆರು ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಗಮಿಸುತ್ತಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿದ್ದು ನಕಲು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಒದಗಿಸಲಾಗಿತ್ತು.ನಕಲು ತಡೆಗಟ್ಟಲು ೩ ಜನರ ವಿಶೇಷ ಜಾಗೃತದಳ ಕೂಡ ಕಾರ್ಯನಿರ್ವಹಿಸುತ್ತಿದ್ದು ಇದುವರೆಗೂ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವ ಅಥವಾ ವಿದ್ಯಾರ್ಥಿಗಳು ಡಿಬಾರ್ ಆಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಇಂದು ನಡೆದ ಅರ್ಥಶಾಸ್ತ್ರ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳು ಉತ್ತಮವಾಗಿ ಬರೆದಿರುವ ವಿಶ್ವಾಸ ವ್ಯಕ್ತಪಡಿಸಿ

ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ೨ ಕೋಟಿ ಅನುದಾನ :ಜಯಚಂದ್ರ

ಹುಳಿಯಾರು:ರಾಜಕೀಯವಾಗಿ ತವರು ಕ್ಷೇತ್ರವಾಗಿರುವ ಹುಳಿಯಾರಿಗೆ ದೇವಸ್ಥಾನ ಹಾಗೂ ರುದ್ರಭೂಮಿ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆ ಸಚಿವನಾಗಿದ್ದ ಅವಧಿಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆಮಾಡಿದ್ದು ಅದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವಂತೆ ಸಚಿವ ಜಯಚಂದ್ರ ತಿಳಿಸಿದರು. ಸಚಿವ ಜಯಚಂದ್ರ ಹುಳಿಯಾರು ಸಮೀಪದ ನಿರುವಗಲ್ ಹುಲ್ಕಲ್ ದುರ್ಗಮ್ಮನ ಬೆಟ್ಟಕ್ಕೆ ಆಗಮಿಸಿದ ವೇಳೆ ಹುಳಿಯಾರಿನಲ್ಲಿ ಕಾಂಗ್ರೆಸ್ ಮುಖಂಡರುಗಳನ್ನುದ್ದೇಶಿಸಿ ಮಾತನಾಡಿದರು. ಮಂಗಳವಾರ ರಾತ್ರಿ ಹುಳಿಯಾರು ಸಮೀಪದ ನಿರುವಗಲ್ ಹುಲ್ಕಲ್ ದುರ್ಗಮ್ಮನ ಬೆಟ್ಟಕ್ಕೆ ಆಗಮಿಸಿದ ವೇಳೆ ಹುಳಿಯಾರಿನಲ್ಲಿ ಕಾಂಗ್ರೆಸ್ ಮುಖಂಡರುಗಳು ಸಚಿವರನ್ನು ಪಟಾಕಿ ಸಿಡಿಸಿ ಭರ್ಜರಿಯಾಗಿ ಸ್ವಾಗತಿಸಿ ಸಂಭ್ರಮಿಸಿದರು. ಈ ವೇಳೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಹುಳಿಯಾರು ಕ್ಷೇತ್ರದ ಬಾಂಧವ್ಯ ಇಂದು ನಿನ್ನೆಯದಲ್ಲ. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭಿವೃದ್ಧಿಗೆಂದು ೨ ಕೋಟಿ ಹಣ ಬಿಡುಗಡೆಮಾಡಿದ್ದು ಮಾರ್ಚ್ ತಿಂಗಳಿನೊಳಗೆ ಅನುದಾನ ವಿನಿಯೋಗಮಾಡಿಕೊಳ್ಳುವಂತೆ ತಿಳಿಸಿದರು.ಹುಳಿಯಾರು ಆಸ್ಪತ್ರೆಗೆ ಖಾಯಂ ವೈದ್ಯಾಧಿಕಾರಿ ನೇಮಿಸುವ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಈ ವೇಳೆ ಗ್ರಾಪಂ ಸದಸ್ಯರಾದ ಧನುಷ್ ರಂಗನಾಥ್,ಬಡ್ಡಿಪುಟ್ಟಣ್ಣ,ಕೆಂಪಮ್ಮ,ವಕೀಲ ರಮೇಶ್ ಬಾಬು,ಬಿ.ವಿ.ಶ್ರೀನಿವಾಸ್,ಮಾಜಿ ತಾಪಂ ಸದಸ್ಯ ಮಲ್ಲಿಕಾರ್ಜು

ಚಿ.ನಾ.ಹಳ್ಳಿಯಲ್ಲಿ ಗುರುಪರಪ್ಪಸ್ವಾಮಿ ದೇವಾಲಯದ 25ನೇ ವರ್ಷದ ವಾರ್ಷೀಕೋತ್ಸವ

                  ಚಿಕ್ಕನಾಯಕನಹಳ್ಳಿಯ ಶ್ರೀ ಗುರುಪರಪ್ಪಸ್ವಾಮಿ ಮಠ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಜತ ಕವಚ ಧಾರಣಾ ಕಾರ್ಯಕ್ರಮವನ್ನು ಇದೇ ಮಾರ್ಚ್ 21 ಹಾಗೂ 22 ನಡೆಯಲಿದೆ.                   ಮಾ.21 ರ ಸೋಮವಾರ ರಜತ ಕವಚಕ್ಕೆ ಗಂಗಾಸ್ನಾನ ಶ್ರೀ ತೀರ್ಥರಾಮಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡೆಯಲಿದೆ.                    22ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ, ನಂದಾದೀಪ, 9ಗಂಟೆಗೆ ಅಭಿಷೇಕ, ರಜತಕವಚಧಾರಣೆ, ಗಣಪತಿ ಹೋಮ, ನವಗ್ರಹಹೋಮ, ಮಹಾಮೃತ್ಯುಂಜಯ ಹೋಮ, ಮಧ್ಯಾಹ್ನ 12ಕ್ಕೆ ಪೂಣರ್ಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, 12.30ಕ್ಕೆ ಶ್ರೀ ದೇವಿಪಾರಾಯಣ, ರಾತ್ರಿ 8ಕ್ಕೆ ಆರಂಭಗೊಳ್ಳುವ ಭಜನೆ ಅಹೋರಾತ್ರಿ ನಡೆಯಲಿದೆ.                   ಇದೇ 22ರಂದು ರಾತ್ರಿ 8ಕ್ಕೆ  ಧಾರ್ಮಿಕ ಸಮಾರಂಭ ನಡೆಯಲಿದ್ದು ಕನಕ ಹೊಸದುರ್ಗ ಗುರುಪೀಠದ ಶ್ರೀ ಈಶ್ವರಾನಂದಪುರಿಸ್ವಾಮೀಜಿ ಸಾನಿದ್ಯ ವಹಿಸುವರು. ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪರಪ್ಪಸ್ವಾಮಿ ಮಠದ ಅಧ್ಯಕ್ಷ ಸಿ.ಎಸ್.ದೊರೆಸ್ವಾಮಿ, ಪುರಸಭಾಧ್ಯಕ್ಷೆ ಪ್ರೇಮದೇವರಾಜು, ಉಪಾಧ್ಯಕ್ಷ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ, ಕ್ಯಾಪ್ಟನ್ಸೋಮಶೇಖರ್, ಪುರಸಭಾ ಸದಸ್ಯ ಸಿ.ಟಿ.ದಯಾನಂದ, ಸಿ.ಎಸ್.ರಾಜಣ್ಣ ಹಾಗೂ ಸಿ.ಬಸವರಾಜು ಮತ್ತಿತರರು ಪಾಲ್ಗೊಳ್ಳುವರು.                       23ರಂದು ಬುಧವಾರ ಮಧ್ಯಾಹ

ಮಾರ್ಚ್ ೨೦ : ಚಿ.ನಾ ಹಳ್ಳಿ ರೋಟರಿ ಕ್ಲಬ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ

ಚಿಕ್ಕನಾಯಕನಹಳ್ಳಿಯ ರೋಟರಿ ಶಾಲಾ ಆವರಣದಲ್ಲಿ ಹೃದಯ ರೋಗ ಹಾಗೂ ಮಹಿಳೆಯರಿಗಾಗಿ ಸ್ತನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾರ್ಚ್ 20 ರಂದು ಹಮ್ಮಿಕೊಳ್ಳಲಾಗಿದೆ.                 ಚಿ.ನಾ.ಹಳ್ಳಿ ರೋಟರಿ ಕ್ಲಬ್, ತಾಲ್ಲೂಕು ವೈದ್ಯರ ಸಂಘ, ಸಾರ್ವಜನಿಕ ಆಸ್ಪತ್ರೆ, ನಾರಾಯಣ ಇನ್ಸ್ಟಿಟ್ಯೂಟ್ ಕಾರ್ಡಿಯಕ್ ಸೈನ್ಸೆಸ್ ಇವರ ಸಂಯುಕ್ತಾಶ್ರಯದಲ್ಲಿ  ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ರೋಟರಿ ಕ್ಲಬ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.  ರೋಗಿಗಳು ಈ ಹಿಂದೆ ತಪಾಸಣೆ ಮಾಡಿಸಿದ್ದರೆ ಸಂಬಂಧಿಸಿದ ಮಾಹಿತಿಗಳನ್ನು ಶಿಬಿರಕ್ಕೆ ತರುವುದು ಎಂದು ತಿಳಿಸಲಾಗಿದ್ದು   ಹೆಚ್ಚಿನ ಮಾಹಿತಿಗಾಗಿ 9448748225 ನಂ.ಗೆ ಸಂಪರ್ಕಿಸಬಹುದಾಗಿದೆ.

ಇಂದಿನಿಂದ ಕಂದಿಕೆರೆ ಶ್ರೀ ಗುರು ರೇವಣಸಿದ್ದೇಶ್ವರ ಶಿಲಾ ಪ್ರತಿಷ್ಠಾಪನಾ ಮಹೋತ್ಸವ

ತಾಲ್ಲೂಕಿನ ಕಂದಿಕೆರೆಯ ಶ್ರೀ ಗುರು ರೇವಣಸಿದ್ದೇಶ್ವರ ಶಿಲಾ ಪ್ರತಿಷ್ಠಾಪನಾ, ಹಾಲುಮತ ಸಂಸ್ಕೃತಿಗಳ ಉತ್ಸವ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಸಾರ್ವಜನಿಕ ಸಮುದಾಯ ಭವನದ ಉದ್ಘಾಟನೆ ಇದೇ ತಿಂಗಳ ಮಾರ್ಚ್ ೧೬ರಿಂದ ೧೮ರವರೆಗೆ ನಡೆಯಲಿದೆ.         ಶ್ರೀ ಗುರುರೇವಣಸಿದ್ದೇಶ್ವರ ಸ್ವಾಮಿ ಶ್ರೀ ಗುರುಮಠದಲ್ಲಿ ಕಾರ್ಯಕ್ರಮ ನಡೆಯಲಿದ್ದು ಮಾರ್ಚ್ ೧೬ರಂದು ಹೊಸದುರ್ಗ ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿಸ್ವಾಮಿ ದಿವ್ಯಸಾನಿದ್ಯದಲ್ಲಿ ಗುರುರೇವಣಸಿದ್ದೇಶ್ವರರು ಶ್ರೀ ದಶರಥರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಗಂಗಾಸ್ನಾನ ,ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವ ದೇವರುಗಳ ಉತ್ಸವ ನಡೆಯಲಿದೆ ಹಾಗೂ ಹೋಮ ಹವನಗಳು ನಡೆಯಲಿದೆ. ೧೭ರ ಗುರುವಾರದಂದು ಶ್ರೀ ಗುರು ರೇವಣಸಿದ್ದೇಶ್ವರ ಸಾರ್ವಜನಿಕ ಸಮುದಾಯ ಭವನದ ಉದ್ಘಾಟನೆ ನೆರವೇರಲಿದ್ದು ಹಾವೇರಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಕೆ.ಆರ್.ನಗರ ಕನಕ ಗುರುಪೀಠದ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ, ದೇವದುರ್ಗ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸುವರು.                 ಸಚಿವ ಟಿ.ಬಿ.ಜಯಜಂದ್ರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್‌ಬಾಬು ಅಧ್ಯಕ್ಷತೆ ವಹಿಸುವರು. ಸಂಸದ ಎಸ್.ಪಿ.ಮುದ್ದಹನುಮೇಗೌಡ ದಾನಿಗಳ ನಾಮಫಲಕ ಅನಾವರಣಗೊಳಿಸುವರು. ಹೊಸದುರ್ಗ

ಮರಳಿನಲ್ಲಿ ಅರಳಿದ ಕಲೆ

ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು ಮರಳಿನಲ್ಲಿ ಮೂಡಿಸಿದ ಚಿತ್ರ ಗಮನ ಸೆಳೆಯಿತು.

ಮೇಕೆಗೆ ಸೊಪ್ಪು ತರಲು ಹೋಗಿದ ವ್ಯಕ್ತಿಗೆ ವಿದ್ಯುತ್ ತಗುಲಿ ಸಾವು

ಮೇಕೆಗಳಿಗೆ ಸೊಪ್ಪು ತರಲು ಹೋದ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿರುವ ಘಟನೆ ಕಾತ್ರಿಕೆಹಾಳ್ ಗ್ರಾಮದ ಹೊಸೂರಿನಲ್ಲಿ ನಡೆದಿದೆ. ತಾಲ್ಲೂಕಿನ ಕಂದಿಕೆರೆ ಹೋಬಳಿ ಕಾತ್ರಿಕೆಹಾಳ್ ಗ್ರಾಮದ ನಾಗರಾಜು(ರಾಜು) 40 ವರ್ಷ ಮೃತಪಟ್ಟ ದುರ್ದೈವಿ .ಸೋಮವಾರ ಬೆಳಗ್ಗೆ ಈತ ಮೇಕೆಗಳಿಗೆ ಸೊಪ್ಪು ಕತ್ತರಿಸಲು ಮರಕ್ಕೆ ಹತ್ತಿದ ವೇಳೆ ಈ ಅವಘಡ ಸಂಭವಿಸಿದೆ.    ಚಿಕ್ಕನಾಯಕನಹಳ್ಳಿಯಿಂದ ಹಾಗಲವಾಡಿಗೆ ಹೋಗುವ ಮಾರ್ಗ ಮಧ್ಯದ 14 ನೇ ಕಿಲೋಮೀಟರ್ ಕಲ್ಲಿನ ಬಳಿ ಇರುವ ಗೋಣಿಮರವು ನಿರಂತರ ವಿದ್ಯುತ್ ಕಂಬದ ತಂತಿಗಳಿಗೆ ತಗುಲಿಕೊಂಡಿದ್ದು, ವಿದ್ಯುತ್ ತಂತಿಯು ತರಂಗ ಸ್ಪರ್ಶದಿಂದಾಗಿ ವ್ಯಕ್ತಿಗೆ ಪ್ರವಹಿಸಿ ಆತ ಸ್ಥಳದಲ್ಲೇ ಸಾವನ್ನಪ್ಪುವಂತೆ ಮಾಡಿದೆ. ಮೃತನು ಹೆಂಡತಿ ನಲ್ಲೂರಮ್ಮ ಹಾಗೂ ೬ ನೇ ತರಗತಿ ಹಾಗೂ ಅಂಗನವಾಡಿಗೆ ಹೋಗುತ್ತಿರುವ ಎರಡು ಪುಟ್ಟ ಹೆಣ್ಣು ಮಕ್ಕಳನ್ನು ಅಗಲಿದ್ದು ಈ ಅವಘಡದಿಂದಾಗಿ ಇಡೀ ಕುಟುಂಬ ಯಜಮಾನನಿಲ್ಲದೆ ಅನಾಥವಾಗಿದೆ. ಘಟನಾ ಸ್ಥಳಕ್ಕೆ ಬೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಾಗೂ ಪೋಲಿಸ್ ಇಲಾಖೆ ಭೇಟಿ ನೀಡಿದ್ದು ಚಿಕ್ಕನಾಯಕನಹಳ್ಳಿ ಪಿಎಸ್ ಐ ವಿಜಯಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕನಾಯಕನಹಳ್ಳಿ ಶವಾಗಾರದಲ್ಲಿ ಶವ ಪರೀಕ್ಷೆ ನಡೆಯಿತು.

ವಾಸವಿ ಶಾಲೆಯಲ್ಲಿ ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ

ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ --------------------- ಹುಳಿಯಾರು: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು ಅಗತ್ಯವಾಗಿದ್ದು ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ವಿಜ್ಞಾನ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಆಸಕ್ತಿವಹಿಸಿ ಆ ಬಗ್ಗೆ ಮಾಹಿತಿ ಕಲೆಹಾಕಿದಾಗ ಅವರು ಪರಿಪೂರ್ಣ ವಿದ್ಯಾರ್ಥಿಗಳಾಗಲು ಸಾಧ್ಯ ಎಂದು ಕಾರ್ಯದರ್ಶಿ ಟಿ.ಎಸ್.ರಾಮನಾಥ್ ನುಡಿದರು. ಹುಳಿಯಾರು ವಾಸವಿ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅಗ್ನಿ ಪರ್ವತದಲ್ಲಿ ಲಾವಾರಸ ಹೊರಹೊಮ್ಮುವ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸುತ್ತಿರುವ ಮಕ್ಕಳು ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಸೋಮವಾರದಂದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ವಿಜ್ಞಾನ,ಪರಿಸರ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ೧೨೦ ಮಾದರಿಗಳನ್ನು ಪ್ರದರ್ಶಿಸಿದರು.ವಿದ್ಯಾರ್ಥಿಗಳು ತಾವು ತಯಾರಿಸಿರುವ ಮಾದರಿ ಅದರ ಉದ್ದೇಶ ಮತ್ತು ಅದರ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ಭೌತಶಾಸ್ತ್ರಕ್ಕೆ ಸಂಬಂಧಿಸಿದಂತೆ ಪ್ರದರ್ಶಿಸಿದ ಹಲವು ಮಾದರಿಗಳು ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುವಂತಿದ್ದವು.ವಿಜ್ಞಾನ ಶಿಕ್ಷಕ ಪದ್ಮಾಕರ್,ಪುಷ್ಪಲ

ಹತ್ತನೇ ತರಗತಿ ವಿಜ್ಞಾನ ವಿದ್ಯಾರ್ಥಿಗಳಿಗೆ ನೇರ ಫೋನ್ ಇನ್

ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ ---------------------------------- ಹುಳಿಯಾರು: ಹತ್ತನೇ ತರಗತಿ ಪರೀಕ್ಷೆ ಬರೆಯುವ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಕುರಿತಂತೆ ಮನದಲ್ಲಿರುವ ಭಯ ,ಆತಂಕ ನಿವಾರಿಸಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಇವರ ಜಂಟಿ ಸಹಯೋಗದಲ್ಲಿ ಹುಳಿಯಾರಿನ ವಾಸವಿ ವಿದ್ಯಾಶಾಲೆಯಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕ್ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಇವರ ಜಂಟಿ ಸಹಯೋಗದಲ್ಲಿ ಹುಳಿಯಾರಿನ ವಾಸವಿ ವಿದ್ಯಾಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ,ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಛೇರಿಯ ಟಿ.ಜಿ.ಲಾವಣ್ಯ ಉದ್ಘಾಟಿಸಿದರು.ನಟರಾಜು,ಗಂಗಾಧರ್,ರಮೇಶ್ ಇದ್ದಾರೆ.  ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ವಿದ್ಯಾರ್ಥಿಗಳು ಗಾಬರಿ ಆತಂಕಕ್ಕೆ ಒಳಗಾಗದೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿದಲ್ಲಿ ಗುರಿಮುಟ್ಟುವುದು ಸುಲಭ ಎಂದರು. ಇದೇರೀತಿಯ ಕಾರ್ಯಕ್ರಮಗಳನ್ನು ಎಲ್ಲಾ ವಿಷಯಗಳಿಗೂ ಸಂಬಂಧಿಸಿದಂತೆ ಆಯೋಜಿಸಿ ಮಾರ್ಗದರ್ಶನ ನೀಡಬೇಕೆಂದು ಸಲಹೆ ನೀಡಿದರು. ಸೋಮವಾರ ಮದ್ಯಾಹ