ಹುಳಿಯಾರು:ಪಟ್ಟಣದ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯ ಸಮಿತಿಯಿಂದ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಸೂಪರ್ ಶಿವರಾತ್ರಿ ಗೇಮ್ಸ್ ಶೋ ಆಯೋಜಿಸಲಾಗಿತ್ತು.
ಸೋಮವಾರ ರಾತ್ರಿ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಆಟೋಟಗಳಲ್ಲಿ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಪಾಲ್ಗೊಂಡಿದ್ದರು.ಮಡಕೆ ಒಡೆಯುವ ಆಟ,ನಟ್ ಬೋಲ್ಟ್ ಜೋಡಿಸುವುದು,ಮ್ಯೂಸಿಕಲ್ ಚೇರ್ ಸೇರಿದಂತೆ ಹತ್ತು ಹಲವಾರು ಆಟಗಳನ್ನು ಮುಂಜಾನೆಯವರೆಗೆ ಆಡಿಸಲಾಯಿತು.
ಸಮಿತಿಯ ವಿನೋದ್ ರಾಜ್,ಚಂದ್ರುಶೇಖರ್,ಕಿರಣ್ ಕುಮಾರ್, ಶಶಿಕುಮಾರ್, ಮಲ್ಲಿಕಾರ್ಜುನಯ್ಯ, ಚನ್ನಬಸವಯ್ಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ