ಹುಳಿಯಾರು: ಇಲ್ಲಿನ ಬಸ್ ನಿಲ್ದಾಣದಲ್ಲಿನ ಬಸ್ ಶೆಲ್ಟರ್‌ನ ಸ್ಥಳದಲ್ಲಿ ಪ್ರಯಾಣಿಕರಿಗೆ ಕೂರಲು ಆಸನಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ನಂತರ ಫುಟ್‌ಪಾತ್ ಅಂಗಡಿಗಳ ಸುಂಕ ವಸೂಲಾತಿ ಗುತ್ತಿಗೆ ಹರಾಜು ನಡೆಸಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷ ಗಣೇಶ್ ತಿಳಿಸಿದರು.
ಹುಳಿಯಾರಿನ ಗ್ರಾಪಂ ಆವರಣದಲ್ಲಿ ನಡೆದ ಬಸ್ ಸುಂಕ ಮತ್ತು ಸಂತೆ ಸುಂಕ ವಸೂಲಾತಿ ಗುತ್ತಿಗೆ ಹರಾಜು ನಡೆಸುವ ವೇಳೆ ಆಗಮಿಸಿದ ಫುಟ್‌ಪಾತ್ ಅಂಗಡಿಯವರೊಂದಿಗೆ ಅವರು ಮಾತನಾಡಿದರು.
ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಕಲ್ಪಿಸಿದ ನಂತರ ಬಸ್ ನಿಲ್ದಾಣದಲ್ಲಿನ ುಟ್‌ಪಾತ್ ಅಂಗಡಿಯವರನ್ನು ಮತ್ತು ಡಾ:ರಾಜಕುಮಾರ್ ರಸ್ತೆಯಲ್ಲಿನ ಸಣ್ಣಪುಟ್ಟ ಗೂಡಂಗಡಿಯವರನ್ನು ಪ್ರತ್ಯೇಕ ಸಭೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲನಿಬಂಧನೆಗಳಿಗೆ ಒಳಪಡಿಸಿ ಸುಂಕ ವಸೂಲಾತಿ ಗುತ್ತಿಗೆ ಹರಾಜು ನಡೆಸಲಾಗುವುದು ಎಂದರು.
ಬಸ್‌ನಿಲ್ದಾಣದ ಫುಟ್‌ಪಾತ್ ಅಂಗಡಿಯ ಹೂವಿನರಘು ಮಾತನಾಡಿ ಬಸ್‌ಶೆಲ್ಟರ್ ಸ್ಥಳದಲ್ಲಿನ ಸಣ್ಣಪುಟ್ಟ ಅಂಗಡಿಗಳನ್ನು ನಾವೇ ಸ್ವಯಂ ಪ್ರೇರಣೆಯಿಂದ ತೆರವು ಮಾಡುತ್ತೇವೆ. ಅಲ್ಲಿ ಪ್ರಾಯಾಣಿಕರಿಗೆ ಕೂರಲು ಆಸನದ ವ್ಯವಸ್ತೆ ಕಲ್ಪಿಸಿ. ನಂತರ ಅಲ್ಲಿಯೇ ಇರುವ ಅಲ್ಪ ಸ್ವಲ್ಪ ಜಾಗದಲ್ಲಿ ಅನೇಕ ವರ್ಷಗಳಿಂದ ಅಂಗಡಿಯಿಟ್ಟು ಜೀವನ ನಡೆಸಿಕೊಂಡು ಬರುತ್ತಿರುವಂತ ಬಡವರಿಗೆ ಸ್ಥಳವಾಕಾಶ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಜೆಡಿಎಸ್ ಮುಖಂಡ ಪ್ರಸನ್ನ ಕುಮಾರ್ ಧ್ವನಿಗೂಡಿಸಿ ಮಾತನಾಡಿ ಈ ಸಂಬಂಧ ಕಳೆದ ೨ ವರ್ಷಗಳ ಹಿಂದೆ ಶಾಸಕ ಸಿ.ಬಿ.ಸುರೇಶ್‌ಬಾಬು ರವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಬಸ್ ನಿಲ್ದಾಣದಲ್ಲಿನ ಸಣ್ಣಪುಟ್ಟ ಅಂಗಡಿಯವರಿಗೆ ಮತ್ತು ಪ್ರಯಾಣಿಕರಿಗೆ ಕೂರಲು ಅನುಕೂಲವಾಗುವ ರೀತಿಯಲ್ಲಿ ಬಸ್ ಶೆಲ್ಟರ್ ನಿರ್ಮಾಣದ ನಕ್ಷೆ ಸಿದ್ದಪಡಿಸುವ ಬಗ್ಗೆ ಎಂಜಿನಿಯರ್ ಶಿವನಂದ್‌ಗೆ ಸೂಚಿಸಿದ್ದರು. ಎಂಜಿನಿಯರ್ ಸಹಾ ಇಬ್ಬರಿಗೂ ಅನುಕೂಲ ವಾಗುವ ನಿಟ್ಟಿನಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ ಎಂದಿದ್ದರು ಎಂದು ನೆನಪು ಮಾಡಿ ಕೊಂಡರು.
ಪಿಡಿಓ ಸಿದ್ದರಾಮಯ್ಯ ಮಾತನಾಡಿ ಈ ಸಂಬಂದ ಶಾಸಕರು ಹಾಗೂ ಇಂಜಿನಿಯರವರನ್ನು ಸಂಪರ್ಕಿಸಿ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸಣ್ಣಪುಟ್ಟ ಅಂಗಡಿಯವರಿಗೆ ತೊಂದರೆಯಾಗದ ರೀತಿಯಲ್ಲಿ ಪಾರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಪುಟ್ಟಬಾತ್ ವಸೂಲಾತಿ ಸುಂಕದ ಹರಾಜು ನಡೆಸಲಾಗುವುದು ಎಂದರು.
ಹರಾಜು ಪ್ರಕ್ರಿಯೆ: ಸುಂಕ ವಸೂಲಾತಿಯ ಹರಾಜು ಮುಂದುವರೆದು ಬಸ್ ಗಳ ಸುಂಕ ವಸೂಲಾತಿಯ ಹರಾಜು ೨ ಲಕ್ಷಕ್ಕೆ, ಮತ್ತು ಸಂತ್ತೆ ಸುಂಕ ವಸೂಲಾತಿಯ ಹರಾಜು ೨.೫೦ ಲಕ್ಷಕ್ಕೆ ನಡೆಯಿತು.
ಈ ಹರಾಜು ಪ್ರಕ್ರಿಯೆಯ ಅಧ್ಯತೆಯನ್ನ ಗ್ರಾಪಂ ಅಧ್ಯಕ್ಷೆ ಗೀತಪ್ರದೀಪ್ ವಯಿಸಿದ್ದರು, ತಾಪಂ ಸದಸ್ಯ ಹೆಚ್.ಎನ್.ಕುಮಾರ್, ಗ್ರಾಪಂ ಸದಸ್ಯರಾದ ರಾಘವೇಂದ್ರ, ಸೈಯದ್ ಜಬೀಹುಲ್ಲಾ, ವೆಂಕಟೇಶ್, ಸಿದ್ದಗಂಗಮ್ಮ, ಶಶಿಕಲಾ, ಗೀತಅಶೋಕ್‌ಬಾಬು, ಬಡ್ಡಿಪುಟ್ಟಣ್ಣ, ಪುಟ್ಟಮ್ಮ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ