ಹುಳಿಯಾರು: ಹೋಬಳಿಯ ಸೋಮನಹಳ್ಳಿ ಮಜುರೆ ಕ್ಯಾತದೇವರಹಟ್ಟಿಯಲ್ಲಿ ಮಹಾಶಿವರಾತ್ರಿ ಜಾತ್ರಾಮಹೋತ್ಸವ ಮಂಗಳವಾರ ಹಾಗೂ ಬುಧವಾರದಂದು ನಡೆಯಲಿದೆ.
ಮಂಗಳವಾರದಂದು ಕ್ಯಾತದೇವರಹಟ್ಟಿಯಲ್ಲಿ ಕ್ಯಾತಲಿಂಗೇಶ್ವರ ಸ್ವಾಮಿಯ ಉತ್ಸವ ಹಾಗೂ ರಾತ್ರಿ ೯ ಕ್ಕೆ ಶಾಲಾಮಕ್ಕಳಿಂದ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
ಬುಧವಾರದಂದು ದಬ್ಬಗುಂಟೆ ಗ್ರಾಮದ ಗಡಿಯಲ್ಲಿ ನೆಲಸಿರುವ ಮಹಾಸಂತೆ ಪೂಜಾರಿ ತಮ್ಮಣ್ಣಸ್ವಾಮಿ ಕ್ಷೇತ್ರದಲ್ಲಿ ಜಾತ್ರಾಮಹೋತ್ಸವ ಜರುಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ