ಹುಳಿಯಾರು: ಹೋಬಳಿಯ ಬೋರನಕಣಿವೆ ಸೇವಾಚೇತನ ಕೇಂದ್ರದಲ್ಲಿ ಸಾಯಿ ಮಂದಿರದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಕನ್ನಡನಾಡಿನ ಪ್ರಖ್ಯಾತ ಗಾಯಕರಲ್ಲೊಬ್ಬರಾದ ಪುತ್ತೂರು ನರಸಿಂಹ ನಾಯಕ್ ಹಾಗೂ ಬಳಗದಿಂದ ಭಕ್ತಿ ಸಿಂಚನ ಕಾರ್ಯಕ್ರಮ ಜರುಗಿತು.
‘ಪವಮಾನ ಜಗದ ಪ್ರಾಣ’, "ಅಂಗಳದೊಳು ರಾಮನಾಡಿದ" ,ಎಲ್ಲಾರು ಮಾಡುವುದು ಹೊಟ್ಟೆಗಾಗಿ" ಮುಂತಾದ ದಾಸರ ಪದಗಳನ್ನು ತಮ್ಮದೇ ಧಾಟಿಯಲ್ಲಿ ಹಾಡಿದ ನಾಯಕ್ ಸಂಗೀತಾಸಕ್ತರು ತಲೆತೂಗುವಂತೆ ಮಾಡಿದರು.
ಹುಳಿಯಾರು ಹೋಬಳಿ ಬೋರನಕಣಿವೆಯ ಸೇವಾಚೇತನ ಕೇಂದ್ರದಲ್ಲಿ ಸಾಯಿ ಮಂದಿರದ ಪ್ರಥಮ ವರ್ಷದ ವಾರ್ಷಿಕೋತ್ಸವದಲ್ಲಿ ಪ್ರಖ್ಯಾತ ಗಾಯಕರಾದ ಪುತ್ತೂರು ನರಸಿಂಹ ನಾಯಕ್ ಅವರನ್ನು ಸಮಿತಿಯ ವಿಠಲ್ ಗೌರವಿಸಿ ಸನ್ಮಾನಿಸಿದರು.
|
ಸಾಯಿ ಭಜನೆ ಮೂಲಕ ಪ್ರಾರಂಭವಾದ ಗಾಯನ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ದಾಸರಪದ,ವಚನಗಳ ಮೂಲಕ ಸುಮಾರು ಎರಡು ಗಂಟೆಗಳ ಕಾಲ ಹಾಡಿದ ನರಸಿಂಹನಾಯಕ್ ಶ್ರೋತೃಗಳಿಗೆ ಭಕ್ತಿ ರಸಕವಳವನ್ನು ಉಣ ಬಡಿಸಿದರು. ಇವರು ಹಾಡಿದ ‘ದಾಸನಾಗು ವಿಶೇಷನಾಗು’ ಗೀತೆಯಂತೂ ಶ್ರೋತೃಗಳ ಮನಮಿಡಿಯಿತು.
ಗಾಯಕ ಪುತ್ತೂರು ನರಸಿಂಹ ನಾಯಕ್ ಬಳಗದ ಕಲಾವಿದರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೋ . ಎಸ್.ಜಿ.ಸಿದ್ದರಾಮಯ್ಯ,ಖ್ಯಾತ ನಿರೂಪಕ ಶಂಕರ್ ಪ್ರಸಾದ್,ರುದ್ರಪ್ಪ ಹನಗವಾಡಿ,ಸಂಸ್ಥೆಯ ಕಾರ್ಯದರ್ಶಿ ವಿಠಲ್ ಸೇರಿದಂತೆ ಸಂಗೀತಾಸಕ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ