ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ
----------------------------------
ಹುಳಿಯಾರು: ಹತ್ತನೇ ತರಗತಿ ಪರೀಕ್ಷೆ ಬರೆಯುವ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಕುರಿತಂತೆ ಮನದಲ್ಲಿರುವ ಭಯ ,ಆತಂಕ ನಿವಾರಿಸಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಇವರ ಜಂಟಿ ಸಹಯೋಗದಲ್ಲಿ ಹುಳಿಯಾರಿನ ವಾಸವಿ ವಿದ್ಯಾಶಾಲೆಯಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ವಿದ್ಯಾರ್ಥಿಗಳು ಗಾಬರಿ ಆತಂಕಕ್ಕೆ ಒಳಗಾಗದೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿದಲ್ಲಿ ಗುರಿಮುಟ್ಟುವುದು ಸುಲಭ ಎಂದರು. ಇದೇರೀತಿಯ ಕಾರ್ಯಕ್ರಮಗಳನ್ನು ಎಲ್ಲಾ ವಿಷಯಗಳಿಗೂ ಸಂಬಂಧಿಸಿದಂತೆ ಆಯೋಜಿಸಿ ಮಾರ್ಗದರ್ಶನ ನೀಡಬೇಕೆಂದು ಸಲಹೆ ನೀಡಿದರು.
ಸೋಮವಾರ ಮದ್ಯಾಹ್ನ ೨.೩೦ ರಿಂದಾ ೫ ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಪರಿಣಿತ ಶಿಕ್ಷಕರು, ಭಾಗವಹಿಸಿ ಆಸಕ್ತ ವಿದ್ಯಾರ್ಥಿಗಳು ಫೋನ್ ಮುಖಾಂತರ ಕೇಳಿದ ಕ್ಲಿಷ್ಟ ಪ್ರಶ್ನೆಗಳಿಗೆ ಉತ್ತರಿಸಿದರು.
ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಬಗೆ ,ಪ್ರಶ್ನೆಪತ್ರಿಕೆ ಮಾದರಿ,ಪರೀಕ್ಷಾ ಸಿದ್ದತೆ,ಅಂಕ ಹಂಚಿಕೆ,ಉತ್ತರ ಬರೆಯುವ ಮಾದರಿ ಬಗ್ಗೆ ವಿಷಯ ತಜ್ಞರು ಟಿಪ್ಸ್ ನೀಡಿದರು.
ಸತತವಾಗಿ ಕರೆಗಳು ಬರುತ್ತಲೆಯಿದ್ದು ಸಮಯ ಮುಗಿಯುವವರೆಗೂ ೪೯ ವಿದ್ಯರ್ಥಿಗಳು ಪಠ್ಯ ವಿಷಯಕ್ಕೆ ಪೋನ್ ಮಾಡಿ ಸಂಶಯ ನಿವಾರಿಸಿಕೊಳ್ಳುವ ಮೂಲಕ ಕಾರ್ಯಕ್ರಮದ ಲಾಭ ಪಡೆದರು.
ವಿಷಯ ಪರಿವೀಕ್ಷಕರಾದ ಟಿ.ಜಿ.ಲಾವಣ್ಯ,ಪರಿಣಿತ ಶಿಕ್ಷಕರಾದ ಜೆ.ಆರ್.ನಟರಾಜು,ರಾಮ್ ಕುಮಾರ್,ವೀರಣ್ಣ,ಎಂ.ರಾಜಣ್ಣ,ನಾಗರಾಜು,ವಿದ್ಯಾಕುಂಚನೂರು,ಮಂಜುಳಾ ಸೇರಿದಂತೆ ಟಿಎಸ್ ಆರ್ ಎಸ್ ಶಾಲೆಯ ಮುಖ್ಯ ಶಿಕ್ಷಕ ರಮೇಶ್,ಗಂಗಾಧರ್ ಪಾಲ್ಗೊಂಡಿದ್ದರು.
------------------------------------------------
ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಭಯ,ಆತಂಕ ಮೂಡುವುದು ಸಹಜವಾಗಿದ್ದು ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ಸಿದ್ಧವಾಗಬೇಕೆಂಬುದರ ಬಗ್ಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಟಿಪ್ಸ್ ನೀಡಲಾಯಿತು.: ನಟರಾಜು,ತಾಲ್ಲೂಕ್ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ
----------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ