ಲಂಬಾಣಿ ಸಮಾಜದ ರಾಷ್ಟ್ರ ಪ್ರಸಿದ್ಧ ಭೀಮಾಸತಿ ತೀಥಾರಾಜ ಸ್ವಾಮಿಯವರ ೫೯ ನೇ ವರ್ಷದ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.ಜಾತ್ರೆಗೆಂದು ಹಲವು ರಾಜ್ಯಗಳಿಂದ ಲಂಬಾಣಿ ಸಮಾಜದ ಬಂಧುಗಳು ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ತಾಲೂಕಿನ ಹಂದನಕೆರೆ ಹೋಬಳಿ ದೊಡ್ಡ ಎಣ್ಣೆಗೆರೆಯ ಗ್ರಾಮದ ಅಖಿಲ ಭಾರತ ಲಂಬಾಣಿ ಯಾತ್ರಾ ಸ್ಥಳದಲ್ಲಿ ಮಾ.೧೭ ರಂದು ಆರಂಭಗೊಂಡಿತ್ತು.
ಜಾತ್ರೆಯಲ್ಲಿ, ಹೊರ ರಾಜ್ಯದ ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನ ಕೆಲವು ಭಾಗದಿಂದ ಭಕ್ತರು ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತಾದಿಗಳು ಬಿಸಿಲನ್ನು ಲೆಕ್ಕಿಸದೆ ಜಾತ್ರಾ ವಿಧಿವಿಧಾನದಲ್ಲಿ ಭಾಗಿಯಾಗಿದ್ದರು.
ಭೀಮಾಸತಿ ದೇವಾಲಯ ಕಮಿಟಿ ಕಾರ್ಯದರ್ಶಿ ರಘುನಾಥ್ ಮಾತನಾಡಿ, ಜಾತ್ರೆಗೂ ಒಂಬ್ಬತ್ತು ದಿನ ಮುನ್ನ ಗೋಧಿಯಿಂದ ತೀಸ್ ಆಚರಣೆ ಕೂಡ ನೆರವೇರಿಸುತ್ತಾರೆ. ಇದರಿಂದ ಜಾತ್ರೆ ದಿನದೊತ್ತಿಗೆ ಗೋಧಿ ಸಸಿಗಳು ಬೆಳೆದು ಅದನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದ ನಂತರ ಗಂಗೆಗೆ ನೈವೇದ್ಯ ಕೊಟ್ಟು ಆನಂತರ ಸಸಿಗಳನ್ನು ಭಕ್ತರಿಗೆ ಹಂಚುತ್ತಾರೆ.
ಈ ಜಾತ್ರೆಯಲ್ಲಿ ಬಂಜಾರ ಸಮಾಜದ ರಾಜ್ಯ ಮುಖಂಡ ಹಾಗೂ ಕಾರ್ಮಿಕ ಸಚಿವರಾದ ಪರಮೇಶ್ವರ ನಾಯಕ್, ಸಚಿವ ಟಿ.ಬಿ.ಜಯಚಂದ್ರ, ಸಂಸದ ಮುದ್ದಹನುಮೇಗೌಡ, ಬಂಜಾರ ತಂಡದ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾ ನಾಯಕ್, ಶಾಸಕರಾದ ಸಿ.ಬಿ.ಸುರೇಶ್‌ಬಾಬು, ಸುಧಾಕರ್‌ಲಾಲ್, ಕಮಿಟಿ ಮುಖ್ಯಸ್ಥ ಮರುಳಾನಾಯ್ಕ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ