ಹುಳಿಯಾರು:ಮಕ್ಕಳಿಗೆ ದೇಶಾಭಿಮಾನ, ಸಂಸ್ಕಾರ ಬಿತ್ತಿ ಎಂದು ಕುಪ್ಪೂರು ಮಠದ ಡಾ ಯತೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಕಿವಿ ಮಾತು ಹೇಳಿದರು.
ಹುಳಿಯಾರು ಸಮೀಪದ ದೊಡ್ಡ ಎಣ್ಣೆಗೆರೆಯ ಜ್ಞಾನ ಭಾರತಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಳೆ ಮನಸ್ಸುಗಳಿಗೆ ನಾವು ತುಂಬುವ ಜ್ಞಾನ ಕೊನೆಯವರೆವಿಗೂ ಅಚ್ಚಳಿಯದೆ ಉಳಿಯುತ್ತದೆ. ಒಳ್ಳೆಯ ಸಂಸ್ಕಾರ ತುಂಬಿದರೆ ಒಳ್ಳೆ ವ್ಯಕ್ತಿತ್ವ ರೂಪುಗೊಳ್ಳುತ್ತೆ. ದೇಶಾಭಿಮಾನ, ಭಾಷಾಭಿಮಾನ ಬೆಳೆಸಿದರೆ ದೇಶಕ್ಕಾಗಿ, ಭಾಷೆಗಾಗಿ ಜೀವನ ಮುಡುಪಾಗಿಡುತ್ತಾರೆ ಎಂದರು.
ಹಂದನೆಕೆರೆ ಪಿ.ಎಸ್.ಐ ಮಹಾಲಕ್ಷ್ಮಿ ಮಾತನಾಡಿ ಹಳ್ಳಿ ಮಕ್ಕಳಿಗೂ ಕೂಡ ಇಂಗ್ಲಿಷ್‌ನ ಶಿಕ್ಷಣ ಸಿಗುವಂತಾಗಬೇಕು. ಮಕ್ಕಳ ಪೋಷಣೆಯಲ್ಲಿ ಪೋಷಕರಷ್ಟೆ ಜವಾಬ್ದಾರಿ ಶಿಕ್ಷಣ ಸಂಸ್ಥೆಗೂ ಇರುತ್ತದೆ ಎಂದರು.
ಹಿರಿಯೂರು ತಾಲ್ಲೂಕು ಬಿಇಒ ಹನುಮಂತಯ್ಯ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಗ್ರಾ.ಪಂ. ಸದಸ್ಯ ಧನುಷ್ ರಂಗನಾಥ್, ಕೆಂಕೆರೆ ಮುಖ್ಯಶಿಕ್ಷಕ ಶಾಂತವೀರಪ್ಪ, ಕಿರಣ್‌ಕುಮಾರ್, ಕಾರ್ಯದರ್ಶಿ ಪ್ರಶಾಂತ್ ಮತ್ತಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ