ಹುಳಿಯಾರು:ವಿದ್ಯುತ್ ಇಂದು ಗಾಳಿ,ನೀರು ,ಬೆಳಕಿನಷ್ಟೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದ್ದು ಕೈಗಾರೀಕರಣ,ಆಧುನಿಕ ಹಾಗೂ ತಾಂತ್ರಿಕ ಜಗತ್ತಿನಲ್ಲಿ ಯಾಂತ್ರೀಕರಣದಿಂದಾಗಿ ಪ್ರತಿಯೊಂದು ಚಟುವಟಿಕೆಗೂ ವಿದ್ಯುತ್ ಮೇಲೆ ಅವಲಂಬಿತರಾಗಿದ್ದೇವೆ.ಆದರೆ ಇಂದು ಉತ್ಪಾದನೆಗಿಂಲೂ ಬಳಕೆ ಹೆಚ್ಚಾಗಿದ್ದೂ ವಿದ್ಯುತ್ ಮಿತವಾಗಿ ಬಳಕೆ ಮಾಡುವುದು ಸಾಮಾಜಿಕ ಜವಬ್ದಾರಿಯಾಗಿದೆ ಎಂದು ಬೆಸ್ಕಾಂ ವಿಭಾಗೀಯ ಅಧಿಕಾರಿ ಉಮೇಶ್ ನಾಯ್ಕ್ ತಿಳಿಸಿದರು.
ಅವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ವಿದ್ಯುತ್ ಸುರಕ್ಷತೆ ಮತ್ತು ಉಳಿತಾಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಬೆಸ್ಕಾಂ ಹಾಗೂ ತುಮಕೂರಿನ ಮಹಾತ್ಮ ಗಾಂಧಿ ರೂರಲ್ ಡೆವಲಪ್ ಮೆಂಟ್ ಅಂಡ್ ಯೂತ್ ವೆಲ್ ಫೇರ್ ಸೆಂಟರ್ ಸಹಯೋಗದಲ್ಲಿ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಾಗುತ್ತಿದ್ದು ಉತ್ಪಾದನೆಗೂ ಬಳಕೆಗೂ ಹೆಚ್ಚಿನ ಅಂತರವಿದ್ದೂ ಉಳಿತಾಯ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಇದನ್ನೂ ಸರಿದೂಗಿಸಲು ನಾವುಗಳೂ ಅವಶ್ಯಕತೆ ಹಾಗೂ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಬಳಕೆ ಮಾಡುವುದರ ಮುಖಾಂತರ ಉಳಿತಾಯ ಮಾಡಬೇಕಿದ್ದು ಅಪಾಯಕಾರಿಯಾದ ವಿದ್ಯುತ್ ಅನ್ನು ಸುರಕ್ಷತೆಯಿಂದ ಬಳಕೆ ಮಾಡುವುದರ ಬಗ್ಗೆ ಎಲ್ಲರಿಗೂ ಅರಿವಿರಬೇಕೆಂದರು.
ತಾಪಂ ಸದಸ್ಯ ಹೆಚ್.ಎನ್.ಕುಮಾರ್ ಮಾತನಾಡಿ ಕೈಗಾರಿಕೆಯಿಂದ ಹಿಡಿದು ಅಡುಗೆಮನೆ, ಕೃಷಿಚಟವಟಿಕೆಯವರೆಗೆ ನಿತ್ಯ ಜೀವನದಲ್ಲಿ ನಾವುಗಳು ವಿದ್ಯುತ್ ಮೇಲೆ ಸಾಕಷ್ಟು ಅವಲಂಬಿತರಾಗಿದ್ದು ವಿದ್ಯುತ್ ಉಳಿತಾಯ ಮಾಡಲು ಹಾಗೂ ಸುರಕ್ಷಿತವಾಗಿ ಬಳಸಲು ನಾವು ವಹಿಸಬೇಕಾದ ಕ್ರಮಗಳ ಬಗ್ಗೆ ಇಲಾಖೆಯೂ ಕಾರ್ಯಗಾರದ ಮೂಲಕ ಅರಿವು ಮೂಡಿಸುತ್ತಿರುವ ಕ್ರಮ ಶ್ಲಾಘನೀಯ ಎಂದರು.
ವಾಸವಿ ಆಂಗ್ಲ ಪ್ರೌಢಶಾಲೆಯ ಪ್ರಕಾಶ್ ಮಾತನಾಡಿವಿದ್ಯುತ್ ಸುರಕ್ಷಿತವಾಗಿ ಬಳಕೆಮಾಡಿಕೊಳ್ಳುವುದರ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಅದರಲ್ಲೂ ರೈತಾಪಿ ವರ್ಗದವರಿಗೆ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಹೆಚ್ಚಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿ ಮನೆಯಲ್ಲೂ ಟಿವಿ,ಫ್ಯಾನ್,ರೆಫ್ರಿಗಿರೇಟರ್,ಮಿಕ್ಸಿ ಇಂದು ಅತ್ಯಗತ್ಯವಾಗಿದ್ದು ಬೇಸಿಗೆಯಲ್ಲಿ ಹೆಚ್ಚಿನ ಬಳಕೆಯಾಗುತ್ತದೆ.ಈ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಒತ್ತುಕೊಟ್ಟು ಕಾರ್ಯಾಗಾರ ಏರ್ಪಡಿಸಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಸಂಪನ್ಮೂಲ ವ್ಯಕ್ತಿ ಈರಣ್ಣ ಪ್ರಾಸ್ತಾವಿಕ ನುಡಿಗಳಾನಾಡಿದರು.ಬೆಸ್ಕಾಂ ಅಧಿಕಾರಿ ಮೂರ್ತಿ,ಶಕುಂತಲಾ ,ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ,ಆರೋಗ್ಯ ಇಲಾಖೆಯ ಚಂದ್ರಕಾಂತ್,ಆಶಾ ಕಾರ್ಯಕರ್ತೆ ನಾಗವೇಣಿ ಸೇರಿದಂತೆ ಸ್ವಸಹಾಯ ಸಂಘದ ಸದಸ್ಯರು,ಅಂಗನವಾಡಿ ಕಾರ್ಯಕರ್ತೆಯರು,ಐ.ಟಿ.ಐ ವಿದ್ಯಾರ್ಥಿಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ