ಸಾರ್ವಜನಿಕರಿಗೆ ಕಿರುಕುಳ ನೀಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ನೀಡಲು ತುಮಕೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ದೂರು ಪ್ರಾಧಿಕಾರ ರಚಿಸಲಾಗಿದೆ.
ಈ ಪ್ರಾಧಿಕಾರ ಡಿಎಸ್‌ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ದುರ್ನಡತೆ ಮತ್ತು ಅಧಿಕಾರ ದುರುಪಯೋಗದ ವಿಚಾರಣೆಗೆ ಒಳಪಟ್ಟಿದೆ. ಡಿಎಸ್‌ಪಿ ಹುದ್ದೆ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳ ಬಗ್ಗೆ ದೂರನ್ನು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ವಿಚಾರಣೆಗೆ ಒಳಪಟ್ಟಿರುತ್ತದೆ.
ಜಿಲ್ಲಾ ಮಟ್ಟದ ದೂರು ಪ್ರಾಧಿಕಾರದ ಅಧ್ಯಕ್ಷರಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಸದಸ್ಯರಾಗಿ ಎ.ಮುನಿಯಲ್ಲಪ್ಪ, ಸರ್ಕಾರ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿಗಳು, ನಂ.೮೧, ೧೨ನೇ ಕ್ರಾಸ್, ಸಿಂದಿ ಆಸ್ಪತ್ರೆ ರಸ್ತೆ, ಬೆಂಗಳೂರು ಇವರನ್ನು ನೇಮಕ ಮಾಡಲಾಗಿದೆ.
ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ವಿಶ್ವನಾಥ್ ನಿವೃತ್ತ ಪ್ರಾಂಶುಪಾಲರು, ಶ್ರೀನಿಕೇತನ ೨೩ನೇ ಅಡ್ಡರಸ್ತೆ, ಎಸ್‌ಐಟಿ ಬಡಾವಣೆ, ತುಮಕೂರು ಇವರು ನಾಗರಿಕ ಸಮಾಜದಿಂದ ದೂರು ಪ್ರಾಧಿಕಾರಕ್ಕೆ ನೇಮಕಗೊಂಡ ಸದಸ್ಯರಾಗಿರುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ