ಹುಳಿಯಾರು:ಪಟ್ಟಣದ ಜಿಪಿಯುಸಿ,ಕನಕದಾಸ ಪ್ರೌಢಶಾಲೆ, ಟಿಆರ್ ಎಸ್ ಆರ್ ಪ್ರೌಢಶಾಲೆಯ ಪರೀಕ್ಷಾಕೇಂದ್ರಗಳಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಆರಂಭವಾಗಿದ್ದು ಪರೀಕ್ಷೆ ಸುಸೂತ್ರವಾಗಿ ನಡೆದಿದೆ.
ಟಿಆರ್ ಎಸ್ ಆರ್ ಪ್ರೌಢಶಾಲೆಯ ಪರೀಕ್ಷಾ ಕೆಂದ್ರದ ಮೇಲ್ವಾಚಾರಣೆಯನ್ನು ಹೊತ್ತಿದ್ದ ರಮೇಶ್ ಮಾತನಾಡಿ ಈ ಶಾಲೆಯ ಕೇಂದ್ರದಲ್ಲಿ ಒಟ್ಟು ಸುತ್ತಮುತ್ತ ಹಳ್ಳಿಗಳ ಶಾಲೆಯು ಸೇರಿದಂತೆ ಒಟ್ಟು ೧೨ ಶಾಲೆಗಳ ೧೮೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಅಂದರು.
ಹುಳಿಯಾರಿನಲ್ಲಿ ಒಟ್ಟು ಮೂರು ಪರೀಕ್ಷಾ ಕೆಂದ್ರಗಳಿದ್ದು ೬೪೮ ಪರೀಕ್ಷಾರ್ಥಿಗಳಿದ್ದಾರೆ.ಪ್ರತಿ ಕೇಂದ್ರದಲ್ಲೂ ಒಬ್ಬರು ವೀಕ್ಷಕರು,ಇಬ್ಬರು ಸ್ಥಾನಿಕ ವಿಚಕ್ಷಕ ದಳದ ಇಬ್ಬರು ಕಾರ್ಯನಿರ್ವಹಿಸುತ್ತಿದ್ದು ಜೊತೆಗೆ ಸಂಚಾರಿ ವಿಚಕ್ಷಕ ದಳಗಳು ಕಾರ್ಯನಿರ್ವಹಿಸಲಿದೆ. ಪ್ರತಿ ಕೇಂದ್ರದ ಮುಂದೆಯೂ ಪೊಲೀಸ್ ಕಣ್ಗಾವಲು ಹಾಕಲಾಗಿತ್ತು.
ಪರೀಕ್ಷೆ ಕೇಂದ್ರಕ್ಕೆ ಮೊಬೈಲ್ ಫೋನ್, ಕ್ಯಾಲ್ಯುಕುಲೇಟರ್ ನಿರ್ಬಂಧಿಸಲಾಗಿತ್ತು.ಯಾವುದೇ ರೀತಿಯ ಅವ್ಯವಹಾರಕ್ಕೆ ಅವಕಾಶವಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಆದೇಶ ಹೊರಡಿಸಲಾಗಿದ್ದು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ವಿದ್ಯಾರ್ಥಿಗಳು ಇಂದು ಪ್ರಥಮ ಭಾಷೆ ಕನ್ನಡ,ಉರ್ದು ಪರೀಕ್ಷೆ ಬರೆದಿದ್ದು ಸುಲಭವಾಗಿದ್ದು ಉತ್ತಮ ಅಂಕ ಬರುವ ಆಶಾಭಾವನೆ ವ್ಯಕ್ತಪಡಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ