ಹುಳಿಯಾರು: ಪಟ್ಟಣದ ಗ್ರಾಮ ಪಂಚಾಯ್ತಿವತಿಯಿಂದ ನೂತನ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೈ.ಸಿ.ಸಿದ್ರಾಮಯ್ಯ ಹಾಗೂ ತಾಲ್ಲೂಕ್ ಪಂಚಾಯಿತಿ ಸದಸ್ಯರಾದ ಹೆಚ್.ಎನ್. ಕುಮಾರ್ ಅವರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ನೂತನ ನೂತನ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೈ.ಸಿ.ಸಿದ್ರಾಮಯ್ಯ ಹಾಗೂ ತಾಲ್ಲೂಕ್ ಪಂಚಾಯಿತಿ ಸದಸ್ಯರಾದ ಹೆಚ್.ಎನ್. ಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು. |
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿ.ಪಂ ಸದಸ್ಯ ವೈ.ಸಿ.ಸಿದ್ರಾಮಯ್ಯ ಪಟ್ಟಣದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಪಕ್ಷಾತೀತವಾಗಿ ಕೆಲಸ ಮಾಡೋಣ. ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸೋಣ ಎಂದರು. ಗ್ರಾಮಪಂಚಾಯ್ತಿಯಾಗಿರುವ ಹುಳಿಯಾರನ್ನು ಪಟ್ಟಣ ಪಂಚಾಯ್ತಿಯನ್ನಾಗಿಸಲು ಶ್ರಮಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಪಟ್ಟಣದ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಎಲ್ಲರ ಸಹಕಾರದಿಂದ ಮುನ್ನಡೆಯುವುದಾಗಿ ಭರವಸೆ ನೀಡಿದರು.
ತಾಪಂ ಸದಸ್ಯ ಕುಮಾರ್ ಮಾತನಾಡಿ ನಾನೂ ಈ ಹಿಂದೆ ಇದೇ ಪಂಚಾಯ್ತಿಯಲ್ಲಿ ಸದಸ್ಯನಾಗಿದ್ದು ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ.ಚುನಾವಣೆಯ ರಾಜಕೀಯವನ್ನು ಬದಿಗಿಟ್ಟು ಅಭಿವೃದ್ಧಿಗಾಗಿ ಎಲ್ಲರೂ ನನ್ನೊಟ್ಟಿಗೆ ಸಹಕರಿಸುವಂತೆ ಹಾಗೂ ನನ್ನ ಅನುದಾನದಲ್ಲಿ ಪಟ್ಟಣಕ್ಕೆ ಹೆಚ್ಚಿನ ಒತ್ತುನೀಡಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಅಧ್ಯಕ್ಷೆ ಗೀತಾಪ್ರದೀಪ್,ಉಪಾಧ್ಯಕ್ಷ ಗಣೇಶ್,ಸದಸ್ಯರುಗಳಾದ ಚಂದ್ರಶೇಖರ್,ದಯಾನಂದ್,ಬಡ್ಡಿಪುಟ್ಟರಾಜು,ಧನುಷ್ ರಂಗನಾಥ್,ಅಹ್ಮದ್ ಖಾನ್,ಡಾಬಾ ಸೂರಪ್ಪ,ಕೋಳಿ ಶ್ರೀನಿವಾಸ್,ಸೈಯದ್ ಜಬೀವುಲ್ಲಾ,ಬಿಂದುರಮೇಶ್,ಪುಟ್ಟಿಬಾಯಿ ,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿದ್ದರಾಮಣ್ಣ,ಕಾರ್ಯದರ್ಶಿ ಉಮಾಶಂಕರ್ ಸೇರಿದಂತೆ ಸದಸ್ಯರುಗಳು ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ