ಅಪಘಾತದಂತಹ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು ರಕ್ತದಾನ ಮಾಡುವುದರ ಮೂಲಕ ವ್ಯಕ್ತಿಗೆ ಜೀವದಾನ ಮಾಡಬಹುದಾಗಿದ್ದು ರಕ್ತದಾನದ ಮಹತ್ವದ ಬಗ್ಗೆ ಯುವಕರನ್ನು ಜಾಗೃತಿಗೊಳಿಸುವ ಕೆಲಸವಾಗಬೇಕಾಗಿದೆ ಎಂದು ಪ್ರಾಚಾರ್ಯ ಪ್ರೋ.ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
ಜಿಲ್ಲಾ ಆರೋಗ್ಯ ಕೇಂದ್ರ ತುಮಕೂರು,ಸಾರ್ವಜನಿಕ ಆಸ್ಪತ್ರೆ ಹುಳಿಯಾರು ಇವರ ಸಹಯೋಗದಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಕ್ತದಾನ ಮತ್ತು ವೈದ್ಯಕೀಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತ ನಿಧಿ ಅಧಿಕಾರಿ ಡಾ.ಎ.ಎಸ್.ವೀಣಾ ಮಾತನಾಡಿ ಮಾನವನ ರಕ್ತ ಅಮೂಲ್ಯವಾಗಿದ್ದು ಇದು ಮನುಷ್ಯನ ಜೀವ ಉಳಿಸುತ್ತದೆ ಎಂದ ಅವರು ರಕ್ತದಾನದ ಕುರಿತು ತಿಳಿವಳಿಕೆ ನೀಡಿದರು.
ದೈಹಿಕ ಶಿಕ್ಷಣ ನಿರ್ದೇಶಕ ಶಿವಯ್ಯ,ಅದ್ಯಾಪಕರಾದ ಡಾ.ಬಾಳಪ್ಪ,ಪ್ರೋ. ಅಶೋಕ್,ಸೈಯದ್ ಇಬ್ರಾಹಿಂ ಸಾಬ್ ರಕ್ತದಾನ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.
ಡಾ.ಚಂದನ ಆರೋಗ್ಯ ತಪಾಸಣೆ ನಡೆಸಿದರು.೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು.
೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನಾ ಕಾರ್ಯ ನಡೆಸಲಾಯಿತು.
ರೋಟೆರಿಯನ್ ಗಂಗಾಧರ್,ರಾಜಮಣಿ,ಪಂಕಜಾಕ್ಷಿ,ಗಾಯತ್ರಿ,ಮುಂಜುನಾಥ್,ಲತಾ,ಧನಂಜಯ್ ಅನಿಲ್ ಕುಮಾರ್ ಚಂದ್ರಕಾಂತ್ ಶ್ರೀನಿವಾಸಚಾರ್ ಸೇರಿದಂತೆ ಹುಳಿಯಾರು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ