ಹುಳಿಯಾರು: ಇಲ್ಲಿನ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ೨೦೧೫ ಮತ್ತು ೧೬ ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಮುಕ್ತಾಯ ಸಮಾರಂಭ ಈಚೆಗೆ ಜರುಗಿತು.
ಈ ನಿಮಿತ್ತ ನಡೆದ ಕ್ರೀಡಾಕೂಟದಲ್ಲಿ ಥ್ರೋಬಾಲ್ ,ಖೋ ಖೋ , ಷಟಲ್ ಬ್ಯಾಡ್ಮಿಂಟನ್ , ೧೦೦ ಮೀಟರ್ ಓಟ, ೪೦೦ ಮೀ ಓಟ, ೧೫೦೦ ಮೀ ಓಟ ,ಎತ್ತರ ಜಿಗಿತ , ಉದ್ದ ಜಿಗಿತ , ಜಾವಲಿನ್ ಥ್ರೋ , ವಾಲಿಬಾಲ್, ರಿಲೆಯಲ್ಲಿ ವಿಜೇತರಾದ ಪಿಯು ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಪ್ರಾಚಾರ್ಯ ನಂಜುಂಡಯ್ಯ, ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲರಾದ ಬಿಳಿಗೆರೆ ಕೃಷ್ಣಮೂರ್ತಿ, ನಿವೃತ್ತ ಪ್ರಾಂಶುಪಾಲರಾದ ಎಂ.ವಿ. ನಾಗರಾಜರಾವ್, ನಂದಿಹಳ್ಳಿಶಿವಣ್ಣ, ಉಪನ್ಯಾಸಕರಾದ ಎಮ್. ಶಿವಣ್ಣ, ಗೋಪಿನಾಥ್, ಚಿದಾನಂದ್, ಉಮೇಶ್, ಶೈಲಜಾ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ