ಹುಳಿಯಾರು:ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಶತಾಯುಷಿ , ಕರ್ನಾಟಕ ರತ್ನ,ಪದ್ಮಭೂಷಣ ಡಾ. ಶಿವಕುಮಾರ ಸ್ವಾಮೀಜಿಯವರ ೧೦೯ನೇ ಜನ್ಮದಿನಾಚರಣೆ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಗುರುವಂದನಾ ಮಹೋತ್ಸವ ಕೈಗೊಳ್ಳಲಾಗಿದ್ದು ಪ್ರಚಾರದ ಅಂಗವಾಗಿ ಸಂಚರಿಸುತ್ತಿರುವ ಶ್ರೀಗಳ ಕರ್ಮಭೂಮಿಯಿಂದ ಜನ್ಮ ಸ್ಥಳದವರೆಗಿನ ಶೋಭಾಯಾತ್ರೆಯು ಭಾನುವಾರದಂದು ಹುಳಿಯಾರಿಗೆ ಆಗಮಿಸಿತು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ಕವಿತಾ ಕಿರಣ್,ಆಂಜನೇಯ ಸ್ವಾಮಿ ದೇವಾಲಯದ ಧನಂಜಯ್,ಹಿಂದೂ ಜಾಗರಣ ವೇದಿಕೆಯ ಬಡಗಿ ರಾಮಣ್ಣ ಮತ್ತಿತರರು ರಥವನ್ನು ಬರ ಮಾಡಿಕೊಂಡರು.
ಶೋಭಾಯಾತ್ರೆಯ ಉಸ್ತುವಾರಿ ವಹಿಸಿರುವ ಆರಾಧ್ಯ ಮಂಚಲದೊರೆ ಮಾತನಾಡಿ ನಡೆದಾಡುವ ದೇವರು, ಶತಾಯುಷಿ , ಪದ್ಮಭೂಷಣ ಡಾ. ಶಿವಕುಮಾರ ಸ್ವಾಮೀಜಿಯವರ ೧೦೯ನೇ ಜನ್ಮದಿನಾಚರಣೆ ಇಡೀ ರಾಜ್ಯದಲ್ಲಿಯೇ ಆಚರಣೆಯಾಗಬೇಕು ಎಂದು ಭಕ್ತಾಧಿಗಳು ಸಂಕಲ್ಪ ಮಾಡಿದ್ದು ಇದಕ್ಕಾಗಿ ವೈಭವಯುತ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡೀಕೊಳ್ಳಲಗುತ್ತಿದೆ ಎಂದರು.
ಮಾರ್ಚ್ ೨೪ ರಿಂದ ಶ್ರೀಗಳವರ ಕರ್ಮಭೂಮಿಯಿಂದ ಜನ್ಮ ಭೂಮಿಯವರೆಗೆ ಶೋಭಾಯಾತ್ರೆಯನ್ನು ಆರಂಭಿಸಿದ್ದು ಒಟ್ಟು ೧೦೯ ಗ್ರಾಮಗಳನ್ನು ತಲುಪಿ ಏಪ್ರಿಲ್ ೧ ರಂದು ಕೈಗೊಳ್ಳುವ ಶ್ರೀಗಳ ಜನ್ಮ ದಿನಾಚರಣೆಯ ಬಗ್ಗೆ ಭಕ್ತಾಧಿಗಳಿಗೆ ತಿಳಿಯಪಡಿಸಲಾಗುತ್ತಿದೆ ಎಂದರು.
ಏ.೧ರಂದು ಶಿವಕುಮಾರಶ್ರೀಗಳ ಜನ್ಮದಿನಾಚರಣೆ ಆಚರಣೆಗೆ ಈಗಾಗಲೇ ಸಿದ್ಧತೆ ನಡೆದಿದ್ದು ಅಂದು ಸಂಜೆ ೫ಕ್ಕೆ ಗಂಟೆಗೆ ತುಮಕೂರಿನ ಸರ್ಕಾರಿ ಜೂನಿಯಯರ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾರಂಭ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಡಾಬಾ ಸೂರಪ್ಪ.ಮೆಡಿಕಲ್ ಚಂಬಣ್ಣ,ರೋಟರಿ ಸಂಸ್ಥೆಯ ರವೀಶ್,ಪಂಡಿತ ಬಸವರಾಜು ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ