(ಸುದ್ದಿ ಕೃಪೆ:ಕಿರಣ್ ಕುಮಾರ್)
ಹುಳಿಯಾರು: ಕೃಷಿ ಜ್ಞಾನ ಪಡೆಯದೆ ಕೃಷಿ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಸಾವಯವ ಕೃಷಿ ತಜ್ಞ ಪ್ರೊ.ಶಿವನಂಜಯ್ಯಬಾಳೆಕಾಯಿ ಅಭಿಪ್ರಾಯಪಟ್ಟರು.
ಹುಳಿಯಾರು ಸಮೀಪದ ಹೊಯ್ಸಳಕಟ್ಟೆಯಲ್ಲಿ ಹುಳಿಯಾರಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಡೆಯುತ್ತಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ವೈದ್ಯನಾಗಲು ವೈದ್ಯಕೀಯ ಕೋರ್ಸ್ ಮಾಡಬೇಕು. ಲಾಯರ್ ಆಗಲು ಕಾನೂನು ಪದವಿ ಓದಬೇಕು. ಜಿಲ್ಲಾಧಿಕಾರಿ, ತಹಶೀಲ್ದಾರ್, ಶಿಕ್ಷಕ, ಉಪನ್ಯಾಸಕ ಹೀಗೆ ಯಾವುದೇ ಹುದ್ದೆ ಪಡೆಯಲು ಆ ಹುದ್ದೆಗೆ ಸಂಬಂಧಿಸಿದ ಅಧ್ಯಯನ ಅಗತ್ಯವಾಗಿದೆ.ಅದೇರೀತಿ ಕೃಷಿ ಮಾಡುವವರು ಮಣ್ಣಿನ ಬಗ್ಗೆ ಅರಿವು ಪಡೆಯಬೇಕು. ಜೀವ ವೈವಿದ್ಯಗಳ ಮಹತ್ವಗಳ ಬಗ್ಗೆ ಮಾಹಿತಿ ಹೊಂದಿರಬೇಕೆಂದರು.
ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ಪ್ರೊ.ಅಶೋಕ್, ಶಿಬಿರಾಧಿಕಾರಿ ಸೈ.ಇಬ್ರಾಹಿಂಸಾಬ್, ಆರ್.ಶಿವಯ್ಯ, ಸಹ ಶಿಬಿರಾಧಿಕಾರಿ ಜಿ.ಎಂ.ಚಂದ್ರಮೌಳಿ, ಕೆ.ಎಸ್.ಜಯಪ್ರಕಾಶ್, ಜಯಕರ್ನಾಟಕದ ಮೋಹನ್ ಕುಮಾರ ರೈ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ