ಹುಳಿಯಾರು ಸಮೀಪದ ದೊಡ್ಡಬಿದರೆ ಗ್ರಾಮದ ಶ್ರೀಕರಿಯಮ್ಮದೇವಿ ಹಾಗೂ ಶ್ರೀಬೇವಿನಹಳ್ಳಿ ಅಮ್ಮನವರ ಮತ್ತು ಶ್ರೀ ಪಾತಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಮದುವಣಗಿತ್ತಿ, ಮಡಲಕ್ಕಿ ಸೇವೆಯ ಮೂಲಕ ಗುರುವಾರ ಪ್ರಾರಂಭವಾಗಿದೆ.
ಶುಕ್ರವಾರದಂದು ಚಿಕ್ಕಬಿದರೆ ಕರಿಯಮ್ಮ, ಕೋಡಿಹಳ್ಳಿ ಶ್ರೀಕೊಲ್ಲಾಪುರದಮ್ಮ ಹಾಗೂ ಹುಳಿಯಾರಿನ ಸಣ್ಣದುರ್ಗಮ್ಮನ ಆಗಮನದೊಂದಿಗೆ ಬಾನ ನಡೆದಿದ್ದು . ಮಾ.೨೬ ಶನಿವಾರದಂದು ಆರತಿ ಬಾನ, ಗಂಗಾಪೂಜೆ, ಅಗ್ನಿಕುಂಡ, ಅನ್ನಸಂತರ್ಪಣೆ, ಸಿಡಿ ಮಹೋತ್ಸವ ನಡೆಯಲಿದೆ.
ಮಾ.೨೭ ರಂದು ರುದ್ರಾಭಿಷೇಕ, ಮೈಲಾರಲಿಂಗೇಶ್ವರ ಸ್ವಾಮಿಯ ದೋಣಿಸೇವೆ, ಶ್ರೀ ಪಾತಲಿಂಗೇಶ್ವರಸ್ವಾಮಿ ಸ್ವಾಮಿಯವರ ಉತ್ಸವ ನಡೆಯಲಿದೆ. ಮಾ.೨೯ ರಂದು ಬೇನಿವಹಳ್ಳಿ ಅಮ್ಮನವರ ಬಾನ, ಆರ್ಕೆಸ್ಟ್ರಾ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಸ್ವಾಮಿಯವರ ಕೃಪೆಗೆ ಪಾತ್ರರಾಗುವಂತೆ ದೆಆವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ