ಹುಳಿಯಾರು ಕ್ಷೇತ್ರದ ಜಿಪಂ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ವೈ.ಸಿ.ಸಿದ್ದರಾಮಯ್ಯ ಅವರನ್ನು ಪಟ್ಟಣದ ಇಂದಿರಾನಗರದ ಜಮೀರ್ ಅಹಮದ್ ನಿವಾಸದಲ್ಲಿ ಮುಸ್ಲಿಂ ಬಾಂಧವರು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವೈ.ಸಿ.ಸಿದ್ದರಾಮಯ್ಯ ಗ್ರಾಮಪಂಚಾಯ್ತಿಯಾಗಿರುವ ಹುಳಿಯಾರನ್ನು ಪಟ್ಟಣಪಂಚಾಯ್ತಿಯಾಗಿ ಮಾಡುವುದೇ ತಮ್ಮ ಮೊದಲ ಆದ್ಯತೆಯಾಗಿದ್ದು ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಸಮರ್ಪಕವಾದ ರಸ್ತೆ , ಕುಡಿಯುವ ನೀರಿನ ಸೌಲಭ್ಯ, ಒಳಚರಂಡಿ ನಿರ್ಮಾಣದ ಬಗ್ಗೆ ಗಮನಹರಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಗ್ರಾ.ಪಂ. ಸದಸ್ಯರಾದ ಧನುಷ್ ರಂಗನಾಥ್, ದಯಾನಂದ್, ಪುಟ್ಟಮ್ಮ, ಮಾಜಿ ಸದಸ್ಯ ರಾಮಣ್ಣ, ಮುಖಂಡರಾದ ಜಮೀರ್ ಅಹಮದ್, ಸಿದ್ದಿಕ್, ಅಕ್ಬರ್, ನಸೀರ್‌ಸಾಬ್ ಬಸವರಾಜು ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ