ಹುಳಿಯಾರು: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಶಿವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ದ್ವಾದಶ ಜ್ಯೋತಿರ್ಲಿಂಗಗಳ ರಥಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಈಶ್ವರೀಯ ವಿಶ್ವವಿದ್ಯಾಲಯದ ಗೀತಕ್ಕ ಮಾತನಾಡಿ ಪರಮಾತ್ಮನ ಅವತರಣೆಯೇ ಮಹಾಶಿವರಾತ್ರಿ, ಶಿವ ಎಂಬುದು ಪರಮಾತ್ಮನ ದಿವ್ಯನಾಮ, ಶಿವ ಎಂದರೆ ಜ್ಯೋತಿರ್ಲಿಂಗ .ಶಿವ ಕಾಲತೀತನಾಗಿದ್ದು ಅಜ್ಞಾನ ಪರಿಹರಿಸಿ ಜ್ಞಾನದ ಬೆಳಕಿನ ಪ್ರತೀಕ.ಪವಿತ್ರವಾದ ಶಿವತತ್ವವೊಂದೆ ಶಾಶ್ವತವಾದದ್ದು ಎಂದರು.
ಶಿವ ಎಂಬ ಎರಡಕ್ಷರ ಮೋಕ್ಷಕ್ಕೆ ದಾರಿಯಾಗಿದ್ದು ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಲಿಂಗಸ್ವರೂಪದಲ್ಲಿ ಶಿವ ಐಕ್ಯನಾಗಿದ್ದು ಇಂತಹ ಶಿವನಿಗೆ ದೇಶದ ಉದ್ದಗಲಕ್ಕೂ ಮುಸ್ಲಿಂ, ಕ್ರಿಶ್ಚಿಯನ್, ಯಹೂದಿಗಳೆನ್ನದೆ ಬೇರೆ ಬೇರೆ ನಾಮಗಳಲ್ಲಿ ಪ್ರಾರ್ಥಿಸಲಾಗುತ್ತಿದೆ ಎಂದು ತಿಳಿಸಿದರು.
ತಾಪಂ ಸದಸ್ಯ ಹೆಚ್.ಎನ್.ಕುಮಾರ್ ಆಶ್ರಮದ ಆವರಣದಲ್ಲಿ ಶಿವಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್ ರಥಯಾತ್ರೆಗೆ ಚಾಲನೆ ನೀಡಿದರು. ರಥೆಯಾತ್ರೆಯಲ್ಲಿ ವಾಹನಗಳ ಮೇಲೆ ದ್ವಾದಶ ಜ್ಯೋತಿರ್ಲಿಂಗಗಳ ಕುಳ್ಳಿರಿಸಿದ್ದು, ಮಕ್ಕಳ ಪೂರ್ಣಕುಂಭ ಮೆರವಣಿಗೆ, ನಾದಸ್ವರ, ನಾಸಿಕ್ ಡೋಲು ಯಾತ್ರೆಗೆ ಮೆರಗು ನೀಡಿತು.
ಶಿವಕುಮಾರ್, ನೇತ್ರಕ್ಕ,ದುರ್ಗರಾಜು,ಉಮೇಶ್ ನಾಯಕ್,ಗುಬ್ಬಿ ಕೃಷ್ಣಮೂರ್ತಿ, ಯಡೆಯೂರು ಸಿದ್ದಣ್ಣ,ಚೇಳೂರು ತಿಮ್ಮೇಗೌಡರು,ವಸಂತಕ್ಕ,ಶಾಂತಕುಮಾರ್ ,ಸುದರ್ಶನ್ ಇತರರು ಸೇರಿದಂತೆ ಮಾತೆಯರು ಪಾಲ್ಗೊಂಡಿದ್ದರು.
ಹುಳಿಯಾರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ದ್ವಾದಶ ಜ್ಯೋತಿರ್ಲಿಂಗಗಳ ರಥಯಾತ್ರೆಗೆ ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್ ಚಾಲನೆ ನೀಡಿದರು. |
ಈಶ್ವರೀಯ ವಿಶ್ವವಿದ್ಯಾಲಯದ ಗೀತಕ್ಕ ಮಾತನಾಡಿ ಪರಮಾತ್ಮನ ಅವತರಣೆಯೇ ಮಹಾಶಿವರಾತ್ರಿ, ಶಿವ ಎಂಬುದು ಪರಮಾತ್ಮನ ದಿವ್ಯನಾಮ, ಶಿವ ಎಂದರೆ ಜ್ಯೋತಿರ್ಲಿಂಗ .ಶಿವ ಕಾಲತೀತನಾಗಿದ್ದು ಅಜ್ಞಾನ ಪರಿಹರಿಸಿ ಜ್ಞಾನದ ಬೆಳಕಿನ ಪ್ರತೀಕ.ಪವಿತ್ರವಾದ ಶಿವತತ್ವವೊಂದೆ ಶಾಶ್ವತವಾದದ್ದು ಎಂದರು.
ಶಿವ ಎಂಬ ಎರಡಕ್ಷರ ಮೋಕ್ಷಕ್ಕೆ ದಾರಿಯಾಗಿದ್ದು ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಲಿಂಗಸ್ವರೂಪದಲ್ಲಿ ಶಿವ ಐಕ್ಯನಾಗಿದ್ದು ಇಂತಹ ಶಿವನಿಗೆ ದೇಶದ ಉದ್ದಗಲಕ್ಕೂ ಮುಸ್ಲಿಂ, ಕ್ರಿಶ್ಚಿಯನ್, ಯಹೂದಿಗಳೆನ್ನದೆ ಬೇರೆ ಬೇರೆ ನಾಮಗಳಲ್ಲಿ ಪ್ರಾರ್ಥಿಸಲಾಗುತ್ತಿದೆ ಎಂದು ತಿಳಿಸಿದರು.
ತಾಪಂ ಸದಸ್ಯ ಹೆಚ್.ಎನ್.ಕುಮಾರ್ ಆಶ್ರಮದ ಆವರಣದಲ್ಲಿ ಶಿವಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್ ರಥಯಾತ್ರೆಗೆ ಚಾಲನೆ ನೀಡಿದರು. ರಥೆಯಾತ್ರೆಯಲ್ಲಿ ವಾಹನಗಳ ಮೇಲೆ ದ್ವಾದಶ ಜ್ಯೋತಿರ್ಲಿಂಗಗಳ ಕುಳ್ಳಿರಿಸಿದ್ದು, ಮಕ್ಕಳ ಪೂರ್ಣಕುಂಭ ಮೆರವಣಿಗೆ, ನಾದಸ್ವರ, ನಾಸಿಕ್ ಡೋಲು ಯಾತ್ರೆಗೆ ಮೆರಗು ನೀಡಿತು.
ಶಿವಕುಮಾರ್, ನೇತ್ರಕ್ಕ,ದುರ್ಗರಾಜು,ಉಮೇಶ್ ನಾಯಕ್,ಗುಬ್ಬಿ ಕೃಷ್ಣಮೂರ್ತಿ, ಯಡೆಯೂರು ಸಿದ್ದಣ್ಣ,ಚೇಳೂರು ತಿಮ್ಮೇಗೌಡರು,ವಸಂತಕ್ಕ,ಶಾಂತಕುಮಾರ್ ,ಸುದರ್ಶನ್ ಇತರರು ಸೇರಿದಂತೆ ಮಾತೆಯರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ