ಚಿಕ್ಕನಾಯಕನಹಳ್ಳಿ ಪ್ರವಾಸಿ ಮಂದಿರದಲ್ಲಿ ಚಿತ್ರದುರ್ಗದ ಮಾಚೀದೇವರ ಬಸವ ಮಾಚಿದೇವ ಸ್ವಾಮಿಗಳ ಸಾನಿದ್ಯದಲ್ಲಿ ಮಡಿವಾಳ ಸಮಾಜ ಬಾಂಧವರ ಪತ್ರಿಕಾಗೋಷ್ಠಿ ನಡೆಯಿತು.
ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ಸಿ. ನಂಜಪ್ಪ ಮಾತನಾಡಿ ದೇಶದ ೧೯ ರಾಜ್ಯಗಳ ಮಾದರಿಯಲ್ಲಿಯೇ ಕರ್ನಾಟಕ ರಾಜ್ಯದ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿದರು.
ಅಲ್ಲದೆ ಪ್ರೋ|| ಅನ್ನಪೂರ್ಣಮ್ಮ ರಾಜ್ಯ ಸರ್ಕಾರಕ್ಕೆ ನೀಡಿರುವ ೧೨ ಅಂಶಗಳ ಪ್ರಕಾರದ ವರದಿ ಅನುಸಾರ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಬಸವ ಮಾಚಿದೇವ ಸ್ವಾಮೀಜಿಗಳು ಮಾತನಾಡಿ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಸಮಾವೇಶಗಳನ್ನು ಮಾಡಿ ಸಂಘಟಿತರಾದಾಗ ಸರ್ಕಾರದಿಂದ ಸೌಲಭ್ಯ ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರಾದ ಬಿ.ಕೆ.ತಿಮ್ಮಯ್ಯ,ಅಖಿಲ ಭಾರತ ದೋಬಿ ಮಹಾಸಭಾದ ಉಪಾಧ್ಯಕ್ಷ ಈರಣ್ಣ, ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ನಟರಾಜು, ನಿಜಲಿಂಗಪ್ಪ, ಶಂಕರ್, ಚಿ.ನಿ.ಪುರುಷೋತ್ತಮ್, ವೆಂಕಟರಾಮ್,ಬೆಳವಾಡಿ ಕುಮಾರ್, ಸೀಬಯ್ಯ, ನಾಗರಾಜು ಸೇರಿದಂತೆ ಸಮಾಜದ ಮುಖಂಡರುಗಳು ,ಮತ್ತಿತ್ತರರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ