ಹುಳಿಯಾರಿನ ವಿಪ್ರ ಮಹಿಳಾ ಮಂಡಳಿಯಿಂದ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಶಿವರಾತ್ರಿ ಅಂಗವಾಗಿ ಹದಿನಾರು ಸೋಮವಾರ ವ್ರತ ಆಚರಿಸಲಾಯಿತು. |
ಇದರಂಗವಾಗಿ ವೇದಮೂರ್ತಿ ಹೆಚ್.ಎಸ್.ಲಕ್ಷ್ಮೀನರಸಿಂಹಯ್ಯ ಅವರ ಮಾರ್ಗದರ್ಶನದಲ್ಲಿ ಹೆಚ್.ಕೆ.ಗುಂಡಣ್ಣ ಹಾಗೂ ಜೆ.ಗುಂಡಪ್ಪ ಅವರ ನೇತೃತ್ವದಲ್ಲಿ ಶಿವನ ವ್ರತವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಮಹಿಳೆಯರು ಉಪವಾಸವಿದ್ದು ಹುತ್ತದಮಣ್ಣಿನಿಂದ ಹದಿನಾರು ಲಿಂಗಗಳನ್ನು ಪ್ರತಿಷ್ಟಾಪಿಸಿಕೊಂಡು ಪ್ರತಿ ಜಾವದಲ್ಲೂ ಅಭಿಷೇಕ ,ಪುಷ್ಪಾರ್ಚನೆ ಮತ್ತು ಬಿಲ್ವಾರ್ಚನೆ ಪೂಜೆ ನೆರವೇರಿಸಿದರು.ಶಿವನಿಗೆ ಪಂಚಾಮೃತಅಭಿಷೇಕ, ರುದ್ರಾಭಿಷೇಕ,ವಿಶೇಷ ಪೂಜೆ ನೆರವೇರಿತು.
ಶಿವನಿಗೆ ಸೋಮವಾರ ಪ್ರಿಯವಾದ ದಿನವಾಗಿದ್ದು ಅಂತೆಯೇ ಸೋಮವಾರದಂದು ಉಪವಾಸವಿದ್ದು ಪೂಜಿಸುವ ಮೂಲಕ ಶಿವನಂತಹ ಪತಿಯೇ ದೊರಕುತ್ತಾನೆ ಹಾಗೂ ವ್ರತ ಪಾಲಿಸಿದರೆ ಶುಭವಾಗುವುದೆಂದು ನಂಬಕೆಯಿದೆ.ವಿಪ್ರಮಹಿಳಾ ಸಂಘದ ಅಧ್ಯಕ್ಷೆ ಶೈಲಾರಮೇಶ್,ಕಾರ್ಯದರ್ಶಿ ಲಕ್ಷ್ಮೀ ಸುಬ್ರಹ್ಮಣ್ಯ,ವಿಜಯಾ ವಿಶ್ವನಾಥ್,ಜ್ಯೋತಿ ಪ್ರಸಾದ್ ಸೇರಿದಂತೆ ಸುಮಾರು ೨೦ಕ್ಕೂ ಹೆಚ್ಚು ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ