ಹುಳಿಯಾರು ಸಮೀಪದ ಸೋಮಜ್ಜನಪಾಳ್ಯದಲ್ಲಿ ಮಾ.೩೦ರ ಬುಧವಾರ ಬೆಳಿಗ್ಗೆ ೧೦ಕ್ಕೆ ರೈತಸಂಘದ ಉದ್ಘಾಟನೆ ನಡೆಯಲಿದೆ.ತುಮಕೂರು ರೈತಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಸದಸ್ಯರಿಗೆ ಹಸಿರು ಶಾಲುಹೊದಿಸುವ ಮೂಲಕ ಸಂಘಕ್ಕೆ ಚಾಲನೆ ನೀಡಲಿದ್ದು ತಾಲ್ಲೂಕ್ ಅಧ್ಯಕ್ಷ ಹೊಸಳ್ಳಿ ಚಂದ್ರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ತಿಪಟೂರು ದಲಿತ ಸಂಘರ್ಷ ಸಮಿತಿಯ ಶಂಕರಪ್ಪ,ಗುಬ್ಬಿ ರೈತಸಂಘದ ತಾಲ್ಲೂಕ್ ಅಧ್ಯಕ್ಷ ನಿರಂಜನ್ ಮೂರ್ತಿ,ಚಿನಾಹಳ್ಳಿ ತಾಲ್ಲೂಕ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ,ಉಪಾಧ್ಯಕ್ಷ ಅರಳಿಕೆರೆ ರಾಜಶೇಖರ್,ನಾಗರಾಜು,ಪೈಲ್ದಾರ್ ಹನುಮಂತಪ್ಪ,ಎನ್.ಬಿ ದೇವರಾಜು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ