ಹುಳಿಯಾರು: ಪಟ್ಟಣದ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರದಂದು ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಗಣಪತಿ ಪೂಜೆ, ರುದ್ರಾಭಿಷೇಕ, ೯.೩೦ಕ್ಕೆ ಸಂಕಲ್ಪ ಸಮೇತ ಶಿವಾಷ್ಟೋತ್ತರ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ೧೨ ಕ್ಕೆ ಮಹಾ ಮಂಗಳಾರತಿ ಹಾಗೂ ಸಂಜೆ ಸ್ವಾಮಿಗೆ ವಿಶೇಷ ಅಲಂಕಾರ ನಡೆದು ಭಕ್ತಾಧಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.
ಇದೇ ಸಂದರ್ಭದಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಿಂದ ಶಿವರಾತ್ರಿ ಮಹತ್ವ ಕುರಿತು ಉಪನ್ಯಾಸ ನಡೆಯಲಿದೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ.
ಗಣಪತಿ ದೇವಾಲಯದಲ್ಲಿ ಗಣಪತಿಗೆ ಬೆಣ್ಣೆ ಅಲಂಕಾರ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಪ್ರ ಸಂಘದಿಂದ ಅಹೋರಾತ್ರಿ ಪೂಜೆ : ಶಿವರಾತ್ರಿ ಸೋಮವಾರದಂದು ಬಂದಿರುವ ಅಂಗವಾಗಿ ವಿಪ್ರಮಹಿಳಾ ಸಂಘದಿಂದ ಹದಿನಾರು ಸೋಮವಾರ ವ್ರತ ಹಾಗೂ ಅಹೋರಾತ್ರಿ ಪೂಜೆ ಹಾಗೂ ಶಿವ ಭಜನೆ ನಡೆಯಲಿದೆ.
ವಾಸವಿ ದೇವಾಲಯದಲ್ಲಿ ಸಂಜೆಯಿಂದ ವಿಶೇಷ ಪೂಜೆ.ಅಭಿಷೇಕ ಹಾಗೂ ಮುಂಜಾನೆಯವರೆಗೆ ಜಾವದ ಪೂಜೆ ನಡೆಯಲಿದೆ. ಹಬ್ಬದ ಪ್ರಯುಕ್ತ ಮಹಿಳಾ ಸಂಘದಿಂದ ಆಟೋಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ತಿರುಮಲಾಪುರದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸಂಜೆ ಏಕದಶವಾರು ರುದ್ರಾಭಿಷೇಕ ಮತ್ತು ಮಹನ್ಯಾಸಪೂರಕ ಅಭಿಷೇಕ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ