ಹುಳಿಯಾರು ಹೊಬಳಿಯ ಹೊಯ್ಸಳಕಟ್ಟೆಯಲ್ಲಿ ಹೊಯ್ಸಳ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘ ಹಾಗೂ ಬೋರನಕಣಿವೆಯ ಸುವರ್ಣ ವಿದ್ಯಾ ಚೇತನ ಇವರ ಸಂಯುಕಾಶ್ರಯದಲ್ಲಿ ಸುವರ್ಣಮುಖಿ ಫ್ರೆಂಡ್ಸ್ ಕಪ್ ೨೦೧೬ ಶನಿವಾರ ಹಾಗೂ ಭಾನುವಾರ ನಡೆಯಲಿದೆ.
ಹೊಯ್ಸಳಕಟ್ಟೆಯ ಹೊಯ್ಸಳ ಬ್ಲೂ ಬಾಯ್ಸ್ ಹಾಗೂ ಹೊಯ್ಸಳ ವಾರಿಯರ್ಸ್ ,ಕಲ್ಲೇನಹಳ್ಳಿಯ ಶ್ರೀದೇವಿ ಕ್ರಿಕೇಟರ್ಸ್,ಯಗಚಿಹಳ್ಳಿಯ ಯಗಚಿ ಯಂಗ್ ಟೈಗರ್ಸ್,ದಬ್ಬಗುಂಟೆಯ ಶ್ರೀಸಾಯಿ ೧೧,ಬೆಳ್ಳಾರದ ಬೆಳ್ಳಾರ ಗೋಲ್ಡನ್ ಬಾಯ್ಸ್ ತಂಡಗಳು ಭಾಗವಹಿಸುತ್ತಿದ್ದು ಶನಿವಾರ ಬೆಳಿಗ್ಗೆ ಡಾ.ರಜನೀಶ್ ಬಾಬು ಟೂರ್ನಿಯನ್ನು ಉದ್ಘಾಟಿಸಲಿದ್ದಾರೆ.
ಗ್ರಾಪಂ ಅಧ್ಯಕ್ಷೆ ಮಂಜುಳಾ ಹೆಂಜಾರಪ್ಪ,ರಾಮಕೃಷ್ಣಪ್ಪ,ರಾಮದಾಸಪ್ಪ,ವದ್ದಿಗಯ್ಯ,ತಿಮ್ಮರಾಯಪ್ಪ, ವೀರನಾಗಯ್ಯ ಸೇರಿದಂತೆ ಸ್ಥಳಿಯ ಮುಖಂಡರುಗಳು ಹಾಗೂ ಗ್ರಾಮಪಂಚಾಯ್ತಿ ಸದಸ್ಯರುಗಳು ಭಾಗವಹಿಸಲಿದ್ದಾರೆ.
ಭಾನುವಾರ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಗೆದ್ದ ತಂಡಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ