ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಶ್ರೀ ಗುರು ರೇವಣಸಿದ್ದೇಶ್ವರ ಶಿಲಾ ಪ್ರತಿಷ್ಠಾಪನಾ, ಹಾಲುಮತ ಸಂಸ್ಕೃತಿಗಳ ಉತ್ಸವ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಸಾರ್ವಜನಿಕ ಸಮುದಾಯ ಭವನದ ಉದ್ಘಾಟನೆ ಇದೇ ತಿಂಗಳ ಮಾರ್ಚ್ ೧೬ರಿಂದ ೧೮ರವರೆಗೆ ನಡೆಯಲಿದೆ.
ತಾಲ್ಲೂಕಿನ ಕಂದಿಕೆರೆಯ ಶ್ರೀ ಗುರುರೇವಣಸಿದ್ದೇಶ್ವರ ಸ್ವಾಮಿ ಶ್ರೀ ಗುರುಮಠದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ ೧೬ರಂದು ಹೊಸದುರ್ಗ ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿಸ್ವಾಮಿ ದಿವ್ಯಸಾನಿದ್ಯದಲ್ಲಿ ಗುರುರೇವಣಸಿದ್ದೇಶ್ವರರು ಶ್ರೀ ದಶರಥರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಗಂಗಾಸ್ನಾನ ನಡೆಯಲಿದೆ, ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವ ದೇವರುಗಳ ಉತ್ಸವ ನಡೆಯಲಿದೆ ಹಾಗೂ ಹೋಮ ಹವನಗಳು ನಡೆಯಲಿದೆ.
೧೭ರ ಗುರುವಾರದಂದು ಶ್ರೀ ಗುರು ರೇವಣಸಿದ್ದೇಶ್ವರ ಸಾರ್ವಜನಿಕ ಸಮುದಾಯ ಭವನದ ಉದ್ಘಾಟನೆ ನೆರವೇರಲಿದ್ದು ಹಾವೇರಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿಸ್ವಾಮೀಜಿ, ಕೆ.ಆರ್.ನಗರ ಕನಕ ಗುರುಪೀಠದ ಶಾಖಾಮಠದ ಶಿವಾನಂದಪುರಿಸ್ವಾಮೀಜಿ, ದೇವದುರ್ಗ ಕನಕ ಗುರುಪೀಠದ ಸಿದ್ದರಾಮಾನಂದಪುರಿಸ್ವಾಮೀಜಿ ದಿವ್ಯ ಸಾನಿದ್ಯ ವಹಿಸುವರು.
ಸಚಿವ ಟಿ.ಬಿ.ಜಯಜಂದ್ರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್‌ಬಾಬು ಅಧ್ಯಕ್ಷತೆ ವಹಿಸುವರು. ಸಂಸದ ಎಸ್.ಪಿ.ಮುದ್ದಹನುಮೇಗೌಡ ಧಾನಿಗಳ ನಾಮಫಲಕ ಅನಾವರಣಗೊಳಿಸುವರು. ಹೊಸದುರ್ಗ ಶಾಖಾಮಠದ ಆಡಳಿತಾಧಿಕಾರಿ ಬಿ.ಜಿ.ಗೋವಿಂದಪ್ಪ, ಮಾಜಿ ಸಂಸದ ಜಿ.ಎಸ್.ಬಸವರಾಜು, ಎಂ.ಎಲ್.ಸಿ ಹೆಚ್.ಎಂ.ರೇವಣ್ಣ, ವಿ.ಎಸ್.ಉಗ್ರಪ್ಪ, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮಾಜಿ ವಿ.ಪ.ಸದಸ್ಯ ಡಾ.ಹುಲಿನಾಯ್ಕರ್, ಜಿ.ಪಂ.ಸದಸ್ಯರಾದ ಕೆ.ಆರ್.ಮಹೇಶ್‌ಒಡೆಯರ್, ವೈ.ಸಿ.ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿರುವರು.
೧೮ರಂದು ಶ್ರೀ ಗುರುರೇವಣಸಿದ್ದೇಶ್ವರರ ಪ್ರತಿಷ್ಠಾಪನೆ, ಪ್ರಾಣಹುತಿ, ಹೋಮ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಮತ್ತು ಮಧ್ಯಾಹ್ನ ೨ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಕನಕ ಗುರುಪೀಠದ ಸ್ವಾಮೀಜಿಗಳಾದ ನಿರಂಜನಾನಂದಪುರಿಸ್ವಾಮಜಿ, ಈಶ್ವರಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಸಿದ್ದರಾಮನಂದಪುರಿ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಗೋಡೆಕೆರೆ ಮಠದ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ, ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸುವರು. ಶಾಸಕ ಸಿ.ಬಿ.ಸುರೇಶ್‌ಬಾಬು ಉಪಸ್ಥಿತರಿರುವರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ