(ಕೃಪೆ:ಚಿಕ್ಕನಾಯಕನಹಳ್ಳಿ ವರದಿಗಾರರು)
ರಾಜ್ಯದಲ್ಲಿ ಲಂಬಾಣಿ ಜನಾಂಗದ ಜಾವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಲಂಬಾಣಿ ತಾಂಡಾಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಜಲಜಾನಾಯಕ್ ತಿಳಿಸಿದರು.
ಅವರು ಲಂಬಾಣಿ ಜನಾಂಗದ ಆರಾಧ್ಯ ದೈವವಾದ ಭೀಮಾಸತಿ ದೇವಿ ಜಾತ್ರಾ ಮಹೋತ್ಸವದಲ್ಲಿ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು..ಬಂಜಾರ ಜನಾಂಗದವರಿಗೆ ಸರ್ಕಾರಿ ಸವಲತ್ತುಗಳು ಸಿಗುವಲ್ಲಿಆಗ್ತುತಿರುವ ತೊಂದರೆಯನ್ನು ನಿವಾರಿಸಲು ರಾಜ್ಯ ಸರ್ಕಾರ ತಾಂಡಾ ವಿಕಾಸ ಸಮಿತಿ ರಚಿಸುವ ಮೂಲಕ ಜನಾಂಗದ ಏಳಿಗೆಗೆ ಹೆಚ್ಚಿನ ಗಮನ ಹರಿಸುತ್ತಿದೆ.ಅಖಿಲ ಭಾರತ ಮಟ್ಟದಲ್ಲಿರುವ ನಮ್ಮ ಜನಾಂಗದ ಏಕೈಕ ಆರಾಧ್ಯ ದೈವವಾದ ಭೀಮಾಸತಿ ಜಾತ್ರೆ ನಡೆಯುವ ಈ ಸ್ಥಳದಲ್ಲಿ ಭಕ್ತರ ಅನುಕೂಲಕ್ಕಾಗಿ ೩ ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಅವರು ತಿಳಿಸಿದರು.
ರಸ್ತೆ ಅಭಿವೃದ್ದಿ,ಕುಡಿಯುವ ನೀರಿನ ಅನುಕೂಲಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ.ಪ್ರತಿ ತಾಂಡಾಗಳಿಗೆ ಅಬಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ೧೨ ಲಕ್ಷ,ಹೋಬಳಿ ಮಟ್ಟಕ್ಕೆ ೫೦ ಲಕ್ಷ,ತಾಲೂಕು ಮಟ್ಟಕ್ಕೆ ೧.೫೦ಕೋಟಿ,ಜಿಲ್ಲಾ ಮಟ್ಟಕ್ಕೆ ೩ ಕೋಟಿ ರೂಗಳಂತೆ ರಾಜ್ಯದಲ್ಲಿ ೭೦೦ ಸಮುದಾಯ ಭವನಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.ವಿದ್ಯುತ್ ಉಳಿತಾಯಕ್ಕೆ ಗಮನ ಹರಿಸಿ ಸೋಲಾರ್ ಅಳವಡಿಸಿಕೊಳ್ಳಲು ೫೦ ಸಾವಿರ ಅನುದಾನ ನೀಡಲಾಗಿದೆ.
ಪ್ರಸ್ತುತ ಲಂಬಾಣಿ ಹೆಣ್ಣುಮಕ್ಕಳ ಜೀವನ ಮಟ್ಟ ಸುಧಾರಣೆಗಾಗಿ ರಾಜ್ಯದ ೨೧ ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಕಸೂತಿ ತರಬೇತಿ ನೀಡಲಾಗ್ತುತಿದೆ.ರಾಯಚೂರು,ಬಾಗಲಕೋಟೆ,ಜಿಲ್ಲೆಗಳನ್ನು ಆಯ್ಕೆಮಾಡಿಕೊಂಡು,ತಾಂಡಾ ವಿಕಾಸ ಸಮಿತಿ ಮೂಲಕ ಅಭಿವೃದ್ದಿಯತ್ತ ಹೆಚ್ಚಿನ ಗಮನ ಹರಿಸಲಾಗಿದೆ.ದಶಕಗಳ ಬೇಡಿಕೆಯಾದ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸ ಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿಗಳು ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಸೂಚಿಸುವ ಮೂಲಕ ಬೇಡಿಕೆ ಈಡೇರಿಸುವ ಭರವಸೆ ಮೂಡಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀಮೆಎಣ್ಣೆ ಕೃಷ್ಣಯ್ಯ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಮ,ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಮುಖಂಡರಾದ ಕೆ.ಜಿ.ಕೃಷ್ಣೇಗೌಡ,ಸಿ.ಬಸವರಾಜು, ಉದ್ರಿ ಲೋಕೇಶ್, ಸಿ.ಜಿ.ರಾಮು,ಚಂದ್ರಶೇಖರ್ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ