ಹುಳಿಯಾರು : ಹೋಬಳಿಯ ದೊಡ್ಡಬಿದರೆ ಗ್ರಾಮ ಪಂಚಾಯ್ತಿಯ ಅವಳಗೆರೆ ಭೋವಿ ಕಾಲೋನಿ ೬೦ ಮನೆ ೨೦೦ ಜನಸಂಖ್ಯೆ ಹೊಂದಿರುವ ಗ್ರಾಮವಾಗಿದ್ದು ಮುಖ್ಯ ರಸ್ತೆಯಿಂದ ೨.ಕಿಮಿ ದೂರದಲ್ಲಿದೆ, ಪರಿಶಿಷ್ಠ ಜಾತಿಯವರೇ ಇರುವ ಗ್ರಾಮಕ್ಕೆ ಕರ್ನಾಟಕ ಸರ್ಕಾರ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ೫೦೫೪-೦೪-೩೩೭-೦-೦೧-೪೨೨ ವಿಶೇಷ ಘಟಕ ಯೋಜನೆಯಲ್ಲಿ ಗ್ರಾಮಕ್ಕೆ ೧೬೨ ಮೀಟರ್ ಉದ್ದದ ಸಿ.ಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ ಮುಂಜೂರಾಗಿದೆ, ನಿರ್ಮಾಣದ ಜವಾಬ್ಧಾರಿಯನ್ನು ತುಮಕೂರಿನ ಗುತ್ತಿಗೆದಾರ ಕೆ.ಎಸ್.ನಾಗರಾಜು ಎಂಬುವರು ವಹಿಸಿಕೊಂಡಿದ್ದಾರೆ, ತರಾತುರಿಯಲ್ಲಿ ಕಾಮಗಾರಿ ಮುಗಿಸಿದ್ದು ಕಾಮಗಾರಿ ಕಳಪೆಯಾಗಿದೆ ಎಂದು ಜನ ದೂರುತ್ತಿದ್ದಾರೆ.
ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಗುತ್ತಿಗೆದಾರರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದಿಲ್ಲ, ಒಬ್ಬ ಮೇಸ್ತ್ರಿ ಉಸ್ತುವಾರಿಯಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿ ಮುಗಿದು ಹೋಗಿದೆ, ಇಲಾಖೆ ನೀಡಿರುವ ಮಾರ್ಗ ಸೂಚಿ ಪ್ರಕಾರ ೬ಅಡಿ ದಪ್ಪದ ಸಿ.ಸಿ ರಸ್ತೆ ನಿರ್ಮಾಣ ಆಗಬೇಕಿತ್ತು, ಆದರೆ ೩ಅಡಿಗೂ ಕಡಿಮೆ ದಪ್ಪದ ಸಿಮೆಂಟ್ ಹಾಕಿದ್ದಾರೆ, ಅಲ್ಲದೆ ಕಳಪೆ ಗುಣಮಟ್ಟದ ಮರಳು ಹಾಗೂ ಸಿಮೆಂಟ್ ಬಳಸಿದ್ದಾರೆ, ಸರಿಯಾದ ಕ್ಯೂರಿಂಗ್ ಮಾಡಿಲ್ಲ ಎಂದು ಗ್ರಾಮದ ಮುಖಂಡ ಪ್ರಕಾಶ್ ಹೇಳುತ್ತಾರೆ.
ಚರಂಡಿ ಹಾಗೂ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ, ನೀರು ಹರಿಯಲು ಸರಿಯಾದ ದಾರಿಯಿಲ್ಲ, ಚರಂಡಿ ದಾಟಲು ರಸ್ತೆಗೆ ಅಡ್ಡಲಾಗಿ ಹಾಕಿರುವ ಒದಿಕೆ ಸರಿಯಿಲ್ಲ. ಈಗಾಗಲೆ ಮೂರ್ನಾಲ್ಕು ಕಡೆ ಚರಂಡಿ ದಡ ಕುಸಿದಿದೆ. ರಸ್ತೆ ಸಮತಟ್ಟಾಗಿಲ್ಲದೆ ಓಡಾಟ ಅಸಾಧ್ಯ ಎನ್ನುವಂತಾಗಿದೆ, ಗುಂಡಿ ಬಿದ್ದಿದೆ, ಈ ಭಾಗ್ಯಕ್ಕೆ ಸಿ.ಸಿ.ರಸ್ತೆ ಹಾಗೂ ಬಾಕ್ಸ್ ಚರಂಡಿ ಬೇಕಿತ್ತಾ ಎನ್ನುವಂತಾಗಿದೆ ಎಂದು ಹನುಮಕ್ಕ ಪ್ರಶ್ನೆ ಹಾಕುತ್ತಾರೆ.
ದೊಡ್ಡಬಿದರೆ ಗ್ರಾ.ಪಂ. ವ್ಯಾಪ್ತಿಯ ಅವಳಗೆರೆ ಭೋವಿ ಕಾಲೋನಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಕ್ಕೂ ಮುನ್ನ ಕಿತ್ತು ಹೋಗಿರುವ ಚರಂಡಿಯ ಸಿಮೆಂಟ್ ತೋರಿಸುತ್ತಿರುವ ಜನ. |
ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಗುತ್ತಿಗೆದಾರರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದಿಲ್ಲ, ಒಬ್ಬ ಮೇಸ್ತ್ರಿ ಉಸ್ತುವಾರಿಯಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿ ಮುಗಿದು ಹೋಗಿದೆ, ಇಲಾಖೆ ನೀಡಿರುವ ಮಾರ್ಗ ಸೂಚಿ ಪ್ರಕಾರ ೬ಅಡಿ ದಪ್ಪದ ಸಿ.ಸಿ ರಸ್ತೆ ನಿರ್ಮಾಣ ಆಗಬೇಕಿತ್ತು, ಆದರೆ ೩ಅಡಿಗೂ ಕಡಿಮೆ ದಪ್ಪದ ಸಿಮೆಂಟ್ ಹಾಕಿದ್ದಾರೆ, ಅಲ್ಲದೆ ಕಳಪೆ ಗುಣಮಟ್ಟದ ಮರಳು ಹಾಗೂ ಸಿಮೆಂಟ್ ಬಳಸಿದ್ದಾರೆ, ಸರಿಯಾದ ಕ್ಯೂರಿಂಗ್ ಮಾಡಿಲ್ಲ ಎಂದು ಗ್ರಾಮದ ಮುಖಂಡ ಪ್ರಕಾಶ್ ಹೇಳುತ್ತಾರೆ.
ಚರಂಡಿ ಹಾಗೂ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ, ನೀರು ಹರಿಯಲು ಸರಿಯಾದ ದಾರಿಯಿಲ್ಲ, ಚರಂಡಿ ದಾಟಲು ರಸ್ತೆಗೆ ಅಡ್ಡಲಾಗಿ ಹಾಕಿರುವ ಒದಿಕೆ ಸರಿಯಿಲ್ಲ. ಈಗಾಗಲೆ ಮೂರ್ನಾಲ್ಕು ಕಡೆ ಚರಂಡಿ ದಡ ಕುಸಿದಿದೆ. ರಸ್ತೆ ಸಮತಟ್ಟಾಗಿಲ್ಲದೆ ಓಡಾಟ ಅಸಾಧ್ಯ ಎನ್ನುವಂತಾಗಿದೆ, ಗುಂಡಿ ಬಿದ್ದಿದೆ, ಈ ಭಾಗ್ಯಕ್ಕೆ ಸಿ.ಸಿ.ರಸ್ತೆ ಹಾಗೂ ಬಾಕ್ಸ್ ಚರಂಡಿ ಬೇಕಿತ್ತಾ ಎನ್ನುವಂತಾಗಿದೆ ಎಂದು ಹನುಮಕ್ಕ ಪ್ರಶ್ನೆ ಹಾಕುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ