ಮೇಕೆಗಳಿಗೆ ಸೊಪ್ಪು ತರಲು ಹೋದ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿರುವ ಘಟನೆ ಕಾತ್ರಿಕೆಹಾಳ್ ಗ್ರಾಮದ ಹೊಸೂರಿನಲ್ಲಿ ನಡೆದಿದೆ.
ತಾಲ್ಲೂಕಿನ ಕಂದಿಕೆರೆ ಹೋಬಳಿ ಕಾತ್ರಿಕೆಹಾಳ್ ಗ್ರಾಮದ ನಾಗರಾಜು(ರಾಜು) 40 ವರ್ಷ ಮೃತಪಟ್ಟ ದುರ್ದೈವಿ .ಸೋಮವಾರ ಬೆಳಗ್ಗೆ ಈತ ಮೇಕೆಗಳಿಗೆ ಸೊಪ್ಪು ಕತ್ತರಿಸಲು ಮರಕ್ಕೆ ಹತ್ತಿದ ವೇಳೆ ಈ ಅವಘಡ ಸಂಭವಿಸಿದೆ.
ಚಿಕ್ಕನಾಯಕನಹಳ್ಳಿಯಿಂದ ಹಾಗಲವಾಡಿಗೆ ಹೋಗುವ ಮಾರ್ಗ ಮಧ್ಯದ 14 ನೇ ಕಿಲೋಮೀಟರ್ ಕಲ್ಲಿನ ಬಳಿ ಇರುವ ಗೋಣಿಮರವು ನಿರಂತರ ವಿದ್ಯುತ್ ಕಂಬದ ತಂತಿಗಳಿಗೆ ತಗುಲಿಕೊಂಡಿದ್ದು, ವಿದ್ಯುತ್ ತಂತಿಯು ತರಂಗ ಸ್ಪರ್ಶದಿಂದಾಗಿ ವ್ಯಕ್ತಿಗೆ ಪ್ರವಹಿಸಿ ಆತ ಸ್ಥಳದಲ್ಲೇ ಸಾವನ್ನಪ್ಪುವಂತೆ ಮಾಡಿದೆ. ಮೃತನು ಹೆಂಡತಿ ನಲ್ಲೂರಮ್ಮ ಹಾಗೂ ೬ ನೇ ತರಗತಿ ಹಾಗೂ ಅಂಗನವಾಡಿಗೆ ಹೋಗುತ್ತಿರುವ ಎರಡು ಪುಟ್ಟ ಹೆಣ್ಣು ಮಕ್ಕಳನ್ನು ಅಗಲಿದ್ದು ಈ ಅವಘಡದಿಂದಾಗಿ ಇಡೀ ಕುಟುಂಬ ಯಜಮಾನನಿಲ್ಲದೆ ಅನಾಥವಾಗಿದೆ.
ಘಟನಾ ಸ್ಥಳಕ್ಕೆ ಬೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಾಗೂ ಪೋಲಿಸ್ ಇಲಾಖೆ ಭೇಟಿ ನೀಡಿದ್ದು ಚಿಕ್ಕನಾಯಕನಹಳ್ಳಿ ಪಿಎಸ್ ಐ ವಿಜಯಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕನಾಯಕನಹಳ್ಳಿ ಶವಾಗಾರದಲ್ಲಿ ಶವ ಪರೀಕ್ಷೆ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ