ಹುಳಿಯಾರು:ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ನಾಟಕ ಮಾಧ್ಯಮವು ಒಂದಾಗಿದ್ದು ಪ್ರಸ್ತುತ ಸನ್ನಿವೇಶದಲ್ಲಿ ರಂಗಕಲೆ ಸಂಘಟನೆ ತುಂಬಾ ಕಷ್ಟ. ಕಲೆಯನ್ನು ಉಳಿಸಲು ಶ್ರಮ ಪಡಬೇಕಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ.ಷೇಕ್ ಮಾಸ್ತರ್ ಹೇಳಿದರು.
ಹುಳಿಯಾರು–ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿದ್ದ ಇಪ್ಪತ್ತು ದಿನಗಳ ಕಾಲದ ಕಾಲೇಜು ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಂಗಭೂಮಿಯ ಕಲಾಪ್ರಕಾರಗಳು ಇಂದಿಗೂ ತನ್ನತನವನ್ನು ಉಳಿಸಿಕೊಂಡಿದ್ದು ಸಮಾಜವನ್ನು ಪರಿವರ್ತಿಸುವ ಕೆಲಸಗಳನ್ನು ಮಾಡುತ್ತಿದೆ ಎಂದರು.ಕಲೆಯ ಮಹತ್ವವನ್ನು ಬಗ್ಗೆ ಪರಿಚಯಿಸುತ್ತಾ ತಾವು ಸಹ ಹವ್ಯಾಸಿ ಮತ್ತು ವೃತ್ತಿ ರಂಗ ಭೂಮಿಯಲ್ಲಿ ಕಾರ್ಯ ನಿರ್ವಹಿಸಿದ್ದು 1970ರ ದಶಕದಲ್ಲಿ ಗುರು ಕುಮಾರೇಶ್ವರ ನಾಟಕ ಕಂಪೆನಿ ಸ್ಥಾಪಿಸಿ, ಗುಲ್ಬರ್ಗದಲ್ಲಿ 13 ವರ್ಷ 65 ನಾಟಕಗಳ ೯೭೦೦ ನಾಟಕ ಪ್ರಯೋಗಗಳನ್ನು ನಿರ್ವಹಿಸಿದ್ದನ್ನು ತಿಳಿಸಿದರು.
ಪ್ರಾಚಾರ್ಯ ಪ್ರೊ.ಬಿಳಿಗೆರೆ ಕೃಷ್ಣಮೂರ್ತಿ ರವರು ಅಧ್ಯಕ್ಷತೆಯನ್ನು ವಹಿಸಿ ನಾಟಕಗಳ ಸ್ವರೂಪ ಕುರಿತು ಮಾತನಾಡಿ, ರಂಗ ಭೂಮಿ ಕ್ರಿಯೆ ಮತ್ತು ಪ್ರಕ್ರಿಯೆಗಳ ತಾಣ ಎಂದು ವಿಶ್ಲೇಷಿಸಿದರು.
ಸಂಪನ್ಮೂಲ ವ್ಯಕ್ತಿ ನಾಸಿರ್ ಹುಸೇನ್, ರಾಜು ಬಡಗಿ ಮತ್ತಿತರರಿದ್ದರು
ಡಾ|| ಎ.ಬಿ.ಬಾಳಪ್ಪನವರು ಷೇಕ್ ಮಾಸ್ತರ್ ರವರ ಪರಿಚಯದೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.ರಂಗಕಲಾವಿದೆ ,ಹಾರ್ಮೋನಿಯಂ ಮಾಸ್ಟರ್ ಗೌರಮ್ಮ ರಂಗಗೀತೆ ಹಾಡಿದರು.
ಶಿಬಿರದ ಸಹ ಸಂಚಾಲಕ ಆರ್.ಶಿವಯ್ಯ ಸ್ವಾಗತಿಸಿ ಎಂ.ಮಾಲಾ ನಿರೂಪಿಸಿದರು.
ಕಾಲೇಜು ವಿದ್ಯಾರ್ಥಿಗಳು ಬಿಳಿಗೆರೆ ಕೃಷ್ಣಮೂರ್ತಿ ವಿರಚಿತ ‘ಕೇಡಾಳ ಕೆಪ್ಪರ್ಕ’ ನಾಟಕ ಪ್ರದರ್ಶಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ