ಹುಳಿಯಾರು:ರಾಜಕೀಯವಾಗಿ ತವರು ಕ್ಷೇತ್ರವಾಗಿರುವ ಹುಳಿಯಾರಿಗೆ ದೇವಸ್ಥಾನ ಹಾಗೂ ರುದ್ರಭೂಮಿ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆ ಸಚಿವನಾಗಿದ್ದ ಅವಧಿಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆಮಾಡಿದ್ದು ಅದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವಂತೆ ಸಚಿವ ಜಯಚಂದ್ರ ತಿಳಿಸಿದರು.
ಮಂಗಳವಾರ ರಾತ್ರಿ ಹುಳಿಯಾರು ಸಮೀಪದ ನಿರುವಗಲ್ ಹುಲ್ಕಲ್ ದುರ್ಗಮ್ಮನ ಬೆಟ್ಟಕ್ಕೆ ಆಗಮಿಸಿದ ವೇಳೆ ಹುಳಿಯಾರಿನಲ್ಲಿ ಕಾಂಗ್ರೆಸ್ ಮುಖಂಡರುಗಳು ಸಚಿವರನ್ನು ಪಟಾಕಿ ಸಿಡಿಸಿ ಭರ್ಜರಿಯಾಗಿ ಸ್ವಾಗತಿಸಿ ಸಂಭ್ರಮಿಸಿದರು.
ಈ ವೇಳೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಹುಳಿಯಾರು ಕ್ಷೇತ್ರದ ಬಾಂಧವ್ಯ ಇಂದು ನಿನ್ನೆಯದಲ್ಲ. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭಿವೃದ್ಧಿಗೆಂದು ೨ ಕೋಟಿ ಹಣ ಬಿಡುಗಡೆಮಾಡಿದ್ದು ಮಾರ್ಚ್ ತಿಂಗಳಿನೊಳಗೆ ಅನುದಾನ ವಿನಿಯೋಗಮಾಡಿಕೊಳ್ಳುವಂತೆ ತಿಳಿಸಿದರು.ಹುಳಿಯಾರು ಆಸ್ಪತ್ರೆಗೆ ಖಾಯಂ ವೈದ್ಯಾಧಿಕಾರಿ ನೇಮಿಸುವ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಸಚಿವ ಜಯಚಂದ್ರ ಹುಳಿಯಾರು ಸಮೀಪದ ನಿರುವಗಲ್ ಹುಲ್ಕಲ್ ದುರ್ಗಮ್ಮನ ಬೆಟ್ಟಕ್ಕೆ ಆಗಮಿಸಿದ ವೇಳೆ ಹುಳಿಯಾರಿನಲ್ಲಿ ಕಾಂಗ್ರೆಸ್ ಮುಖಂಡರುಗಳನ್ನುದ್ದೇಶಿಸಿ ಮಾತನಾಡಿದರು. |
ಮಂಗಳವಾರ ರಾತ್ರಿ ಹುಳಿಯಾರು ಸಮೀಪದ ನಿರುವಗಲ್ ಹುಲ್ಕಲ್ ದುರ್ಗಮ್ಮನ ಬೆಟ್ಟಕ್ಕೆ ಆಗಮಿಸಿದ ವೇಳೆ ಹುಳಿಯಾರಿನಲ್ಲಿ ಕಾಂಗ್ರೆಸ್ ಮುಖಂಡರುಗಳು ಸಚಿವರನ್ನು ಪಟಾಕಿ ಸಿಡಿಸಿ ಭರ್ಜರಿಯಾಗಿ ಸ್ವಾಗತಿಸಿ ಸಂಭ್ರಮಿಸಿದರು.
ಈ ವೇಳೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಹುಳಿಯಾರು ಕ್ಷೇತ್ರದ ಬಾಂಧವ್ಯ ಇಂದು ನಿನ್ನೆಯದಲ್ಲ. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭಿವೃದ್ಧಿಗೆಂದು ೨ ಕೋಟಿ ಹಣ ಬಿಡುಗಡೆಮಾಡಿದ್ದು ಮಾರ್ಚ್ ತಿಂಗಳಿನೊಳಗೆ ಅನುದಾನ ವಿನಿಯೋಗಮಾಡಿಕೊಳ್ಳುವಂತೆ ತಿಳಿಸಿದರು.ಹುಳಿಯಾರು ಆಸ್ಪತ್ರೆಗೆ ಖಾಯಂ ವೈದ್ಯಾಧಿಕಾರಿ ನೇಮಿಸುವ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಧನುಷ್ ರಂಗನಾಥ್,ಬಡ್ಡಿಪುಟ್ಟಣ್ಣ,ಕೆಂಪಮ್ಮ,ವಕೀಲ ರಮೇಶ್ ಬಾಬು,ಬಿ.ವಿ.ಶ್ರೀನಿವಾಸ್,ಮಾಜಿ ತಾಪಂ ಸದಸ್ಯ ಮಲ್ಲಿಕಾರ್ಜುನಯ್ಯ,ಕಿರಣ್ ಕುಮಾರ್,ತಾಂಡವಾಚಾರ್ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ