ಹುಳಿಯಾರು : ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸಲು, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲು, ಕ್ರೀಡಾ ಪ್ರತಿಭೆಗಳನ್ನು ಬೆಳೆಸಲು ಯುವಜನ ಸೇವಾ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಗಳಲ್ಲಿ ನೂರಾರು ಸೌಲಭ್ಯಗಳಿದ್ದು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಸಲಹೆ ನೀಡಿದರು.
ಹುಳಿಯಾರಿನ ಎಸ್‌ಎಲ್‌ಆರ್ ಸರ್ಕಲ್ ಬಳಿ ಹುಳಿಯಾರ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ನಿರ್ಮಾಣಗೊಂಡಿರುವ ಪುಷ್ಪಮರುಳಪ್ಪ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಸರ್ಕಾರದ ಕ್ರೀಡಾಸೌಲಭ್ಯಗಳು ಪಟ್ಟಣದ ಪಾಲಾಗುತ್ತಿವೆ. ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ, ಕ್ರೀಡಾಪಟುಗಳಿಗೆ ಕ್ರೀಡಾಸಾಮಗ್ರಿ, ಕ್ರೀಡಾಕೂಟಗಳು ಹೀಗೆ ಎಲ್ಲವೂ ಸಿಗುತ್ತಿವೆ. ಹಳ್ಳಿಗಳು ಇದರಿಂದ ವಂಚಿತವಾಗುತ್ತಿದ್ದು ಅಧಿಕಾರಿಗಳು ಕ್ರೀಡಾಸೌಲಭ್ಯಗಳನ್ನು ಪಟ್ಟಣ ಪ್ರದೇಶಕ್ಕೆ ಮಾತ್ರವೇ ಸೀಮಿತಮಾಡದೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕೆಂದರು.
ಬ್ಯಾಂಕ್ ಮರುಳಪ್ಪ ಅವರು ಯುವಜನತೆಗೆ ಉತ್ತೇಜನ ನೀಡುವ ಸಲುವಾಗಿ ಒಳಾಂಗಣ ಕ್ರೀಡಾಂಗಣಕ್ಕೆ ಭೂದಾನ ನೀಡಿರುವುದನ್ನು ಶ್ಲಾಘಿಸಿದರು. ಅಲ್ಲದೆ ಆಟಗಾರರೂ ಸಹ ಸರ್ಕಾರದ ಸೌಲಭ್ಯ ಪಡೆಯದೆ ಸ್ವಂತ ಹಣದಿಂದ ಕ್ರೀಡಾಂಗಣ ನಿರ್ಮಿಸಿಸರುವುದು ಇತರರಿಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬ್ಯಾಂಕ್ ಮರುಳಪ್ಪ, ತಾಪಂ ಸದಸ್ಯ ಏಜೆಂಟ್ ಕುಮಾರ್, ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ಪಿಎಸ್‌ಐ ಪ್ರವೀಣ್, ಹೊಸಳ್ಳಿ ಅಶೋಕ್, ಶ್ರೀನಿವಾಸ್, ಹುಳಿಯಾರ್ ಸ್ಪೋರ್ಟ್ಸ್ ಕ್ಲಬ್ ಬಳೆಕುಮಾರ್, ಶ್ರೀನಿವಾಸ್, ರಂಗನಾಥ್, ಶ್ರೀಧರ್, ಗೌಡಿ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ