ಹುಳಿಯಾರು : 2016-17ನೇ ಸಾಲಿನ ಅನುದಾನರಹಿತ ಶಾಲೆಗಳಲ್ಲಿ ಆರ್.ಟಿ.ಇ ಅಡಿಯಲ್ಲಿ ಶೇ.25 ರಷ್ಟು ದಾಖಲಾತಿಗಾಗಿ ಆನ್ ಲೈನ್ ನಲ್ಲಿ ಮಾರ್ಚ್ 15ರವರೆಗೆ ಅರ್ಜಿಅಲ್ಲಿಸಬಹುದಾಗಿದೆ.
ಶಾಲಾ ದಾಖಲಾತಿ ಕೋರಿ ಪೋಷಕರು ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕ ಅಗತ್ಯ ದಾಖಲಾತಿಗಳ ಸಮೇತ ಗರಿಷ್ಠ ಐದು ಶಾಲೆಗಳಿಗೆ ಆಧ್ಯತೆ ಗುರುತಿಸಿ ಒಂದೇ ಒಂದು ಅರ್ಜಿ ಸಲ್ಲಿಸಲು ಕೋರಿದೆ.
ಎಲ್.ಕೆ.ಜಿ. ದಾಖಲಾತಿಗಾಗಿ ಮಗುವಿನ ವಯೋಮಿತಿ ಕನಿಷ್ಠ 3 ವರ್ಷ 10ತಿಂಗಳಿನಿಂದ 4 ವರ್ಷ 10ತಿಂಗಳು, 1ನೇ ತರಗತಿ ದಾಖಲಾತಿಗಾಗಿ ಕನಿಷ್ಠ 4ವರ್ಷ 10 ತಿಂಗಳಿನಿಂದ 5 ವರ್ಷ 10 ತಿಂಗಳು, 3.5ಲಕ್ಷ ಗರಿಷ್ಠ ಪೋಷಕರ ಆದಾಯ ಮಿತಿಯಿರಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯಿಂದ 1ಕಿ.ಮೀ ವ್ಯಾಪ್ತಿಯ ಜನವಸತಿ ಪ್ರದೇಶದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ, ನಗರ ಪ್ರದೇಶಗಳಲ್ಲಿ ವಾರ್ಡ್‍ವಾರು ಅರ್ಜಿ ಸಲ್ಲಿಸಬಹುದಾಗಿದೆ,
ಯಾವುದೇ ಸರ್ಕಾರಿ ಅನುದಾನ, ಅನುದಾನ ರಹಿತ ಶಾಲೆಗಳಿಲ್ಲದ ಪಕ್ಷದಲ್ಲಿ ಪಕ್ಕದ ವಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
ಅನಾಥ ಮಗು, ಹೆಚ್.ಐ.ವಿ ಪೀಡಿತ ಮಗು, ತೃತೀಯ ಲಿಂಗಿ, ವಿಶೇಷ ಅಗತ್ಯ ಮಗು, ವಲಸೆ ಮತ್ತು ಬೀದಿ ಮಗು, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ, ಪ್ರವರ್ಗ1, 2ಎ, 2ಬಿ, 3ಎ, 3ಬಿ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು : ಜನನ ಪ್ರಮಾಣ ಪತ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಆದಾರ್ ಕಾರ್ಡ್ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ