ಹುಳಿಯಾರು: ಸರಕಾರದ ಸೌಲಭ್ಯವನ್ನ ಪಡೆಯಲು ಸಂಘಟಿತ ಪ್ರಯತ್ನ ಅಗತ್ಯವಾಗಿದ್ದು ತಮ್ಮಲ್ಲಿನ ಸಂಕುಚಿತ ಭಾವನೆಯನ್ನ ತೊರೆದು ಬಲಿಜ ಸಮುದಾಯದ ಜನರು ಸಂಘಟಿತರಾಗುವಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಲಿಜ ಸಮಾಜದ ಮುಖಂಡ ರಮೇಶ್‌ಕುಮಾರ್ ತಿಳಿಸಿದರು.
ಹುಳಿಯಾರಿನ ಬಲಿಜ ಸಮುದಾದ ಭವನದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಲಿಜ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನ ನೀಡಿ ಉತ್ತಮ ವ್ಯಕ್ತಿಗಳನ್ನಾಗಿಸಿ ದೇಶಕ್ಕೆ ,ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನಾಗಿಸಿ ಎಂದರು.
ಸಭೆಯ ಅಧ್ಯಕ್ಷತೆವಹಿಸಿದ್ದ ನಿವೃತ್ತ ತಹಶಿಲ್ದಾರ್ ಲಕ್ಷ್ಮಣಪ್ಪ ಮಾತನಾಡಿ ಹಿಂದಿನ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡೆಯೂರಪ್ಪನವರು ತಮ್ಮ ಆಡಳಿತಾವಧಿಯಲ್ಲಿ ಬಲಿಜ ಸಮಾಜದ ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ ವರ್ಗ ೩ಎ, ಯಿಂದ ವರ್ಗ ೨ಎ ಗೆ ಸೇರಿಸುವ ಮೂಲಕ ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಳಕಾಗಿದ್ದರೆಂದು ಸ್ಮರಿಸಿದರು.
ಸಮುದಾಯದ ಮಕ್ಕಳು ಉತ್ತಮ ಶಿಕ್ಷಣವಂತರಾಗಿ ಸರಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮುಲಕ ಸಮಾಜದಲ್ಲಿ ನೊಂದ ಜನರಿಗೆ, ಬಡವರಿಗೆ ನೆರವಿನಹಸ್ತ ಚಾಚುವ ಮುಲಕ ಸಮಾಜದ ಅಭಿವೃದ್ದಿಗೆ ಮುಂದಾಗುವಂತೆ ಕರೆ ನೀಡಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಲಿಜ ಸಮಾಜದ ಸಂಘಕ್ಕೆ ಪಾದಾಧಿಕಾರಿಗಳಾಗಿ ಹುಳಿಯಾರು ಹೋಬಳಿಯಿಂದ ಗ್ರಾಪಂ ಮಾಜಿ ಉಪಾಧ್ಯಕ್ಷೆ ವೆಂಕಟಮ್ಮ ಹಾಗೂ ಹೂವಿನ ಬಸವರಾಜ ಅವರನ್ನು ಆಯ್ಕೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಸಮಾಜದ ವತಿಯಿಂದ ನೂತನ ತಾಪಂ ಸದಸ್ಯ ಹೆಚ್.ಎನ್.ಕುಮಾರ್ ಅವರನ್ನು ಗೌರವಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಬಲಿಜ ಸಮಾಜದ ಮುಖಂಡರಾದ ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣಪ್ಪ, ರೇಷ್ಮೆಇಲಾಖೆಯ ನಿವೃತ್ತ ಅಧಿಕಾರಿ ರಾಮಣ್ಣ ಹಾಗೂ ಕೃಷ್ಣಪ್ಪ, ಬಡಗಿರಾಮಣ್ಣ, ಸಣ್ಣವರದಯ್ಯ, ಶಂಕರಣ್ಣ, ಸಣ್ಣರಂಗಯ್ಯ, ಗ್ರಾಪಂ ಸದಸ್ಯರಾದ ಹೇಮಂತ್, ರಾಘವೇಂದ್ರ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ