ಹುಳಿಯಾರು: ಸಮೀಪದ ಗೂಬೆಹಳ್ಳಿ ಗ್ರಾಮದಲ್ಲಿ ಈಚೆಗೆ ಶ್ರೀಆದಿಶಕ್ತಿ ಕಣಿವಮ್ಮ ದೇವಿಯ ಮೂಲ ದೇವರ ದೇವಾಲಯಕ್ಕೆ ನಿರ್ಮಿಸಿರುವ ನೂತನ ಶಿಖರ ಕಳಸ ಸ್ಥಾಪನೆ ಮತ್ತು ಕುಂಭಾಬಿಷೇಕವು ೨೩ ಗ್ರಾಮಗಳ ದೇವತೆಗಳ ಸಮ್ಮುಖದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಆದಿಶಕ್ತಿ ದುರ್ಗಮ್ಮನವರ ಆಗಮನದೊಂದಿಗೆ ವೀರಾಂಜಾನೇಯ ಸ್ವಾಮಿಗೆ ಪಂಚಾಮೃತ ಆಭಿಷೇಕ ಮತ್ತು ನೂರೊಂದೆಡೆ ಸೇವೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ದುರ್ಗಮ್ಮ ಮತ್ತು ಆದಿಶಕ್ತಿ ಕಣಿವಮ್ಮ ದೇವರುಗಳ ಗಂಗಾ ಪೂಜೆ, ಪುಣ್ಯಾಹದೊಂದಿಹೆ ಹೋಮಹವನಾದಿಗಳು ಜರುಗಿತು.
ಕಡೆಯದಿನದಂದು ಶ್ರೀ ಬಿಂದು ಮಾಧವ ಶರ್ಮ ಸ್ವಾಮಿಜೀಗಳ ಆಮೃತ ಹಸ್ತದಿಂದ ಕಲಶಾರೊಹಣ, ಕುಂಭಾಬಿಷೇಕ ನಡೆಯಿತು.ನವ ಚಂಡಿಕಾ ಹೋಮ ನಂತರ ಪೂರ್ಣಾಹುತಿ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು ಆಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೈವ ಕೃಪೆಗೆ ಪಾತ್ರರಾದರು .
ಗೂಬೆಹಳ್ಳಿಯ ಶ್ರೀಆದಿಶಕ್ತಿ ಕಣಿವಮ್ಮ ದೇವಿ ದೇವಾಲಯದ ನೂತನ ಶಿಖರ ಕಳಸ ಸ್ಥಾಪನೆ ಮತ್ತು ಕುಂಭಾಬಿಷೇಕದಲ್ಲಿ ನಡೆದ ಉತ್ಸವದ ನೋಟ |
ಕಡೆಯದಿನದಂದು ಶ್ರೀ ಬಿಂದು ಮಾಧವ ಶರ್ಮ ಸ್ವಾಮಿಜೀಗಳ ಆಮೃತ ಹಸ್ತದಿಂದ ಕಲಶಾರೊಹಣ, ಕುಂಭಾಬಿಷೇಕ ನಡೆಯಿತು.ನವ ಚಂಡಿಕಾ ಹೋಮ ನಂತರ ಪೂರ್ಣಾಹುತಿ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು ಆಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೈವ ಕೃಪೆಗೆ ಪಾತ್ರರಾದರು .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ