ಹುಳಿಯಾರು: ಉತ್ತಮ ಆರೋಗ್ಯ,ಶಿಸ್ತು ಏಕಾಗ್ರತೆ ಜೊತೆಗೆ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಲಿದ್ದು ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಅತಿ ಮುಖ್ಯ.ಪ್ರತಿಯೊಬ್ಬ ಕ್ರೀಡಾಪಟುವೂ ಸೋಲುಗೆಲುವನ್ನು ಕ್ರೀಡಾಮನೋಭಾವದಿಂದ ಸರಿಸಮಾನಾಗಿ ಸ್ವೀಕರಿಸಬೇಕೆಂದು ಜಿಪಂ ಸದಸ್ಯ ಮಹಾಲಿಂಗಯ್ಯ ಸಲಹೆ ನೀಡಿದರು.
ಹುಳಿಯಾರು ಹೋಬಳಿ ಹೊಯ್ಸಳಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಕ್ರಿಕೇಟ್ ಪಂದ್ಯದ ಸಮಾರೋಪದಲ್ಲಿ ಜಿಪಂ ಸದಸ್ಯ ಮಹಾಲಿಂಗಯ್ಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. |
ಹುಳಿಯಾರು ಹೊಯ್ಸಳ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘ, ಸುವರ್ಣ ವಿದ್ಯಾ ಚೇತನದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಎಂಟನೇ ಬಾರಿಯ ಐಪಿಎಲ್ ಮಾದರಿಯ ಎಚ್‌ಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಿಜೇತರು: ಹೊಯ್ಸಲಕಟ್ಟೆಯ ಹೊಯ್ಸಳ ಬ್ಲೂಬಾಯ್ಸ್ ತಂಡ ಪ್ರಥಮ ಬಹುಮಾನ ೫ ಸಾವಿರ ರೂ ಪಡೆಯುವ ಮೂಲಕ ಹ್ಯಾಟ್ರಿಕ್ ಸುವರ್ಣಮುಖಿ ಕ್ರಿಕೆಟ್ ಕಪ್ ಪಡೆದು ರೋಲಿಂಗ್ ಟ್ರೋಫಿಗೆ ಭಾಜನವಾಯಿತು.
ಕಲ್ಲೇನಹಳ್ಳಿಯ ಶ್ರೀದೇವಿ ಕ್ರಿಕೇಟರ್ಸ್ ತಂಡ ದ್ವಿತೀಯ ಬಹುಮಾನವಾಗಿ ೩ ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಿತು. ಬೆಳ್ಳಾರ ತಂಡವು ತೃತೀಯ ಬಹುಮಾನವಾಗಿ ೧ ಸಾವಿರ ರೂ ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಿತು.
ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಯಗಚೀಹಳ್ಳಿ ಬ್ರಿಜೇಶ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಯಗಚೀಹಳ್ಳಿಪಾಂಡು, ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಲಕ್ಕೇನಹಳ್ಳಿ ರಘು, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಹೊಯ್ಸಲಕಟ್ಟೆ ಯುವರಾಜ್ ಪಡೆದುಕೊಂಡರು.
ಗ್ರಾಪಂ ಅಧ್ಯಕ್ಷೆ ಮುಂಜುಳಾ ಹೆಂಜಾರಪ್ಪ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಕಾಶ್, ಸುವರ್ಣ ವಿದ್ಯಾ ಚೇತನದ ರಾಮಕೃಷ್ಣಪ್ಪ, ಶಿಕ್ಷಕ ತಿಮ್ಮರಾಯಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುರೇಶ್, ವೈದ್ಯ ರಮೇಶ್,ತಾಪಂ ಸದಸ್ಯ ಮಧು, ಗ್ರಾಪಂ ಸದಸ್ಯರುಗಳಾದ ಮಲ್ಲಣ್ಣ, ಗಂಗಣ್ಣ, ಶಿಕ್ಷಕ ರಾಜಣ್ಣ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ