ಚಿಕ್ಕನಾಯಕನಹಳ್ಳಿಯ ಶ್ರೀ ಗುರುಪರಪ್ಪಸ್ವಾಮಿ ಮಠ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಜತ ಕವಚ ಧಾರಣಾ ಕಾರ್ಯಕ್ರಮವನ್ನು ಇದೇ ಮಾರ್ಚ್ 21 ಹಾಗೂ 22 ನಡೆಯಲಿದೆ.
ಮಾ.21 ರ ಸೋಮವಾರ ರಜತ ಕವಚಕ್ಕೆ ಗಂಗಾಸ್ನಾನ ಶ್ರೀ ತೀರ್ಥರಾಮಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡೆಯಲಿದೆ.
22ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ, ನಂದಾದೀಪ, 9ಗಂಟೆಗೆ ಅಭಿಷೇಕ, ರಜತಕವಚಧಾರಣೆ, ಗಣಪತಿ ಹೋಮ, ನವಗ್ರಹಹೋಮ, ಮಹಾಮೃತ್ಯುಂಜಯ ಹೋಮ, ಮಧ್ಯಾಹ್ನ 12ಕ್ಕೆ ಪೂಣರ್ಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, 12.30ಕ್ಕೆ ಶ್ರೀ ದೇವಿಪಾರಾಯಣ, ರಾತ್ರಿ 8ಕ್ಕೆ ಆರಂಭಗೊಳ್ಳುವ ಭಜನೆ ಅಹೋರಾತ್ರಿ ನಡೆಯಲಿದೆ.
ಇದೇ 22ರಂದು ರಾತ್ರಿ 8ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದ್ದು ಕನಕ ಹೊಸದುರ್ಗ ಗುರುಪೀಠದ ಶ್ರೀ ಈಶ್ವರಾನಂದಪುರಿಸ್ವಾಮೀಜಿ ಸಾನಿದ್ಯ ವಹಿಸುವರು. ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪರಪ್ಪಸ್ವಾಮಿ ಮಠದ ಅಧ್ಯಕ್ಷ ಸಿ.ಎಸ್.ದೊರೆಸ್ವಾಮಿ, ಪುರಸಭಾಧ್ಯಕ್ಷೆ ಪ್ರೇಮದೇವರಾಜು, ಉಪಾಧ್ಯಕ್ಷ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ, ಕ್ಯಾಪ್ಟನ್ಸೋಮಶೇಖರ್, ಪುರಸಭಾ ಸದಸ್ಯ ಸಿ.ಟಿ.ದಯಾನಂದ, ಸಿ.ಎಸ್.ರಾಜಣ್ಣ ಹಾಗೂ ಸಿ.ಬಸವರಾಜು ಮತ್ತಿತರರು ಪಾಲ್ಗೊಳ್ಳುವರು.
23ರಂದು ಬುಧವಾರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪರಪ್ಪಸ್ವಾಮಿ ಮಠದ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ