ಹುಳಿಯಾರು:ಪಟ್ಟಣದ ಪೌರಕಾರ್ಮಿಕ ಮರಿರಂಗಯ್ಯ(೫೦) ಬುಧವಾರ ಮಧ್ಯಾಹ್ನ ಉಸಿರಾಟದ ತೊಂದರೆಯಿಂದಾಗಿ ನಿಧನಹೊಂದಿದ್ದಾರೆ.
ಕಳೆದ ಮುವತ್ತು ವರ್ಷಗಳಿಂದಲೂ ಹುಳಿಯಾರು ಗ್ರಾಮ ಪಂಚಾಯ್ತಿಯಲ್ಲಿ ಸ್ಕಾವೆಂಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ ಎಲ್ಲರಿಗೂ ಬೇಕಾದವನಾಗಿದ್ದ.
ಮಂಗಳವಾರ ಎಂದಿನಂತೆ ಕೆಲಸ ನಿರ್ವಹಿಸಿದ್ದ ಈತ ರಾತ್ರಿ ಉಸಿರಾಟ ತೊಂದರೆಯಿಂದ ಬಳಲಿದ ಕಾರಣಕ್ಕೆ ಬುಧವಾರದಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ಸದಸ್ಯರಾದ ಎಲ್.ಆರ್.ಚಂದ್ರಶೇಖರ್,ಸುರೇಶ್ ಮಾಜಿ ಗ್ರಾಪಂ ಅಧ್ಯಕ್ಷ ಕಿಟ್ಟಪ್ಪ,ಕಾರ್ಯದರ್ಶಿ ಉಮಾಶಂಕರ್,ಮುರಳಿ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದು ವರ್ಗದವರು ಆಗಮಿಸಿ ಅಂತಿಮಗೌರವ ಸಲ್ಲಿಸಿದರು.
ಗ್ರಾಮಪಂಚಾಯ್ತಿ ಪರವಾಗಿ ಅಧ್ಯಕ್ಷೆ ಗೀತಾ ಐದು ಸಾವಿರ ರೂಪಾಯಿಗಳನ್ನು ಮೃತನ ಪತ್ನಿಗೆ ಅಂತಿಮ ಸಂಸ್ಕಾರಕ್ಕಾಗಿ ನೀಡಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ