ಹುಳಿಯಾರು: ಪಟ್ಟಣದಲ್ಲಿ ಸಾಹಿತಿಯೆಂದೆ ಖ್ಯಾತರಾಗಿದ್ದ ಹೆಚ್.ಬಿ.ನರಸಿಂಹಮೂರ್ತಿ(೮೦)ಸೋಮವಾರ ಬೆಳಗ್ಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು.
ಪಟ್ಟಣದ ದುರ್ಗಮ್ಮನ ಗುಡಿ ಬೀದಿಯಲ್ಲಿ ವಾಸವಾಗಿದ್ದ ಅವರಿಗೆ ಶನಿವಾರದಂದು ಲಘು ಹೃದಯಾಘಾತವಾಗಿ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು.
ಮೃತರು ಪತ್ನಿ ಹಾಗೂ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯರನ್ನು ಅಗಲಿದ್ದಾರೆ.
ಕೆ ಎಸ್ ಆರ್ಟಿಸಿ ಯಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿ ನಿವೃತ್ತರಾಗಿದ್ದ ಮೃತರು ಅನೇಕ ನಾಟಕಗಳನ್ನು ರಚಿಸಿದ್ದರಲ್ಲದೆ ಚಿತ್ರಕಲೆಯಲ್ಲೂ ತೊಡಗಿಸಿಕೊಂಡಿದ್ದರು.ಮೃತರ ಅಂತಿಮ ಸಂಸ್ಕಾರ ಮಂಗಳವಾರ ದಂದು ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ