ಹುಳಿಯಾರು: ಹೋಬಳಿಯ ದೊಡ್ಡಬೆಳವಾಡಿ(ಅಜ್ಜಪ್ಪನಹಟ್ಟಿ)ಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಐದು ದಿನಗಳ ಕಾಲದ ಮಹೋತ್ಸವಕ್ಕೆ ಶನಿವಾರದಂದು ಮುಂಜಾನೆ ಅಜ್ಜಿಸಿರಿಯಪ್ಪ ಸ್ವಾಮಿ ಹಾಗೂ ಕದಿರೆ ನರಸಿಂಹಸ್ವಾಮಿಯ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.
ಹುಳಿಯಾರು ಹೋಬಳಿಯ ದೊಡ್ಡಬೆಳವಾಡಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆದ ಜಾತ್ರಾಮಹೋತ್ಸವ |
ಭಾನುವಾರದಂದು ಅಂಬಲಾಪುರದಲ್ಲಿ ಸ್ವಾಮಿಯವರ ಪುಣ್ಯಾಹ ನಡೆದು ಮೂಲಸ್ಥಾನದಲ್ಲಿ ಪೂಜಾಕೈಂಕರ್ಯ ನೆರವೇರಿದರೆ ಸೋಮವಾರದಂದು ಸ್ವಾಮಿಯವರ ದೀಪೋತ್ಸವ ಹಾಗೂ ಹಾಲು ಮೀಸಲು ಕಾರ್ಯಕ್ರಮ ನಡೆಯಿತು.
ಮಂಗಳವಾರದಂದು ಸಂಜೆ ಸ್ವಾಮಿಯವರಿಗೆ ನೂರೊಂದೆಡೆ ಸೇವೆ ನಡೆದು ಮಹಾಮಂಗಳಾರತಿ ನಂತರ ರಾತ್ರಿ ಅನ್ನಸಂತರ್ಪಣೆ ಏರ್ಪಡಿಲಾಗಿದ್ದು ರಾತ್ರಿ ಹನ್ನೆರಡು ಗಂಟೆಯಿಂದ ಸ್ವಾಮಿಯವರ ಉತ್ಸವ ಹಾಗೂ ಮೆರವಣಿಗೆ ನಡೆಯಲಿದೆ.
ಬುಧವಾರದಂದು ಬಸವೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಸ್ವಾಮಿಯವರ ಆಗಮನವಾಗಿ ವಿಶೇಷಪೂಜೆ ನಡೆಯುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ