ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯಳನಡು : ಕವಿಕಾವ್ಯ ಗೋಷ್ಠಿ

           ಹುಳಿಯಾರು  ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಪಾಕ್ಷಿಕ ಕವಿಕಾವ್ಯಗೋಷ್ಠಿ ಕಾರ್ಯಕ್ರಮ ಹೋಬಳಿಯ ಯಳನಡು ಗ್ರಾಮದ ವೈ.ಎಸ್. ಉಮಾಮಹೇಶ್ ಅವರ ನಿವಾಸದಲ್ಲಿ ನಡೆಯಿತು.           ನಿವೃತ್ತ ಉಪನ್ಯಾಸಕ ತ.ಶಿ.ಬಸವಮೂರ್ತಿ ಅವರು ಜಾನಪದ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸದಲ್ಲಿ ಜಾನಪದ ಹುಟ್ಟು,ಬೆಳವಣಿಗೆ ಹಾಗೂ ಅದರ ಪ್ರಭಾವದ ಬಗ್ಗೆ ವಿವರವಾಗಿ ತಿಳಿಸಿದರು. ಅಲ್ಲದೆ ಭಾಗೀರತಿಯ ಕೆರೆಗೆಹಾರ ಜಾನಪದಕಥೆ,ಹೆಣ್ಣಿಗೆ ತವರುಮನೆಯ ಮೇಲಿನ ಅಕ್ಕರೆ,ಮಗಳಿಗೆ ತಾಯಿ ಬುದ್ದಿಹೇಳುವ ಪರಿ,ಗಂಡನಮೇಲೆ ಮಡದಿಯ ಅಭಿಮಾನ, ಒಡಹುಟ್ಟಿದವರಲ್ಲಿನ ಪ್ರೀತಿ,ತ್ಯಾಗ ಸೇರಿದಂತೆ ಇನ್ನಿತರ ವಿಷಯಗಳನ್ನು ಒಳಗೊಂಡಂತ ಜಾನಪದ ಸಾಹಿತ್ಯದ ಕೆಲ ತ್ರಿಪದಿಗಳನ್ನು ಹಾಡೂವ ಮೂಲಕ ಅವುಗಳ ಸಾರವನ್ನು ವಿವರಿಸಿದರು.           ನಿವೃತ್ತ ಹಿಂದಿಶಿಕ್ಷಕ ಬಿ.ಸಿ.ಲಿಂಗರಾಜಪ್ಪ ಅಧ್ಯಕ್ಷತೆವಹಿಸಿದ್ದು,ಜನಪದರ ಬದುಕನ್ನು ನಾವಿಂದು ಸ್ಮರಿಸುತ್ತಾ ಅದರು ಹೇಳಿದಂತೆ ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಬದುಕನು ಸಾರ್ಥಕ ಮಾಡಿಕೊಳ್ಳಬೇಕಿದೆ ಎಂದರು. ಸಾಹಿತ್ಯ ಪರಿಷತ್ ನ ಯಲ್ಲಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಮಾಮಹೇಶ್ ಸ್ವಾಗತಿಸಿ,ಕುಮಾರಿ ಪಲ್ಲವಿ ಪ್ರಾರ್ಥಿಸಿ, ದಯಾನಂದ್ ನಿರೂಪಿಸಿ, ನಾರಾಯಣಪ್ಪವಂದಿಸಿದರು.

ಥಿಯೋಸಫಿಯಿಂದ ಬಡವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ

        ಪಟ್ಟಣದ ಥಿಯೋಸಾಫಿಕಲ್ ಸೊಸೈಟಿ ವತಿಯಿಂದ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆ, ವಾಸವಿ, ಕನಕದಾಸ ಶಾಲೆ ಸೇರಿದಂತೆ ಪಟ್ಟಣದ ಕೆಲ ಶಾಲೆಗಳ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು. ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಥಿಯೋಸಾಫಿಕಲ್ ಸೊಸೈಟಿವತಿಯಿಂದ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು           ಹುಳಿಯಾರಿನು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದ ಸೊಸೈಟಿಯ ಸೇವಾ ವಿಭಾಗದ ಅಧ್ಯಕ್ಷ ಎಂ.ಆರ್.ಗೋಪಾಲ್ ಮಾತನಾಡಿ, ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ಹಣ ಖರ್ಚುಮಾಡುತ್ತಿದ್ದು, ಅದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳುವ ಮೂಲಕ ಶಿಕ್ಷಣ ಪಡೆದು ತಮ್ಮ ಭವಿಷ್ಯ ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು. ಕೈಗಾರಿಕರಣದಿಂದಾಗಿ ಇಂದಿನ ದಿನಗಳಲ್ಲಿ ಪರಿಸರ ನಾಶವಾಗುತ್ತಿದ್ದು,ಮಳೆಯ ಪ್ರಮಾಣ ಕ್ಷೀಣಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟಕೀಡಾಗುವ ಪರಿಸ್ಥಿತಿ ಎದುರಾಗಲಿದ್ದು ಇನ್ನಾದರೂ ಎಚ್ಚೆತ್ತ ನಾವುಗಳು ಪರಿಸರ ಸಂರಕ್ಷಣೆಗೆ ಮುಂದಾಗ ಬೇಕಿದೆ ಎಂದರು.              ಕಾರ್ಯದರ್ಶಿ ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಜೊತೆಯಲ್ಲಿ ತ್ಯಾಗ,ಸೇವಾ ಮನೋಭಾವ ಮೈಗೊಡಿಸಿಕೊಂಡು ಇತರರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಬೇಕು ಎಂದರು. ವಿದ್ಯಾರ್ಥಿ ಜೀವನದಿಂದಲೇ ಉತ್ತಮ ವಿಚ

ನೆಪಮಾತ್ರಕ್ಕೆ ನಡೆಯುತ್ತವೆಯೇ ಗ್ರಾಮ ಸಭೆ

            ಸರ್ಕಾರದ ಸವಲತ್ತಿಗಾಗಿ ಅರ್ಹಫಲಾನುಭವಿಗಳನ್ನು ಗುರ್ತಿಸಲು ನಡೆಯುವ ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳಲ್ಲಿ ಜನರು ಹಾಗೂ ಜನಪ್ರತಿನಿಧಿಗಳು ಇಲ್ಲದೆ ನೆಪಮಾತ್ರಕ್ಕೆ ಒಬ್ಬಿಬ್ಬರ ಹಾಜರಾತಿಯಲ್ಲಿ ನಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.   ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರ್ಯಾಂಟ್ ಮನೆಗಾಗಿ ಸಾರ್ವಜನಿಕರು ಅರ್ಜಿಸಲ್ಲಿಸುತ್ತಿರುವುದು. ಸಾರ್ವಜನಿಕರಿಗೆ ಗ್ರಾಮಸಭೆ ಬಗ್ಗೆ ಸೂಕ್ತ ಪ್ರಚಾರವಿಲ್ಲದ ಕಾರಣ ಸಭೆಗೆ ಹಾಕಿಸಿದ್ದ ಕುರ್ಚಿಗಳು ಖಾಲಿಖಾಲಿ.                ಈಗಾಗಲೇ ಹೋಬಳಿಯ ಹಲವು ಗ್ರಾ.ಪಂ.ಗಳಲ್ಲಿ ಇಂತಹ ಸಭೆಗಳು ಬೇಕಾಬಿಟ್ಟಿಯಾಗಿ ನಡೆದಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ಶನಿವಾರದಂದು ಕೆಂಕೆರೆ ಗ್ರಾಮಪಂಚಾಯ್ತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಹದಿನೆಂಟು ಸದಸ್ಯರ ಪೈಕಿ ಮೂರ್ನಾಲ್ಕು ಮಂದಿ, ಜಿಲ್ಲಾ ಹಾಗೂ ತಾ.ಪಂ.ಸದಸ್ಯರುಗಳ ಸುಳಿವೇ ಇಲ್ಲದಿರುವುದು ದುರ್ವೈವವಾಗಿದೆ.           ಹೋಬಳಿ ಕೆಂಕೆರೆ ಗ್ರಾಮಪಂಚಾಯ್ತಿಗೆ 2014-15 ನೇ ಸಾಲಿನ ಇಂದಿರಾ ಆವಾಜ್ ಯೋಜನೆಯಡಿ ಮಂಜೂರಾಗಿದ್ದ ಮನೆಗಳನ್ನು ಹಂಚಲು ಫಲಾನುಭವಿಗಳ ಆಯ್ಕೆಗಾಗಿ ಶನಿವಾರ ಗ್ರಾಮ ಸಭೆ ಅಯೋಜಿಸಿದ್ದು ಒಂದೆಡೆ ಸದಸ್ಯರುಗಳೇ ಗೈರಾಗಿದ್ದಾರೆ ಮತ್ತೊಂದೆಡೆ ಗ್ರಾಮಸ್ಥರ ಅನುಪಸ್ಥಿತಿಯೂ ಎದ್ದುಕಾಣುತಿತ್ತು.          ಪ್ರಚಾರದ ಕೊರತೆ : ಗ್ರಾಮ ಸಭೆ ನಡೆಯುವುದರ ಬಗ್ಗೆ ಹೆಚ್ಚು ಪ್ರಚಾರವಿಲ್ಲ ಎಂಬು

ಹುಳಿಯಾರು : ಸಂಭ್ರಮದ ರಂಜಾನ್ ಆಚರಣೆ

         ಹುಳಿಯಾರು  ಪಟ್ಟಣ ಸೇರಿದಂತೆ ಬಳ್ಳೆಕಟ್ಟೆ,ಕಂಪನಹಳ್ಳಿ,ಯಾಕೂಬ್ ಸಾಬ್ ಪಾಳ್ಯ ಮುಂತಾದೆಡೆ ಮುಸ್ಲಿ ಬಾಂಧವರು ರಂಜಾನ್ ಹಬ್ಬವನ್ನು ಮಂಗಳವಾರದಂದು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಶುಭಾಷಯವಿನಿಮಯ ಮಾಡಿಕೊಳ್ಳುತ್ತಿರುವುದು.         ಪಟ್ಟಣದಲ್ಲಿ ಕುತಬ್-ಎ-ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಸಾವಿರಕ್ಕೂ ಅಧಿಕ ಮಂದಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.         ಮುಂಜಾನೆಯೇ ಜಾಮಿಯಾ, ನೂರಾನಿ, ಮದೀನಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ನಂತರ ಬೆಳಿಗ್ಗೆ ಹತ್ತರ ವೇಳೆಗೆ ಈದ್ಗಾಮೈದಾನದಲ್ಲಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳಾದ ಮೌಲಾನ ಹಜರತ್ ಆಸೀಫ್ ಅವರ ಧಾರ್ಮಿಕ ಭೋದನೆಯಲ್ಲಿ ಹಬ್ಬದ ಸಂದೇಶ ನೀಡಿ ರಂಜಾನ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ತಿಳಿಸಿದರು.ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಮುತುವಲ್ಲಿ ಜಬೀಉಲ್ಲಾ, ನೂರಾನಿ ಮಸೀದಿಯ ಮುತುವಲ್ಲಿ ಬೈಜು ಸಾಬ್, ಮುಸ್ಲಿಂ ಸಮುದಾಯದ ಮುಖಂಡರುಗಳು ಸೇರಿದಂತೆ ಅಪಾರ ಸಂಖ್ಯೆಯ ಮುಸ್ಲಿಂಬಾಂಧವರು ಉಪಸ್ಥಿತರಿದ್ದರು.           ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿದ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಂಧುಗಳು ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಷಯ ವಿನಿಮಯಮಾಡಿಕೊಂಡರು.ಮಕ್ಕಳು, ಮಹಿಳೆಯರು ಮೆಹಂದಿ ಹಾಕಿ,

ಮಂಗಳಗೌರಿ ವ್ರತಾಚರಣೆ

          ಶ್ರಾವಣ ಮಾಸದ ಮೊದಲ ಹಬ್ಬವಾಗಿ ಮಂಗಳವಾರದಂದು ಸುಮಂಗಲಿಯರು ಮಂಗಳಗೌರಿ ವ್ರತ ಆಚರಿಸಿದರು.           ಪಾರ್ವತಿದೇವಿಯ ಕೃಪೆ ಸದಾ ನಮ್ಮಮೇಲಿದ್ದು, ಮುತ್ತೈದೆ ಭಾಗ್ಯ ಕಲ್ಪಿಸಲಿ ಎಂದು ಹೆಣ್ಣುಮಕ್ಕಳು ಈ ವ್ರತವನ್ನು ಆಚರಿಸುವ ಪರಿಪಾಠವಿದೆ. ಶ್ರಾವಣ ಮಾಸದ ಮೊದಲನೇ ಮಂಗಳವಾರದಿಂದ ಕಡೆ ಮಂಗಳವಾರದವರೆಗೆ ಬರುವ ನಾಲ್ಕು ಮಂಗಳವಾರವೂ ಈ ವ್ರತಾಚರಣೆ ನಡೆಯುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಹೆಚ್ಚಾಗಿ ಈ ವ್ರತ ಆಚರಿಸುವುದಿದ್ದು, ಮುಂದಿನ ಐದು ವರ್ಷದ ವರೆಗೆ ವ್ರತವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ.          ಮಂಗಳಸ್ನಾನ ಮಾಡಿ ಗೌರಿವಿಗ್ರಹ ಪ್ರತಿಷ್ಠಾಪಿಸಿ,ಕಳಸ ಸ್ಥಾಪಿನೆ ಮಾಡಿ ಅಲಂಕರಿಸಿ ಪೂಜಿಸಲಾಗುತ್ತದೆ. ಮಹಾಮಂಗಳಾರತಿ ನಂತರ ಮಂಗಳಗೌರಿ ಕಥೆಯನ್ನು ಪಠನೆ ಮಾಡಿಸುವುದಲ್ಲದೆ, ಆಗಮಿಸಿದ ಮುತ್ತೈದೆಯರಿಗೆ ಫಲ ತಾಂಬೂಲ ಸಮರ್ಪಿಸಲಾಗುತ್ತದೆ.

ಟಿಬಿಜೆ ಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಒತ್ತಾಯ

           ನಲವತ್ತು ವರ್ಷಗಳ ಕಾಲ ಸುಧೀರ್ಘ ರಾಜಕೀಯದಲ್ಲಿರುವ ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿರುವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಟಿ.ಬಿ.ಜಯಚಂದ್ರ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಅಭಿಮಾನಿಗಳು ಒತ್ತಾಯಿಸಿದರು. ಹುಳಿಯಾರಿನ ಕಾಂಗ್ರೆಸ್ ಕಾರ್ಯಕರ್ತರು ಟಿಬಿಜೆಯವರ 65 ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಪೊಲೀಸ್ ಠಾಣೆಯ ಸರ್ಕಲ್ ನಲ್ಲಿ ಮಂಗಳವಾರ ಆಚರಿಸಿದರು.              ಪಟ್ಟಣದ ಪೊಲೀಸ್ ಠಾಣೆಯ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು , ಜಯಚಂದ್ರ ಅಭಿಮಾನಿಗಳು ಟಿ.ಬಿ.ಜಯಚಂದ್ರ ಅವರ 65 ನೇ ಹುಟ್ಟುಹಬ್ಬ ಆಚರಿಸಿ ಪಟಾಕಿ ಸಿಡಿಸಿ,ಕೇಕ್ ಕತ್ತರಿಸಿ,ಸಿಹಿ ಹಂಚಿ ಸಂಭ್ರಮಿಸಿದರು.          ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಧನುಷ್ ರಂಗನಾಥ್ ಮಾತನಾಡಿ ಎರಡು ಬಾರಿ ಸಚಿವರಾಗಿ , ಶಾಸಕರಾಗಿರುವ ಟಿಬಿಜೆಯವರು ರಾಜ್ಯದ ಆಗುಹೋಗುಗಳ ಬಗ್ಗೆ ಸಮಗ್ರವಾಗಿ ತಿಳಿದಿದ್ದು, ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುವ ಶಕ್ತಿ ಅವರಿಗಿದ್ದು ಸಿಎಂ ಹಾಗೂ ಹೈಕಮಾಂಡ್ ನವರು ಟಿಬಿಜೆ ಅವರನ್ನು ರಾಜ್ಯದ ಡಿಸಿಎಂ ಆಗಿ ನೇಮಕಮಾಡಬೇಕು ಎಂದರು. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿಕಾರ್ಯಗಳನ್ನು ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದು ಇಂದಿಗೂ ಸಹ ಸದಾಕಾಲ ರಾಜ್ಯದ ಹಿತಕ್ಕಾಗಿ ದುಡಿಯುತ್ತಿರುವ ಅವರಿಗೆ ಶೀಘ್ರವೇ ಉಪಮುಖ್ಯಮಂತ್ರಿ ಸ್ಥಾನ

ಇವರಿಗೆ ಬೀದಿಬದಿಯ ಆರ್ಕೆಸ್ಟ್ರಾವೇ ಜೀವನಾಧಾರ

             ಆರ್ಕೇಸ್ಟ್ರಾ ಅಂದರೆ ಜಗಮಗಿಸುವ ಲೈಟು,ಆಳೆತ್ತರದ ಸ್ಪೀಕರ್ ,ಚಿತ್ತಾರದ ಬಟ್ಟೆಗಳೊಂದಿಗೆ ಸುಸ್ಸಜ್ಜಿತ ವೇದಿಕೆ ಹೀಗೆಲ್ಲಾ ಕಲ್ಪನೆ ಬರುತ್ತೆ.ಆದ್ರೆ ಇದ್ಯಾವುದೆ ಪರಿಕರಿಗಳಿಲ್ಲದೆ ಹಿಂಬದಿಗೊಂದು ಬ್ಯಾನರ್ ಕಟ್ಟಿ,ಮೊಬೈಲ್ ಮೂಲಕೆವೇ ಧ್ವನಿವರ್ಧಕದಲ್ಲಿ ಹಾಡು ಹಾಡಿಸಿ,ಹಾಡಿಗೆ ತಕ್ಕ ಹೆಜ್ಜೆ ಹಾಕಿ ಕುಣಿಯುತ್ತಾ ಜನರನ್ನು ರಂಜಿಸುವ ಮುಖಾಂತರ ಅವರು ನೀಡುವ ಹಣದಿಂದಲೆ ಜೀವನಬಂಡಿ ಸಾಗಿಸುತ್ತಿದ್ದಾರೆ ನಾರಾಯಣ್ಣಪ್ಪ. ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ಮೈಸೂರಿನ ವಿನಾಯಕ ಕಲಾತಂಡದವರ ನೃತ್ರ ಪ್ರದರ್ಶನ ನೋಡಲು ಸೇರಿದ್ದ ಜನರು ಬಸ್ ನಿಲ್ದಾಣದಲ್ಲಿ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವ ಕಲಾವಿದ .            ಮೂಲತಹ ರಂಗಭೂಮಿ ಕಲಾವಿದರಾದ ನಾರಾಯಣ್ಣಪ್ಪನ ಕುಟುಂಬದ ಹಿರಿಯರು ಬೀದಿನಾಟಕಗಳನಾಡುತ್ತ ಬದುಕು ಕಟ್ಟಿಕೊಂಡವರು.ಆದ್ರೆ ಬೀದಿನಾಟಕಗಳಿಂದ ಕಲಾಪೋಷಣೆಯೆ ಹೊರತು ಉದರಕ್ಕೆ ನೆರವಾಗಲ್ಲ ಅಂದ ಅರಿತ ನಾರಾಯಣಪ್ಪ ಮುಖ ಮಾಡಿದ್ದು ಆರ್ಕೆಸ್ಟ್ರಾ ಕಡೆ.ಹಾಡಲಿಕ್ಕೆ ಸುಮಧುರ ಕಂಠವಿಲ್ಲ,ಶಾಸ್ತ್ರೀಯ ಕುಣಿತ ಕಲಿಯದಿದ್ದರೂ ಸ್ವಂತ ಬದುಕು ಕಟ್ಟಿಕೊಳ್ಳಬೇಕೆಂಬ ಛಲದಿಂದ ಹಾಡಿಗೆ ಕುಣಿತವನ್ನು ಮೇಳೈಸಿ ಕಾರ್ಯಕ್ರಮ ನೀಡಲು ಶುರುಮಾಡಿದ್ರು.ಒಂದು ವರ್ಗದ ಜನಕ್ಕೆ ಇದು ಮನರಂಜನೆಯಾದರೆ ಇವರಿಗೆ ಜೀವನಕ್ಕೆ ದಾರಿಯಾಯಿತು.ಅಲ್ಲಿಂದ ಮುಂದೆ ಅದನ್ನೆ ಕಾಯಕ ಮಾಡಿಕೊಂಡು ಇಂದಿಗೂ ಅದರಲ್ಲೆ ಬದುಕು ಕಟ್ಟಿಕೊಂಡಿದ್ದಾರೆ.

ಹಿರಿಯ ವಿದ್ಯಾರ್ಥಿ ಸಂಘದ ಮೂಲಕ ಶಾಲೆಗೆ ನೆರವು

           ಶಾಲಾ-ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ತಂತಮ್ಮ ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘಗಳನ್ನು ರಚಿಸಿಕೊಂಡು ಅದಕ್ಕೆ ಇತರನ್ನು ಸೇರಿಸಿಕೊಳ್ಳುವ ಮೂಲಕ ತಾವು ಓದಿದ ಶಾಲೆಗೆ ಏನಾದರೂ ಒಂದು ಸೇವೆ ಮಾಡಲು ಮುಂದಾಗಬೇಕೆಂದು ಹಂದನಕೆರೆ ಪಿಎಸೈ ಸುನಿಲ್ ತಿಳಿಸಿದರು          ಹುಳಿಯಾರು ಸಮೀಪದ ಹಂದನಕೆರೆ ಜಿ.ವಿ.ಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ಹಿರಿಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಳಿಯಾರು ಸಮೀಪದ ಹಂದನಕೆರೆ ಜಿ.ವಿ.ಪಿ. ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಪಿಎಸೈ ಸುನಿಲ್ ನೆರವೇರಿಸಿದರು.             ಓದು ಮುಗಿದ ನಂತರ ಪ್ರತಿಯೊಬ್ಬರು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡು ಹಣ ಸಂಪಾದನೆ ಮುಂದಾಗುತ್ತಾರೆ. ನಂತರ ತಾವು ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡುವ ಮನೋಭಾವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮೈಗೊಡಿಸಿಕೊಳ್ಳಬೇಕು ಹಾಗೂ ಪ್ರತಿಯೊಂದು ಶಾಲೆಗಳಲ್ಲಿ ಈ ರೀತಿಯ ಸಂಘಳು ಸ್ಥಾಪನೆಯಾಗಿ ತಮ್ಮ ಕೈಲಾಗುವಷ್ಟು ಕಾರ್ಯಗಳನ್ನು ಶಾಲೆಗೆ ನೀಡುವ ಮೂಲಕ ಮಕ್ಕಳಿಗೆ ನೆರವಾಗಬೇಕು ಎಂದರು. ಅಲ್ಲದೆ ವಿದ್ಯಾರ್ಥಿಗಳಲ್ಲಿ ತಾವು ಸಹ ಓದು ಮುಗಿದ ನಂತರ ಈ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಸೇರಿ ಶಾಲೆಗೆ ಏನಾದರೂ ಕೊಡುಗೆ ನೀಡೋಣ ಎಂಬ ಮನೋಭಾವ ಮೂಡುವಂತಹ ಕಾರ್ಯವನ್ನು ಈ ಸಂಘ ಮಾಡಲಿ ಎಂದು ಆಶಿಸಿದರು.    

ರೋಗಕ್ಕೆ ಮದ್ದು-ಅಜ್ಜಿ ಹಬ್ಬ : ಮಾರಿ ಗಡಿದಾಟಿಸಲು ಹೋಳಿಗೆ ಎಡೆ

      ಅಜ್ಜಿ ಹಬ್ಬ ಅಂದ್ರೆ ಒಬ್ಬಟ್ಟಿನ(ಹೋಳಿಗೆಯ) ಹಬ್ಬವಾಗಿದ್ದು ಈ ಹಬ್ಬ ಆಚರಿಸಿದರೆ ಜನ ಜಾನುವಾರುಗಳ ರೋಗರುಜಿನ ದೂರ ಅದಕ್ಕೂ ಮೀರಿ ವರುಣನ ಕೃಪಾಕಟಾಕ್ಷವಾಗಿ ಸಮೃದ್ದ ಮಳೆಯಾಗಿ ಇಳೆ ತಂಪಾಗಿ ಎಲ್ಲರ ಬದುಕು ಹಸನಾಗಿರುತ್ತದೆ ಅನ್ನುವ ನಂಬಿಕೆ ಆಧಾರದ ಮೇಲೆ ಈ ಹಬ್ಬದ ಆಚರಣೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂಯಿದೆ.ಎಲ್ಲಾ ಹಬ್ಬಗಳಂತೆ ಪ್ರತಿ ವರ್ಷವೂ ಆಚರಿಣೆಯಿಲ್ಲದ ಈ ಹಬ್ಬವನ್ನು ಊರಿನಲ್ಲಿ ರೋಗರುಜ್ಜಿನಗಳು ತಾಂಡವಾಡುವಾಗ ಮಾತ್ರ ಊರಿನ ಯಜಮಾನರುಗಳು ಸಮಾಲೋಚಿಸಿ ಈ ಹಬ್ಬದ ಆಚರಣೆ ಮಾಡುತ್ತಾರೆ.ಹೆಚ್ಚಾಗಿ ಆಷಾಢ ಮಾಸದ ಮಂಗಳವಾರ ಅಥವಾ ಶುಕ್ರವಾರದಂದು ಆಚರಿಸುವ ವಾಡಿಕೆಯಿದ್ದು ಅದರಂತೆ ಈ ಹಬ್ಬವನ್ನು ಹುಳಿಯಾರು ಹಾಗೂ ಸುತ್ತೇಳು ಹಳ್ಳಿಗಳಲ್ಲಿ ಶುಕ್ರವಾರ ಆಚರಿಸಲಾಯಿತು. ಹುಳಿಯಾರಿನಲ್ಲಿ ಅಜ್ಜಿ ಹಬ್ಬದ ಅಂಗವಾಗಿ ಭಕ್ತರು ಮನೆಯಲ್ಲಿ ಮಾಡಿದ ಒಬ್ಬಟ್ಟು ಹಾಗೂ ಅನ್ನಸಾರನ್ನು ಅರ್ಪಿಸುತ್ತಿರುವುದು.         ಸಾಮಾನ್ಯವಾಗಿ ಊರಿನೆಲ್ಲರೂ ಈ ಹಬ್ಬ ತಪ್ಪದೆ ಆಚರಿಸುತ್ತಾರೆ.ಹಬ್ಬದ ದಿನವನ್ನು ಮುಂಚಿತವಾಗಿಯೆ ಡಂಗೂರ ಸಾರಿಸುವ ಮುಖಾಂತರ ತಿಳಿಸಲಾಗಿರುತ್ತದೆ.ಅಂದು ಎಲ್ಲರ ಮನೆಯಲ್ಲೂ ಒಬ್ಬಟ್ಟಿನ ಘಮಲೇಘಮಲು.ಅಂದು ಮನೆಯಲ್ಲಿ ಮಾಡಿದ ಒಬ್ಬಟ್ಟನ್ನು ಹಾಗೂ ಅನ್ನಸಾರನ್ನು ಕರಗಕ್ಕೆ ಎಡೆಯಿಡುವ ಸಂಪ್ರದಾಯವಿದೆ.         ಆಚರಣೆ ಹೇಗೆ:ಊರಿನ ಗ್ರಾಮದೇವತೆ ದೇವಾಲಯದ ಮುಂಭಾಗದಲ್ಲಿ ಕರಗ ಇಟ್ಟಿರುತ್ತಾರೆ.ಕರಗ ಅಂದರೆ ಜನಜಾನುವಾರುಗಳ

ಅತ್ಯುತ್ತಮ ಕಾರ್ಯನಿರ್ವಾಹಕ ಪ್ರಶಸ್ತಿ

ಹುಳಿಯಾರಿನ ಕಿಯೋನಿಕ್ಸ್ ಯುವ.ಕಾಂ ನ ವ್ಯವಸ್ಥಾಪಕ ಸಿ.ಎನ್.ಪ್ರಭುರವರಿಗೆ ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಈಚೆಗೆ ಕಂಪ್ಯೂಟರ್ ತರಬೇತಿ ನೀಡುತ್ತಾ ಬಂದಿರುವ ಹಿನ್ನಲೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಾಹಕ ಪ್ರಶಸ್ತಿ ನೀಡಿ ಗೌರವಿಸಿದರು.

ಜಮೀನು ಅಳತೆ ವಿವಾದ : ಠಾಣೆಯಲ್ಲಿ ದೂರು

           ಹುಳಿಯಾರು ಹೋಬಳಿ ಕಂಪನಹಳ್ಳಿಯಲ್ಲಿ ಜಮೀನೊಂದರ ಅಳತೆ ಮಾಡಲು ಹೋದ ಸರ್ವೇಯರ್ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೆ ಹಾಗೂ ಜಮೀನಿನ ಮಾಲೀಕ ಹಾಗೂ ಬಿಡಿಸಲು ಹೋದ ರೈತಸಂಘದವರ ಮೇಲೆ ಮಲ್ಲಿಕ್ ಸಾಬ್ ಕುಟುಂಬದವರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಠಾಣೆಯಲ್ಲಿ ದೂರು ದಾಖಲಾಗಿದೆ. ಜಮೀನಿನ ಮಾಲೀಕರ ಮೇಲೆ ದೌರ್ಜನ್ಯ ಎಸಗಿರುವವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ರೈತಸಂಘದವರು ಪಿಎಸೈ ಅವರನ್ನು ಒತ್ತಾಯಿಸಿದರು.           ಕಂಪನಹಳ್ಳಿಯಲ್ಲಿ ಪದ್ಮನಾಭ ಮತ್ತು ಮಲ್ಲಿಕ್ ಸಾಬ್ ಅವರ ನಡುವೆ ಜಮೀನಿಗೆ ಸಂಬಂಧಿಸಿದಂತೆ ವಿವಾದವಿದ್ದು,ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಅಳತೆ ಮಾಡಲು ಸರ್ವೆಯರ್ ಆಗಮಿಸಿದಾಗ ವಾದವಿವಾದ ನಡೆದು ಕಡೇಕರ್ ಕಡೆಯವರ ಮೇಲೆ ಹಲ್ಲೆ ಮಾಡಲಾಗಿದೆ.ಕಂಪನಹಳ್ಳಿಯಲ್ಲಿ ಶವಸಂಸ್ಕಾರಕ್ಕೆ ತೆರಳಿದ ರೈತ ಸಂಘದವರು ಗಲಾಟೆ ಗಮನಿಸಿ ಸ್ಥಳಕ್ಕೆ ಧಾವಿಸಿದಾಗ ಅವರ ಮೇಲೂ ಮಚ್ಚು,ದೊಣ್ಣೆಯಿಂದ ಹಲ್ಲೆಗೆ ಮುಂದಾಗಿದ್ದಾರೆ. ತಮ್ಮಡಿಹಳ್ಳಿ ಮಲ್ಲಿಕಣ್ಣ ಅವರ ಹಲ್ಲು ಮುರಿಯುವಂತೆ ಅವರ ಮೇಲೆ ಹಲ್ಲೆ ಮಾಡಿದ್ದು ಹಾಗೂ ಪೊಲೀಸರ ಆಗಮನದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿರುವ ಪದಾಧಿಕಾರಿಗಳು ಮೇಲ್ಕಂಡ ಎಲ್ಲಾ ಘಟನೆಗೆ ಸ್ಥಳದಲ್ಲೇ ಇದ್ದ ತಹಶೀಲ್ದಾರ್ ಅವರು ಸಾಕ್ಷಿಯಾಗಿದ್ದು, ಅವರ ಮುಂದೆಯೇ ನಮ್ಮ ಮೇಲೆ ದೌರ್ಜನ್ಯವೆಸಗಿರುವ ಮಲ್ಲಿಕ್ ಸಾಬ್ ಕುಟುಂಬದವರ ಮೇಲೆ ಕ್ರಮ ತೆಗೆದುಕೊ

ಅನುಮತಿಯಿಲ್ಲದೆ ಕೇಬಲ್ ಗುಂಡಿ

          ಗ್ರಾಮ ಪಂಚಾಯ್ತಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲು ಕೇಬಲ್ ಹೊಳಲು ಸುಮಾರು ಎರಡು ಕಿ.ಮೀ ಗೂ ಹೆಚ್ಚು ದೂರ ಆಳುದ್ದ ತೆಗೆದಿದ್ದ ಗುಂಡಿಯನ್ನು ಲೋಕೋಪಯೋಗಿಇಲಾಖೆ ಅಧಿಕಾರಿಗಳು ಮುಚ್ಚಿಸಿದ ಘಟನೆ ಶನಿವಾರ ಪೊಚಗಟ್ಟೆ-ಬರಕನಹಾಳ್ ರಸ್ತೆಯಲ್ಲಿ ನಡೆದಿದೆ. ಹುಳಿಯಾರು ಸಮೀಪದ ಬರಕನಹಾಳ್ ರಸ್ತೆಯಲ್ಲಿ ನೆಟ್ ಸಂಪರ್ಕಕ್ಕೆ ಆಳುದ್ದ ತೆಗೆದಿರುವ ಕಾಲುವೆ. ಸಹಾಯಕ ಎಂಜಿನಿಯರ್ ಚಂದ್ರಶೇಖರ್ ಸೂಚನೆ ಮೇರೆಗೆ ವಾಪಸ್ಸ್ ಕಾಲುವೆ ಮುಚ್ಚುತ್ತಿರುವುದು.          ಪ್ರತಿ ಗ್ರಾ.ಪಂ.ಯಲ್ಲಿಯೂ ಎಲ್ಲಾ ದಾಖಲೆಗಳನ್ನು ಈ-ಸ್ವತ್ತಿನಡಿ ನೀಡಬೇಕಾಗಿರುವುದರಿಂದ ಪ್ರತಿಯೊಂದು ಪಂಚಾಯ್ತಿಯೂ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೇವೆ ಅಗತ್ಯವಾಗಿದ್ದು, ಇದೀಗ ಎಲ್ಲೆಡೆ ನೆಟ್ ಸೇವೆಗೆ ದೂರಸಂಪರ್ಕ ಇಲಾಖೆ ಮುಂದಾಗಿದೆ. ಗ್ರಾಮಾಂತರ ಪ್ರದೇಶವಾದ ಬರಕನಹಾಳ್ ಗ್ರಾ.ಪಂ. ಕಚೇರಿಗೆ ಇಂಟರ್ ನೆಟ್ ಸೌಲಭ್ಯಕ್ಕಾಗಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು ದೂರಸಂಪರ್ಕ ಇಲಾಖೆ ಮುಂದಾಗಿದ್ದು ಇದಕ್ಕಾಗಿ ಸುಮಾರು ಎರಡು ಕಿ.ಮೀ ಗೂ ಹೆಚ್ಚು ದೂರ ಗುಂಡಿತೆಗೆಯಲು ಗುತ್ತಿಗೆ ನೀಡಿದ್ದು, ಕಳೆದ ಮೂರು ದಿನಗಳಿಂದ ಜೆ.ಸಿ.ಬಿ, ಹಾಗೂ ಹಿಟ್ಯಾಜಿ ಮೂಲಕ ರಸ್ತೆಪಕ್ಕ ಕಾಲುವೆ ತೆಗೆಯಲಾಗುತ್ತಿತ್ತು. ಟಾರ್ ರಸ್ತೆಯ ಪಕ್ಕದಲ್ಲೇ ತೆಗೆಯುತ್ತಿರುವುದರಿಂದ ರಸ್ತೆಗೆ ಹಾನಿಯಾಗಲಿದೆ ಎಂದು ದೂರು ಕೇಳಿಬಂದ ಹಿನ್ನಲೆಯಲ್ಲಿ ಲೋಕೋಪಯೋಗಿಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧ

ಗೌಡಗೆರೆಯಲ್ಲಿ ಉಚಿತ ಬಿತ್ತನೆ ರಾಗಿ ವಿತರಣೆ

         ಕೃಷಿ ಇಲಾಖೆವತಿಯಿಂದ ಒರಟು ಧಾನ್ಯಗಳ ಅಭಿವೃದ್ದಿ ಯೋಜನೆಯಡಿ ರಾಗಿ ಬೆಳೆ ಇಳುವರಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹೋಬಳಿಯ ಕೆಂಕೆರೆ ಮಜುರೆ ಗೌಡಗೆರೆ ಭಾಗದ ರೈತರುಗಳಿಗೆ ಉಚಿತ ರಾಗಿ ಹಾಗೂ ಗೊಬ್ಬರವನ್ನು ವಿತರಿಸಲಾಯಿತು. ಹುಳಿಯಾರು ಹೋಬಳಿ ಗೌಡಗೆರೆಯ ರೈತರಿಗೆ ಕೃಷಿ ಇಲಾಖೆವತಿಯಿಂದ ಉಚಿತ ಬಿತ್ತನೆ ರಾಗಿ ವಿತರಿಸಲಾಯಿತು.            ಜಿ.ಪಂ.ಸದಸ್ಯೆ ಮಂಜುಳಾ ರೈತರಿಗೆ ಬಿತ್ತನೆ ರಾಗಿ,ಜಿಪ್ಸಂ,ಬೋರೆಕ್ಸ್ ಮತ್ತು ಕಾಂಪೋಸ್ಟ್ ಗೊಬ್ಬರ ವಿತರಿಸಿದರು.ನಂತರ್ ಮಾತನಾಡಿದ ಬಿತ್ತನೆ ಬೀಜ ಪಡೆದ ರೈತರು ಬಿತ್ತನೆ ಹಾಗೂ ಸೂಕ್ತ ಸಮಯದಲ್ಲಿ ಗೊಬ್ಬರ ಕೊಟ್ಟು ಹೆಚ್ಚಿನ ಇಳುವರಿ ಪಡೆಯುವಂತೆ ಹಾಗೂ ಬಳಕೆಗೂ ಮೀರಿ ಹೆಚ್ಚಳವಾದ ರಾಗಿಯನ್ನು ಎಪಿಎಂಸಿ ಮಾರಾಟ ಮಾಡಿ ಸರ್ಕಾರದ ಅನ್ನಭಾಗ್ಯ ಯೋಜನೆಗೆ ನೆರವಾಗಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಸೀತಾರಾಮಯ್ಯ, ಗ್ರಾ.ಪಂ.ಸದಸ್ಯೆ ನೇತ್ರಾವತಿ, ಕೃಷಿ ಅಧಿಕಾರಿ ಶಿವಣ್ಣ, ರೈತ ಅನುವುಗಾರ ಶಿವಣ್ಣ, ಮುಖಂಡರಾದ ದುರ್ಗಯ್ಯ,ಜಯಣ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಭ್ರಮದ ಭೀಮನಮಾವಾಸ್ಯೆ ಆಚರಣೆ

         ಆಷಾಢ ಮಾಸದ ಕೊನೆಯ ಅಮವಾಸ್ಯೆಯಂದು ಭೀಮನ ಅಮವಾಸ್ಯೆಯನ್ನು ಹೆಣ್ಣು ಮಕ್ಕಳು ಸಂಭ್ರಮದಿಂದ ಆಚರಿಸಿದರು. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ ಹಾಗೂ ಪತಿಯ ಆರೋಗ್ಯ ಆಯುಷ್ಯ ಮತ್ತು ಓಜಸ್ಸು ವೃದ್ಧಿಗಾಗಿ , ತಮ್ಮನ್ನು ದೀರ್ಘಸುಮಂಗಲಿಯನ್ನಾಗಿಸುವಂತೆ ಕೋರಿ ಪೂಜಿಸುವ ಹಬ್ಬವೇ ಭೀಮನ ಅಮವಾಸ್ಯೆ. ಆಷಾಢ ಮಾಸದ ಕಡೆ ಅಮವಾಸ್ಯೆಯೆಂದು ಆಚರಿಸಲಾಗುವ ಈ ಪೂಜೆಯನ್ನು ಗಂಡನಪೂಜೆ ಎಂದು ಕರೆಯಲಾಗುತ್ತದೆ. ಮದುವೆಯಾದ ನಂತರ ಹೆಣ್ಣುಮಕ್ಕಳು ಒಂಭತ್ತು ವರ್ಷ ಈ ವರ್ಷ ವ್ರತಮಾಡುವ ಪದ್ಧತಿಯಿದ್ದು ಹೊಸಿಲ ಮೇಲೆ ಭಂಡಾರವಿಟ್ಟು ಸಹೋದರರಿಂದ ಹೊಡೆಸಿ ದಕ್ಷಿಣೆ ಕೊಡುವ ಪದ್ಧತಿ ಇದೆ. ಇದರ ಅಂಗವಾಗಿ ಜ್ಯೋತಿಭೀಮೇಶ್ವರ ವ್ರತ ಆಚರಣೆ ಮಾಡಲಾಗುತ್ತದೆ.. ಭೀಮನ ಅಮವಾಸ್ಯೆ ಮರುದಿನ ಶ್ರಾವಣ ಮಾಸ ಆರಂಭವಾಗಲಿದ್ದು, ಇನ್ನು ಸಾಲುಸಾಲು ಹಬ್ಬಗಳು ಪ್ರಾರಂಭ ವಾಗುತ್ತವೆ. ಭೀಮನ ಅವಮಾಸ್ಯೆ ಪೂಜೆಯಲ್ಲಿ ತೊಡಗಿಕೊಂಡಿರುವ ಹೆಣ್ಣುಮಗು.         ದೇವಾಲಯಗಳಲ್ಲಿ : ಹೋಬಳಿ ಕೆಂಕೆರೆ ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಶನಿವಾರದಂದು ಭೀಮನವಮಾಸ್ಯೆ ಅಂಗವಾಗಿ ರಂಗನಾಥಸ್ವಾಮಿಯ ಮೂಲ ವಿಗ್ರಹಕ್ಕೆ ಅಭಿಷೇಕ,ಅರ್ಚನೆ ನಡೆಸಲಾಯಿತು.         ಶನಿವಾರ ಮುಂಜಾನೆಯಿಂದ ಈಶ್ವರಯ್ಯ ಹಾಗೂ ಚನ್ನಬಸವಯ್ಯನವರ ಪೌರೋಹಿತ್ಯದಲ್ಲಿ ಸ್ವಾಮಿಗೆ ಪಂಚಾಮೃತಾಭಿಷೇಕ,ಬಿಲ್ಚಾರ್ಚನೆ,ಸಹಸ್ರನಾಮಾರ್ಚನೆ,ತುಳಸಿ ಪತ್ರೆ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವ

ರಂಜಾನ್ ಅಂಗವಾಗಿ ಶಾಂತಿ ಸಭೆ

        ರಂಜಾನ್ ಹಬ್ಬದ ನಿಮಿತ್ತ ಇಲ್ಲಿನ ಪೋಲಿಸ್ ಠಾಣೆಯಲ್ಲಿ ಸಿಪಿಐ ಜಯಕುಮಾರ್ ನೇತೃತ್ವದಲ್ಲಿ ಸಾರ್ವಜನಿಕ ಶಾಂತಿಸಭೆ ನಡೆಸಲಾಯಿತು. ಹುಳಿಯಾರು ಠಾಣೆಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ಸಿಪಿಐ ಜಯಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು.            ಹಿಂದೂ ಹಾಗೂ ಮುಸ್ಲಿಂರು ಸಹೋದರರಂತೆ ನಡೆದುಕೊಳ್ಳಬೇಕು ಹಾಗೂ ಶಾಂತಿಕದಡುವಂತಹ ಯಾವುದೇ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಸಣ್ಣಪುಟ್ಟ ಅಹಿತಕರ ಘಟನೆ ನಡೆದಲ್ಲಿ ಸಮಾಜದ ಹಿರಿಯರು ಮುಂದಾಳತ್ವವಹಿಸಿ ಸಮಸ್ಯೆ ಬಗೆ ಹರಿಸಬೇಕೆ ಹೊರತು ಅದನ್ನು ಪ್ರಚೋದಿಸಿ ಸಮಸ್ಯೆ ಬಿಗಡಾಯಿಸಲು ಮುಂದಾಗಬಾರದು ಎಂದು ಸಿಪಿಐ ಜಯಕುಮಾರ್ ಮನವಿ ಮಾಡಿದರು.         ಪಿಎಸೈ ಘೋರ್ಪಡೆ ಮಾತನಾಡಿ ಹಬ್ಬಗಳಲ್ಲಿ ಮೆರವಣಿಗೆ ಸೇರಿದಂತೆ ಇನ್ನಿತ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಠಾಣೆಯ ಗಮನಕ್ಕೆ ತರಬೇಕು, ಮುಖಂಡರಾದವರು ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕು,ಯಾರೊಬ್ಬರು ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವಂತೆ ವರ್ತಿಸಬಾರದು. ಸಮಾಜ ಘಾತುಕ ಶಕ್ತಿಗಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕೆಂದು ಕೋರಿದರು ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ತಾವು ಅದಕ್ಕೆ ತಕ್ಕ ಕ್ರಮವನ್ನು ಕೈಗೊಳ್ಳುತ್ತೇವೆ ಎಂದರು.           ಈ ಸಂಧರ್ಭದಲ್ಲಿ ಸಮಾಜದ ಮುಖಂಡರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.. ಮುತುವಲ್ಲಿ ಜಬೀಉಲ್ಲಾ, ಮೀಸೆರಂಗಪ್ಪ,ಪೈಲ್ವಾನ್ ಜಯಣ್ಣ, ಹಿಂದೂ ಜ

ಕಾಡು ಸೇರಿದ ಕರಡಿ

          ಹುಳಿಯಾರು  ಹೋಬಳಿಯ ಕೆಂಕೆರೆ ಗ್ರಾಮದ ಹೊನ್ನಯ್ಯನಪಾಳ್ಯದ ಮದೇವಜ್ಜನ ಈಶ್ವರಯ್ಯಅವರ ತೋಟದ ಪಂಪ್ ಹೌಸ್ ನ ಗುಂಡಿಗೆ ಬುಧವಾರ ಮುಂಜಾನೆ ಬಿದಿದ್ದ ಕರಡಿಯನ್ನು ಮೇಲೆತ್ತಲು ನೆಡೆಸಿದ ಕಾರ್ಯಾಚರಣೆ ಫಲ ನೀಡಿದ್ದು ಕರಡಿ ಮರಿಗಳೊಂದಿಗೆ ತಡರಾತ್ರಿ ಸುರಕ್ಷಿತವಾಗಿ ಕಾಡು ಸೇರಿದೆ.            ಕಾಡಿನಿಂದ ಆಹಾರ ಅರಸಿ ತೋಟವೊಂದಕ್ಕೆ ಬಂದಿದ್ದ ಕರಡಿ ಹೊನ್ನಯ್ಯನಪಾಳ್ಯದ ಮದೇವಜ್ಜನ ಈಶ್ವರಯ್ಯನವರ ತೋಟದ ಪಂಪ್ ಹೌಸ್ ನ ಗುಂಡಿಯಲ್ಲಿ ತನ್ನ 2 ಮರಿಗಳೊಂದಿಗೆ ಬಿದ್ದಿತ್ತು. ತಾಯಿ ಕರಡಿಯೊಂದಿಗೆ ಎರಡು ಮರಿಗಳಿದ್ದರೂ ನೆನ್ನೆ ತಿಳಿದು ಬಂದಿರಲಿಲ್ಲ. ಅರಣ್ಯ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು ಬುಧವಾರ ಸಂಜೆ ಜಂಟಿ ಕಾರ್ಯಾಚರಣೆ ನಡೆಸಿ ಪಂಪ್ ಹೌಸ್ ಗುಂಡಿಗೆ ಏಣಿ ಹಾಕಿದ ಪರಿಣಾಮ ಮೇಲಕ್ಕೆ ಬಂದ ಕರಡಿ ತನ್ನ ಮರಿಗಳ ಸಮೇತ ಸುರಕ್ಷಿತವಾಗಿ ಕಾಡಿನ ಹಾದಿ ಹಿಡಿದಿದೆ ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಶಾಂತರಾಜಯ್ಯ ಪತ್ರಿಕೆಗೆ ತಿಳಿಸಿದ್ದಾರೆ. 

ಬಿಜೆಪಿ ಸದಸ್ಯರುಗಳಿಂದ ಬರ ಪೀಡೀತ ಪ್ರದೇಶಗಳ ವೀಕ್ಷಣೆ

          ಬರ ನಿರ್ವಹಣೆಯಲ್ಲಿ ವಿಫಲವಾದ ರಾಜ್ಯ ಸರ್ಕಾರ : ಆರೋಪ            ಜಿಲ್ಲೆಯ ಬರಪೀಡಿತ ಪ್ರದೇಶಗಳ ವಸ್ತುಸ್ಥಿತಿ ಅಧ್ಯಯನ ಮಾಡಲು ಮುಂದಾಗಿರುವ ಬಿಜೆಪಿ ತಂಡ ಗುರುವಾರದಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನವಿಲೆ,ಕೆಂಕೆರೆ,ತಿಮ್ಲಾಪುರ,ಹುಳಿಯಾರು ಸೇರಿದಂತೆ ವಿವಿಧ ಹಳ್ಳಿಗಳಿಗೆ ಭೇಟಿಯಿತ್ತು ಅಲ್ಲಿ ತಲೆದೂರಿರುವ ಸಮಸ್ಯೆಯ ನೈಜಚಿತ್ರಣ ಕಲೆಹಾಕಿತು.                ನಂತರ ಹುಳಿಯಾರಿನ ಪರಿವೀಕ್ಷಣಾ ಮಂದಿರಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕಿನ ಹಾಗೂ ರಾಜ್ಯದ ಬರಪರಿಸ್ಥಿತಿಯ ಸಮಗ್ರ ಚಿತ್ರಣ ನೀಡಿ ಮಾತನಾಡಿದ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ರಾಜ್ಯದ ರೈತರು ಬರಗಾಲದಿಂದ ತತ್ತರಿಸಿದ್ದರೂ ಸಹ ಇದುವರೆಗೂ ಸರ್ಕಾರ ಈ ಬಗ್ಗೆ ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ಹಾಗೂ ಸೂಕ್ತ ಯೋಜನೆಯನ್ನು ರೂಪಿಸದೆ ಸಂಪೂರ್ಣ ವಿಫಲವಾಗಿದೆ ಎಂದು ಕುಟುಕಿದರು. ಹುಳಿಯಾರು ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಮಾತನಾಡಿದರು. ಮಾಜಿ ಶಾಸಕರಾದ ಕೆ.ಎಸ್.ಕಿರಣ್‌ ಕುಮಾರ್‌, ಬಿ.ಸಿ.ನಾಗೇಶ್‌, ಮುಖಂಡರಾದ ಸಿದ್ದರಾಮಯ್ಯ, ಪಂಚಾಕ್ಷರಿ, ನಂದೀಶ್, ನವೀನ್ ಇತರಿದ್ದರು.            ರಾಜ್ಯಾದ್ಯಂತ ಯಾವಯಾವ ಜಿಲ್ಲೆ,ತಾಲ್ಲೂಕುಗಳಲ್ಲಿ ಹೆಚ್ಚು ಬರಪರಿಸ್ಥಿಯಿದೆ ಎಂಬುದರ ಬಗ್ಗೆ

ಮಹಿಳಾ ದೌರ್ಜನ್ಯ ಖಂಡಿಸಿ ಮೆರವಣಿಗೆ

          ದೇಶದೆಲ್ಲೆಡೆ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ದಿನೇ ದಿನೇ ಅತ್ಯಾಚಾರ ಹಾಗೂ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು ಇಂತಹ ಪ್ರಕರಣಗಳನ್ನು ಖಂಡಿಸಿ ಹುಳಿಯಾರಿನ ಶಾಲಾಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಪ್ರಗತಿಪರ ಸಂಘಟನೆಯವರು ಒಟ್ಟಾಗಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಹುಳಿಯಾರಿನ ವಿವಿಧ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ,ಪ್ರಗತಿಪರ ಸಂಘಟನೆಯವರು ಪಟ್ಟಣದ ರಾಮ್ ಗೋಪಾಲ್ ಸರ್ಕಲ್ ನಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.            ಪ್ರಸ್ತುತದಲ್ಲಿ ಬಾಲಕಿಯರ ಮತ್ತು ಮಹಿಳೆಯರ ಮೇಲೆ ಅಮಾನುಷವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟ ಬೇಕು. ಇಂತಹ ಕೃತ್ಯಗಳನ್ನು ಮಾಡೂವ ಅಪರಾಧಿಗಳನ್ನು ಹಿಡಿದು ಉಗ್ರ ಶಿಕ್ಷೆ ವಿಧಿಸಬೇಕು. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಇಂಥ ಘಟನೆಗಳು ಮರುಕಳಿ ಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದೇಶವ್ಯಾಪಿ ಈ ಬಗ್ಗೆ ಜಾಗೃತಿ ಆಂದೋಲನಗಳು ನಡೆಯಬೇಕಿದೆ ಹಾಗೂ ಮಹಿಳೆಯರ ಮೇಲೆ ಈ ರೀತಿ ದೌರ್ಜನ್ಯ ನಡೆಯುತ್ತಿದ್ದರೂ ಸಹ ಉಗ್ರ ಕಾನೂನು ಜಾರಿ ಮಾಡುವಲ್ಲಿ ಸರ್ಕಾರ ವಿಫಲಾಗುತ್ತಿದೆ ಎಂದು ದೂರಿದರು.           ಪಟ್ಟಣದ ಬಸ್ ನಿಲ್ದಾಣ,ರಾಜ್ ಕುಮಾರ್ ರಸ್ತೆ,ಬಿಎಚ್.ರಸ್ತೆ ಮೂಲಕ ಸಾಗಿದ ಮೆರವಣಿಗೆಯಲ್ಲಿ ಮಹ

ಗೆದ್ದವರು ಬೀಗದೆ , ಸೋತವರು ಚಿಂತಿಸದೆ ಮುನ್ನಡೆಯಿರಿ : ಪರಶಿವಮೂರ್ತಿ

         ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪಾಠ ಹೇಗೆ ಮುಖ್ಯವೂ ಅದರಂತೆ ಅವರ ಶಾರೀರಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಆಟೋಟಗಳು ಅಷ್ಟೇ ಮುಖ್ಯವಾಗುತ್ತವೆ ಎಂದು ಜಿಲ್ಲಾ ಪ್ರಾಥಮಿಕಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ತಿಳಿಸಿದರು.           ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ಮರೆನಡುಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವತಿಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಬಿ ವಿಭಾಗದ ಎರಡು ದಿನಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಆರ್.ಪರಶಿವಮೂರ್ತಿ ಉದ್ಘಾಟಿಸಿದರು.          ಪ್ರತಿಯೊಂದು ಆಟದಲ್ಲಿ ಸೋಲು-ಗೆಲುವು ಎನ್ನುವುದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಗೆದ್ದವರು ಬೀಗದೆ , ಸೋತವರು ಚಿಂತಿಸದೆ ಮುನ್ನಡೆಯಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ಇಂತಹ ಕ್ರೀಡಾಕೂಟಗಳಲ್ಲಿ ಮಕ್ಕಳು ಸ್ವಯಂಪ್ರೇರಣೆಯಿಂದ ಭಾಗವಹಿಸಬೇಕು ಎಂದರು. ಹೋಬಳಿ ಮಟ್ಟದಲ್ಲಿ ಗೆದ್ದವರಿಗೆ ತಾಲ್ಲೂಕು,ಜಿಲ್ಲಾ,ರಾಜ್ಯಮಟ್ಟದ ಕ್ರಿಡಾಕೂಟದಲ್ಲಿ ಭಾಗವಹಿಸಬಹುದಾಗಿದ್ದು ಕ್ರೀಡಾಪಟುಗಳು ಶ್ರದ್ಧೆಯಿಂದ ಆಟಗಳನ್ನಾಡುತ್ತಾ, ಶಾಲೆಗೆ,ಊರಿಗೆ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.         ಸಿಆರ್ ಪಿ ಪ್ರೇಮಲೀಲಾ ಮಾತನಾಡಿ ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಕ್ರೀಡಾಕೂಟ ಸೂಕ್ತವೇದಿಕೆಯಾಗ

ನಿವೃತ್ತ ಶಿಕ್ಷಕ ಮಾದಪ್ಪ ಸನ್ಮಾನ

ಹುಳಿಯಾರಿನ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಮಾದಪ್ಪಅವರನ್ನು ಸನ್ಮಾನಿಸಲಾಯಿತು.

ರಾಗಿ ಬಳಕೆಯಿಂದ ಉತ್ತಮ ಆರೋಗ್ಯ ವೃದ್ದಿ : ಮೂಕಪ್ಪ ಪೂಜಾರ್

         ಆಹಾರ ಧಾನ್ಯಗಳಲ್ಲಿ ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ರಾಗಿಯ ಬಳಕೆಯಿಂದ ಯಾವುದೇ ಕಾಯಿಲೆಗಳು ನಮ್ಮತ್ತ ಸುಳಿಯುವುದಿಲ್ಲ ಹಾಗೂ ಆರೋಗ್ಯ ವೃದ್ದಿಯಾಗುತ್ತದೆ ಎಂದು ಬ್ಯಾಡಗಿಯ ಬರಗಾಲ ವಿಜ್ಞಾನಿ ಪ್ರಶಸ್ತಿ ವಿಜೇತ ಮೂಕಪ್ಪ ಪೂಜಾರ್ ತಿಳಿಸಿದರು.           ಹೋಬಳಿಯ ಹೊಯ್ಸಳಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ವತಿಯಿಂದ ಆಯೋಜಿಸಿದ್ದ ರಾಗಿ ಬೇಸಾಯದ ನಾಟಿಪದ್ದತಿ ಕುರಿತ ವಿಚಾರ ಸಂಕಿರ್ಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.   ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯಡಿ ನಡೆದ ರಾಗಿ ಬೇಸಾಯದ ನಾಟಿಪದ್ದತಿ ಕುರಿತ ವಿಚಾರ ಸಂಕಿರಣವನ್ನು . ತಾ.ಪಂ.ಉಪಾಧ್ಯಕ್ಷ ಆರ್.ಪಿ.ವಸಂತಯ್ಯ ಉದ್ಘಾಟಿಸಿದರು.           ಇಂದಿನ ಆಧುನಿಕಯುಗ ಸಿರಿಧಾನ್ಯಗಳ ಬಳಕೆ ಕಡಿಮೆಯಾಗುವಂತೆ ಮಾಡಿದೆ ಎಂದ ಅವರು ಇವುಗಳ ಪೈಕಿ ರಾಗಿ ಹೆಚ್ಚು ಮಹತ್ವವನ್ನು ಪಡೆದಿದೆ. ರಾಗಿಯಿಂದ ಅನೇಕ ಆಹಾರ ಪದಾರ್ಥಗಳನ್ನು ತಯಾರಿಸಬಹುದಾಗಿದ್ದು ಅದರ ಬಳಕೆ ಆಗುತ್ತಿಲ್ಲ ಎಂದು ವಿಷಾಧಿಸಿದರು. ರಾಗಿಯನ್ನು ನಾಟಿಪದ್ಧತಿಯಿಂದ ಅತಿ ಹೆಚ್ಚು ಇಳುವರಿ ಪಡೆಯಬಹುದು ಎಂದ ಅವರು ತಾವೇ ಸ್ವತ: ಒಂದು ಎಕರೆಗೆ 18 ಕ್ಚಿಂಟಲ್ ಬೆಳೆದ ವಿಧಾನವನ್ನು ರೈತರಿಗೆ ಹಾಗೂ ರೈತ ಮಹಿಳೆಯರಿಗೆ ವಿವರಿಸಿದರು.          ತಾ.ಪಂ.ಉಪಾಧ್ಯಕ್ಷ ಆರ್.ಪಿ.ವಸಂತಯ್ಯ ಮಾತನಾಡಿ ಸರ್ಕಾರ ನೀಡುವ ಒಂದ

ಅಧ್ಯಕ್ಷರಾಗಿ ಎಂ.ಎಸ್.ಆರ್ ನಟರಾಜ್ ಆಯ್ಕೆ

       ಹುಳಿಯಾರು ಇಲ್ಲಿನ ಆರ್ಯವೈಶ್ಯ ಮಂಡಳಿಯ 2014-15 ಸಾಲಿನ ಕಾರ್ಯಕಾರಿ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಸರ್ವಸದಸ್ಯರ ಸಮ್ಮುಖದಲ್ಲಿ ವಾಸವಿ ದೇವಾಲಯದಲ್ಲಿ ಭಾನುವಾರದಂದು ನಡೆಯಿತು. ಹುಳಿಯಾರಿನ ಆರ್ಯವೈಶ್ಯ ಮಂಡಳಿಯ ನೂತನ ಅಧ್ಯಕ್ಷ ಎಂ.ಎಸ್.ನಟರಾಜಗುಪ್ತ.           ಅಧ್ಯಕ್ಷರಾಗಿ ಎಂ.ಎಸ್.ನಟರಾಜಗುಪ್ತ, ಉಪಾಧ್ಯಕ್ಷರಾಗಿ ಎಂ.ಎಸ್.ನಾಗರಾಜಗುಪ್ತ ಹಾಗೂ ಎಲ್.ಆರ್.ಚಂದ್ರಶೇಖರ್,ಕಾರ್ಯದರ್ಶಿಯಾಗಿ ಟಿ.ಆರ್.ರಾಮಮೂರ್ತಿ,ಸಹಕಾರ್ಯದರ್ಶಿಯಾಗಿ ಮೋಹನ್ ಕುಮಾರ್,ಖಜಾಂಚಿಯಾಗಿ ಟಿ.ಆರ್.ನಾಗೇಶ್ ಸೇರಿದಂತೆ ನಿರ್ದೇಶಕರುಗಳಾಗಿ ವೇಣುಗೋಪಾಲ್,ಎಸ್.ಎಲ್.ಆರ್.ಪ್ರದೀಪ್, ಗುರುನಾಥ್,ದುರ್ಗರಾಜ್, ಸುಧೀರ್,ರಮೇಶ್, ಕೃಷ್ಣಮೂರ್ತಿ,ರಮೇಶ್ ಗುಪ್ತ,ವಿಶ್ವೇಶ್ವರ ಗುಪ್ತ ಅವರುಗಳು ಆಯ್ಕೆಯಾಗಿದ್ದಾರೆ.

ಆಸ್ಪತ್ರೆ ಸಮಸ್ಯೆ ವಿರುದ್ದ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಘೇರಾವ್

          ವೈದ್ಯರ , ಸಿಬ್ಬಂದಿಯ ಹಾಗೂ ಔಷಧಿಗಳ ಕೊರತೆ ಎದುರಿಸುತ್ತಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಕೆಲ ಗ್ರಾ.ಪಂ ಸದಸ್ಯರು ಹಾಗೂ ಸಾರ್ವಜನಿಕರು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಘೇರಾವ್ ಮಾಡಿದ ಘಟನೆ ಸೋಮವಾರ ನಡೆಯಿತು.         ಹಿನ್ನಲೆ : ಭಾನುವಾರ ರಾತ್ರಿ ಕೆಂಚಮ್ಮನ ತೋಪಿನ ಬಳಿ ನಡೆದ ಅಪಘಾತದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಲ್ಲದೆ ಹಾಗೂ ಸಾಗಿಸಲು ಅಂಬುಲೆನ್ಸ್ ಇಲ್ಲದೆ ತೊಂದರೆಯಾಗಿದ್ದನ್ನು ಮನಗಂಡ ಗ್ರಾ.ಪಂ.ಸದಸ್ಯರುಗಳು ಸೋಮವಾರ ಬೆಳಿಗ್ಗೆ ಆಸ್ಪತ್ರೆ ಬಳಿ ಪ್ರತಿಭಟಿಸಿದರು.         ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಸ್ಥಳಕ್ಕಾಗಮಿಸಿದಾಗ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಆಸ್ಪತ್ರೆಯ ಪ್ರತಿಯೊಂದು ವಿಭಾಗಕ್ಕೆ ಅವರನ್ನು ಕರೆದೊಯ್ದು ಅಲ್ಲಿಯ ಅವ್ಯವಸ್ಥೆಯನ್ನು ಮನಗಾಣಿಸಿದರು. 28 ಜನ ಇರಬೇಕಾದ ಸಿಬ್ಬಂದಿಗೆ ಬರಿ 8 ಜನ ಮಾತ್ರ ಇದ್ದು ಅವರಿಂದ ನಿರ್ವಹಣೆಗೆ ತೊಂದರೆಯಾಗಿದೆ, ಖಾಯಂ ವೈದ್ಯರಿಲ್ಲದೆ ಗುತ್ತಿಗೆ ವೈದ್ಯರನ್ನು ನೇಮಕಮಾಡಿಕೊಂಡಿರುವ ಹಿನ್ನಲೆಯಲ್ಲಿ ರಾತ್ರಿ ವೇಳೆ ವೈದ್ಯರಿಲ್ಲದೆ ಪ್ರಥಮ ಚಿಕಿತ್ಸೆಗೂ ಪರದಾಡುವಂತಾಗಿದೆ ಎಂದು ದೂರಿದರು.          ಆರೋಪ: ಆಸ್ಪತ್ರೆ ಆವರಣದಲ್ಲಿರುವ ಹೆರಿಗೆ ವಾರ್ಡ್ ಯಿದ್ದು ಪ್ರಸೂತಿ ತಜ್ಞರಿಲ್ಲದೆ ಅದನ್ನು ಗೋದಾಮು ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ಆರೋಗ್

ನಿಸ್ವಾರ್ಥ ಸೇವೆಯೇ ರೋಟರಿಯ ಮೂಲಮಂತ್ರ

     ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ತನ್ನ ಮೂಲಮಂತ್ರವಾಗಿಸಿಕೊಂಡು ಸ್ಥಾಪನೆಯಾದ ರೋಟರಿ ಸಂಸ್ಥೆ ಇಂದಿಗೂ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆಗೆ ಖ್ಯಾತಿಯಾಗಿದೆ ಎಂದು ತುಮಕೂರು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಕೆ.ಪಿ.ನಾಗೇಶ್ ಸಂತಸ ವ್ಯಕ್ತಪಡಿಸಿದರು.           ಹುಳಿಯಾರು ಹೋಬಳಿ ರೋಟರಿ ಕ್ಲಬ್ ನ 2014-15ನೇ ಸಾಲಿನ ಕಾರ್ಯಕಾರಿ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿದರು. ಹುಳಿಯಾರು ರೋಟರಿ ಕ್ಲಬ್ ನ ಕಾರ್ಯಕಾರಿ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜಿಲ್ಲಾ ಗವರ್ನರ್ ಕೆ.ಪಿ.ನಾಗೇಶ್ ಉದ್ಘಾಟಿಸಿದರು.        ರೋಟರಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ,ಬಡವರಿಗೆ,ರೋಗಿಗಳಿಗೆ,ಅಂಕವಿಕಲರು ಸೇರಿದಂತೆ ಸಮಾಜದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಅನೇಕ ಜನರಿಗೆ ಸಹಕಾರ ನೀಡುತ್ತ ಸಾಗುತ್ತಿದೆ ಎಂದರುಪಲ್ಸ್ ಪೋಲೀಯೋ .ರೋಟರಿಯ ಮಹತ್ವಪೂರ್ಣ ಸಾಧನೆಯಾಗಿದ್ದು, ಇಂದು ಭಾರತ ಪಲ್ಸ್ ಪೋಲಿಯೋ ಮುಕ್ತ ದೇಶವಾಗಲು ರೋಟರಿಶ್ರಮವೂ ಸಹ ಇದೆ ಎಂದರು. ಹುಳಿಯಾರು ರೋಟರಿ ಸಂಸ್ಥೆಯು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚು ಸದಸ್ಯರು ಸ್ವಯಂಪ್ರೇರಿತರಾಗಿ ಸೇರಿಕೊಂಡು ಸಮಾಜಸೇವೆಯಲ್ಲಿ ತೊಡಗುವಂತೆ ಕರೆ ನೀಡಿದರು.         ರೋಟರಿಯ ನೂತನ ಅಧ್ಯಕ್ಷರನ್ನಾಗಿ

ಬೈಕ್ ಗುದ್ದಿ ಪಾದಚಾರಿಯ ಸಾವು

          ಪಾದಚಾರಿಯೊಬ್ಬನಿಗೆ ಬೈಕ್ ಗುದ್ದಿದ ಪರಿಣಾಮ ಆತ ಸ್ಥಳದಲ್ಲೆ ಮೃತಪಟ್ಟು ಬೈಕ್ ಸವಾರರಿಗೆ ತೀವ್ರ ಗಾಯಗಳಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗ ದಾಖಲಿಸಿದ ಘಟನೆ ಭಾನುವಾರ ರಾತ್ರಿ 8.30 ರ ಸಮಯದಲ್ಲಿ ಕೆಂಚಮ್ಮನ ತೋಪಿನ ಬಳಿ ಸಂಭವಿಸಿದೆ.           ನಾಗಯ್ಯ (60) ಎಂಬಾತನೆ ಮೃತ ದುರ್ದೈವಿಯಾಗಿದ್ದು ಈತ ಪಟ್ಟಣದ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡಿತ್ತಿದ್ದು ರಾತ್ರಿ ಕೆಲಸ ಮುಗಿಸಿಕೊಂಡು ಹಳ್ಳಿಗೆ ತೆರಳುವಾಗ ಬೈಕ್ ಗುದ್ದಿ ಸಾವನಪ್ಪಿರುತ್ತಾನೆ. ಗಾಯಾಳುಗಳಾದ ಪರಪ್ಪ , ಶಿವಣ್ಣ ಅವರುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿದ್ದು, ಹಮಾಲಿ ಲಕ್ಷ್ಮಣನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.ಮೇಲ್ಕಂಡ ಎಲ್ಲರೂ ಲಿಂಗಪ್ಪನಪಾಳ್ಯದವರಾಗಿದ್ದು ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.

ವ್ಯಾಪಾರದಲ್ಲಿ ನಷ್ಟ : ವ್ಯಕ್ತಿ ಆತ್ಮಹತ್ಯೆ

           ವ್ಯಪಾರದಲ್ಲಿ ನಷ್ಟಹೊಂದಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಹೋಬಳಿಯ ಕಲ್ಲೇನಹಳ್ಳಿ ಗ್ರಾಮದಲ್ಲಿ ಭಾನುವಾರ ಘಟಿಸಿದೆ.        55 ವರ್ಷದ ಸಿ.ಭೂತಯ್ಯ ಎಂಬಾತ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದು, ಈತ ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ತರಕಾರಿ ಹಾಗೂ ತೆಂಗಿನ ಕಾಯಿ ವ್ಯಾಪಾರ ಮಾಡುತಿದ್ದು, ವ್ಯಾಪಾರದಲ್ಲಿ ಆದ ನಷ್ಟದಿಂದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಜೂಜು ಅಡ್ಡೆ ಮೇಲೆ ದಾಳಿ

         ಹುಳಿಯಾರು  ಹೋಬಳಿಯ ಕೆಂಕೆರೆ ಹಾಗೂ ಅಮಾನಿಕೆರೆಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಪಟ್ಟಣದ ಪೋಲಿಸರು ಸುಮಾರು 2,080ರೂ ನಗದು ಹಾಗೂ 10ಮಂದಿ ಜೂಜುಕೂರರನ್ನು ಬಂಧಿಸಿದ್ದಾರೆ. ಪಿಎಸೈ ಘೋರ್ಪಡೆ ತಂಡ ಜೂಜು ನಡೆಯುತ್ತಿರುವುದರ ಬಗ್ಗೆ ಸೂಕ್ತ ಮಾಹಿತಿ ಕಲೆಹಾಕಿದ್ದು ಕೆಂಕೆರೆ ಗ್ರಾಮದಲ್ಲಿ ಜೂಜು ನಡೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿ 960ರೂ ನಗದು ಹಾಗೂ 4 ಮಂದಿಯನ್ನು ಹಾಗೂ ಅಮಾನಿಕೆರೆಯ ಮತ್ತೊಂದು ಅಡ್ಡೆಯಲ್ಲಿ ಜೂಜಾಡುತ್ತಿದ್ದ 6 ಮಂದಿ ಮತ್ತು 1,120ರೂ ನಗದನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ನಾಳೆ(ತಾ.21) ಸ್ವಯಂಪ್ರೇರಿತ ರಕ್ತದಾನ ಶಿಬಿರ

      ಹುಳಿಯಾರು  ಇಲ್ಲಿನ ರೋಟರಿ ಕ್ಲಬ್ ಹಾಗೂ ತುಮಕೂರಿನ ಬೆಳ್ಳಿ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಪಟ್ಟಣದ ರೋಟರಿ ಬಾಲಭವನದಲ್ಲಿ ಇಂದು (ತಾ.21) ಸೋಮವಾರ ಮಧ್ಯಾಹ್ನ ನಡೆಯಲಿದೆ. ಶಿಬಿರದಲ್ಲಿ ರಕ್ತದ ಮಹತ್ವ ,ರಕ್ತದಾನದ ಬಗ್ಗೆ ಹಾಗೂ ಯಾವ ವಯಸ್ಸಿನವರು ರಕ್ತದಾನ ಮಾಡಬಹುದು,ಅದರಿಂದ ಆಗುವ ಪ್ರಯೋಜನ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡುವುದಲ್ಲದೆ, ಉಚಿತವಾಗಿ ಬ್ಲೆಡ್ ಗ್ರೂಪ್ ಪರೀಕ್ಷೆ ಮಾಡಿಕೊಡಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ರೋಟರಿ ಅಧ್ಯಕ್ಷ ರವೀಶ್(9448533976), ಕಾರ್ಯದರ್ಶಿ ಗಂಗಾಧರರಾವ್ (845340713) . ಬೆಳ್ಳಿಲೋಕೇಶ್ ಅವರನ್ನು ಸಂಪರ್ಕಿಸಬಹುದಾಗಿದೆ. (ತಾ.21) ಹುಳಿಯಾರು ರೋಟರಿ ಪದಗ್ರಹಣ ಸಮಾರಂಭ -------- ಹುಳಿಯಾರು: ಹೋಬಳಿ ರೋಟರಿ ಕ್ಲಬ್ ನ 2014-15ನೇ ಸಾಲಿನ ಕಾರ್ಯಕಾರಿ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು (ತಾ.21) ಸೋಮವಾರ ಬೆಳಗ್ಗೆ ರೋಟರಿ ಬಾಲಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ತುಮಕೂರು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಕೆ.ಪಿ.ನಾಗೇಶ್ ಹಾಗೂ ಸುರೇಶ್ ಪೈ ಅವರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರಾಗಿ ಈ. ರವೀಶ್ ಹಾಗೂ ಇನ್ನಿತರರು ಪದಗ್ರಹಣ ಮಾಡಲಿದ್ದಾರೆ. ರೋಟರಿ ಕ್ಲಬ್ ನ ಗಂಗಾಧರರಾವ್, ಹನುಮಂತಪ್ಪ,ಗಂಗಾಧರ್, ಅಥೀಕ್, ಕೆ.ಎಸ್.ರಮೇಶ್ ಸೇರಿದಂತೆ ಕ್ಲಬ್ ನ ಸದಸ್ಯರು ಉಪಸ್

ಅನುಭವಗಳ ಲಿಖಿತ ದಾಖಲೆಯೇ ಅನುಭಾವ ಸಾಹಿತ್ಯ : ಶರಣ ಗಂಗಾಧರಯ್ಯ

         ಜೀವರಾಶಿಗಳಲ್ಲಿ ಶ್ರೇಷ್ಠನಾಗಿರುವ ಮಾನವನಿಗೆ ಜೀವನದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಅನುಭವಗಳಿದ್ದು ಅವುಗಳನ್ನು ಲಿಖಿತ ರೂಪದಲ್ಲಿ ದಾಖಲಿಸುವುದೇ ಅನುಭಾವ ಸಾಹಿತ್ಯವೆಂದು ಎಂದು ಬಸವಕೇಂದ್ರ ಶರಣ ಗಂಗಾಧರಯ್ಯ ತಿಳಿಸಿದರು.            ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ನಂದ್ಯಪ್ಪನ ಬಸವರಾಜು ಅವರ ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಮನೆಮನೆಗಳಲ್ಲಿ ಕನ್ನಡ ಕವಿ ಕಾವ್ಯಗೋಷ್ಠಿ ಪಾಕ್ಷಿಕ ಕಾರ್ಯಕ್ರಮದಲ್ಲಿ ಶಿವಶರಣರ ಅನುಭಾವ ಸಾಹಿತ್ಯದ ಬಗ್ಗೆ ಅವರು ಉಪನ್ಯಾಸ ನೀಡಿದರು. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಶರಣ ಗಂಗಾಧರಯ್ಯ ಉಪನ್ಯಾಸ ನೀಡಿದರು.           ಜಾನಪದಕಾರರ ಹಾಡುಗಳಲ್ಲಿ, ವಚನಕಾರರು ರಚಿಸಿದ ಸಾಹಿತ್ಯದಲ್ಲಿಯೂ ಸಹ ನಾವು ಅನುಭಾವದ ಸಾಹಿತ್ಯದ ಪರಂಪರೆಯನ್ನು ಕಾಣಬಹುದಾಗಿದ್ದು, ಅಂದಿನ ಸಮಾಜದಲ್ಲಿ ನಡೆಯುತ್ತಿದ್ದ ಜಾತಿಪದ್ದತಿ, ಅಹಿಂಸಾ ಮಾರ್ಗ ಸೇರಿದಂತೆ ಅನೇಕ ವಿಚಾರಗಳಲ್ಲಿನ ತಮ್ಮ ಅನುಭವವನ್ನು ಸಾಹಿತ್ಯ ರೂಪದಲ್ಲಿ ರಚಿಸುವ ಮೂಲಕ ನಮಗೆಲ್ಲಾ ಉಣಬಡಿಸಿದ್ದಾರೆ. ಅವರು ಹೇಳಿದಂತಹ ಅನೇಕ ವಿಚಾರಗಳನ್ನು ಪ್ರಸ್ತುತದಲ್ಲಿ ಕಾಣಬಹುದಾಗಿದೆ ಎಂದರು.             ಹಿರಿಯರ ಅನುಭವದ ಮಾತಿಗೆ ಮೂಗು ಮುರಿಯುತ್ತಿರುವ ಯುವಪೀಳಿಗೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿ

ಶ್ರದ್ದಾಭಕ್ತಿಯಿಂದ ಕೊಲ್ಲಾಪುರ ಮಹಾಲಕ್ಷ್ಮಿ ಮಂಡಲಪೂಜೆ

             ಹುಳಿಯಾರು  ಹೋಬಳಿ ಜೋಡಿತಿರುಮಲಾಪುರದ ಶ್ರೀಕೊಲ್ಲಾಪುರ ಮಹಾಲಕ್ಷ್ಮಿ ಅಮ್ಮನವರ ಮಂಡಲ ಪೂಜೆ ಭಾನುವಾರದಂದು ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.   ಹುಳಿಯಾರು ಹೋಬಳಿ ಜೋಡಿತಿರುಮಲಾಪುರದ ಶ್ರೀಕೊಲ್ಲಾಪುರ ಮಹಾಲಕ್ಷ್ಮಿ ಅಮ್ಮನವರ ಮಂಡಲ ಪೂಜೆಯ ಅಂಗವಾಗಿ ನಡೆದ ಹೋಮಕಾರ್ಯಕ್ಕೆ ಪೂರ್ಣಾಹುತಿ ಅರ್ಪಿಸಲಾಯಿತು.            ಶ್ರೀಕೊಲ್ಲಾಪುರ ಮಹಾಲಕ್ಷ್ಮಿ ಅಮ್ಮನವರ ನೂತನ ದೇವಾಲಯದ ವಿಮಾನ ಗೋಪುರ ಸ್ಥಾಪನೆ ಹಾಗೂ ಮಹಾಕುಂಭಾಭಿಷೇಕ ನೆರವೇರಿ 48 ದಿನಗಳಾದ ಪ್ರಯುಕ್ತ ಈ ಮಂಡಲ ಪೂಜೆ ನಡೆಸಲಾಗಿದ್ದು, ಭಾನುವಾರ ಮುಂಜಾನೆಯಿಂದಲೇ ಅಮ್ಮನವರಿಗೆ ಪಂಚಾಮೃತಾಭಿಷೇಕ,ಸಹಸ್ರನಾಮಾರ್ಚನೆ ನಡೆದು ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಲಾಗಿತ್ತು, ಅರ್ಚಕರಾದ ಮಂಜುನಾಥ ಶರ್ಮ,ರವಿಶಾಸ್ತ್ರಿ,ಕೃಷ್ಣಮೂರ್ತಿ ಅವರ ಪೌರೋಹಿತ್ಯದಲ್ಲಿ ಗಣಹೋಮ ,ನವಗ್ರಹಹೋಮ, ಲಲಿತ ಹೋಮ ನೆರವೇರಿತು.ಸುಹಾಸಿನಿಯರಿಂದ ಲಲಿತಸಹಸ್ರನಾಮ ಪಠಿಸಲಾಯಿತು. ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನಡೆದ ನಂತರ ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.